More

    ಎಂಪಿ, ಎಂಎಲ್​ಎಗಳಿಗೆ ಶಾಕ್​ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್​ ದಾಖಲಾದ್ರೆ ವಾಪಸ್​ ಪಡೆಯೋದು ಇನ್ನು ಸುಲಭವಲ್ಲ

    ನವದೆಹಲಿ: ಜನಪ್ರತಿನಿಧಿಗಳ ಕೇಸ್​ಗಳನ್ನು ನಡೆಸುವ ಸಂಬಂಧ ಹಲವು ರಾಜ್ಯಗಳಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್​ಗಳು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೇ ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ವಿಶೇಷ ಕೋರ್ಟ್​ಗಳಲ್ಲಿಯೂ ನಡೆಸಲಾಗುತ್ತದೆ.

    ಆದರೆ ಇಂಥ ಕೋರ್ಟ್​ಗಳಲ್ಲಿ ದಾಖಲಾಗಿರುವ ಕೇಸ್​ಗಳ ಪೈಕಿ ಕೆಲವು ಕೇಸ್​ಗಳು ಯಾವ್ಯಾವುದೋ ಕಾರಣಕ್ಕೆ ವಾಪಸ್​ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ.

    ಅದೇನೆಂದರೆ, ಈ ಕೋರ್ಟ್​ಗಳಲ್ಲಿ ದಾಖಲಾಗುವ ಸಂಸದರು, ಶಾಸಕರ ವಿರುದ್ಧದ ಕೇಸ್​ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ. ಒಂದು ವೇಳೆ ಹಾಗೆ ಪಡೆಯುವುದೇ ಆಗಿದ್ದಲ್ಲಿ ಸಂಬಂಧಿತ ರಾಜ್ಯಗಳ ಹೈಕೋರ್ಟ್​ನ ಅನುಮತಿ ಕಡ್ಡಾಯ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ, ನ್ಯಾಯಮೂರ್ತಿಗಳಾದ ವಿನೀತ್ ಶರಣ್‌ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ​ ಹೇಳಿದೆ.
    ಇದರಿಂದಾಗಿ ಈಗ ಶಾಸಕರು, ಸಂಸದರಿಗೆ ಕೋರ್ಟ್​ ಶಾಕ್​ ಕೊಟ್ಟಿದೆ. ಕೇರಳ ಸೇರಿದಂತೆ ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳ ಕೋರ್ಟ್​ಗಳಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳನ್ನು ಏಕಾಏಕಿ ಹಿಂದಕ್ಕೆ ಪಡೆಯುತ್ತಿರುವುದು ಕಂಡುಬಂದಿದೆ.

    ’ಇದೇ ರೀತಿ ಎಂಎಲ್​ಎ, ಎಂಪಿಗಳ ವಿರುದ್ಧ ಈ ಕೋರ್ಟ್​ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಸದ್ಯ ಅದೇ ಸ್ಥಳದಲ್ಲಿ ಮುಂದುವರೆಯಬೇಕು. ಒಂದು ವೇಳೆ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ ಮಾತ್ರ ಈ ನಿಯಮ ಅನ್ವಯ ಆಗುವುದಿಲ್ಲ. ಇಲ್ಲದಿದ್ದರೆ ಅವರು ಸದ್ಯ ಬೇರೆ ಸ್ಥಳಗಳಿಗೆ ವರ್ಗಾವಣೆಯಾಗದೇ ಅಲ್ಲಿಯೇ ಕೇಸನ್ನು ಅಲಿಸಬೇಕು ಎಂದಿದೆ ಕೋರ್ಟ್​. ಈ ಕೇಸ್​ಗಳ ವಿಚಾರಣೆಯನ್ನು ಶೀಘ್ರದಲ್ಲಿ ಮುಗಿಸುವ ಸಂಬಂಧ ಈ ಆದೇಶ ಹೊರಡಿಸಲಾಗಿದೆ.

    ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

    ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts