More

    ಲಸಿಕೆ ಮೂಲಕ ಸೈನಿಕರಿಗೆ ಅತಿಮಾನುಷ ಶಕ್ತಿ ತುಂಬಲಿದೆ ಚೀನಾ- ವಿಶ್ವಕ್ಕೇ ಕಂಟಕ!

    ನವದೆಹಲಿ: ಇಡೀ ಜಗತ್ತಿನ ಕರೊನಾ ವೈರಸ್​ ಎಂಬ ಭಯಾನಕ ಸೋಂಕನ್ನು ಹರಡಿ ಪ್ರತಿಯೊಬ್ಬರ ಬದುಕನ್ನೂ ಅಲ್ಲೋಲ ಕಲ್ಲೋಲ ಮಾಡಿರುವ ಚೀನಾ, ಭಾರತ, ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳ ವೈರತ್ವವನ್ನು ಕಟ್ಟಿಕೊಂಡಿರುವುದು ಹೊಸ ಸುದ್ದಿಯೇನಲ್ಲ.

    ಆದರೆ ಇದೀಗ ಶತ್ರುರಾಷ್ಟ್ರಗಳೊಡನೆ ಹೋರಾಡಲು ತನ್ನ ಸೈನಿಕರ ವಂಶವಾಹಿನಿಯನ್ನೇ ತಿದ್ದಿ, ಅವರಲ್ಲಿ ಅತಿಮಾನುಷ ಶಕ್ತಿ ತುಂಬಿ ಛೂ ಬಿಡುವತ್ತ ಹೆಜ್ಜೆ ಇಟ್ಟಿರುವ ಭಯಾನಕ ವರದಿಯನ್ನು ವಿಶ್ವಸಂಸ್ಥೆ ನೀಡಿದೆ. ಇದಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದು, ಪ್ರಯೋಗ ಕೂಡ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಇತರ ರಾಷ್ಟ್ರಗಳಿಗೆ ಅದರಲ್ಲಿಯೂ ಅಮೆರಿಕಕ್ಕೆ ಭವಿಷ್ಯದಲ್ಲಿ ಭಾರಿ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಸಿಆರ್‌ಐಎಸ್‌ಪಿಆರ್‌ ಸಾಧನದ ಮೂಲಕ ಚೀನವು, ಸೈನಿಕರ ಜೀನ್‌ಗಳನ್ನು ತಿದ್ದುತ್ತಿದೆ ಎಂದು ಅಮೆರಿಕದ ತಜ್ಞರು ಕಳೆದ ವರ್ಷವೇ ಹೇಳಿದ್ದರು. ಆ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿರುವ ವಿಶ್ವಸಂಸ್ಥೆ ಅದನ್ನೀಗ ಖಚಿತಪಡಿಸಿದೆ.

    ಹಾಲಿವುಡ್​ ಸಿನಿಮಾ ನೋಡುವವರಿಗೆ ‘ಸೂಪರ್​ ಸೈನಿಕ’ ತಂತ್ರಜ್ಞಾನ ಹೊಸತೇನಲ್ಲ. ಅದರಲ್ಲಿಯೂ ‘ಕ್ಯಾಪ್ಟನ್‌ ಆಫ್ ಅಮೆರಿಕ’ ಎಂಬ ಚಲನಚಿತ್ರದಲ್ಲಿ ಸೂಪರ್‌ ಸೈನಿಕನ ಪಾತ್ರವಿದೆ. ಆ ಚಿತ್ರದಲ್ಲಿ ಕ್ಯಾಪ್ಟನ್‌ ಸ್ಟೀವ್‌ ರೋಜರ್ಸ್‌ಗೆ ಮಿಲಿಟರಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪ್ರಯೋಗಿಸುವ ಮೂಲಕ ಅತಿಮಾನುಷ ಶಕ್ತಿ ನೀಡಲಾಗುತ್ತದೆ.

    ಇದೇ ಚಿತ್ರದ ಸ್ಫೂರ್ತಿಯೋ ಏನೋ, ಒಟ್ಟಿನಲ್ಲಿ ಚೀನವು ಇದನ್ನು ಯುದ್ಧಭೂಮಿಯಲ್ಲಿ ನಿಜವಾಗಿಸಹೊರಟಿದೆ. ಇಂಥದ್ದೇ ತಂತ್ರಜ್ಞಾನದ ಮೊರೆ ಹೋಗಿರುವ ಚೀನಾ, ತನ್ನ ಸೈನ್ಯದಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜಾನ್‌ ರಾಟ್​ ಕ್ಲಿಫ್ ಅವರು “ವಾಲ್‌ ಸ್ಟ್ರೀಟ್‌ ಜರ್ನಲ್‌’ನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಸ್ತಾರವಾದ ಲೇಖನವನ್ನು ಬರೆದಿರುವ ಅವರು, ಚೀನಾದ ದುರ್ಬುದ್ಧಿಯ ಬಗ್ಗೆ ಇದರಲ್ಲಿ ವಿವರಣೆ ನೀಡಿದ್ದಾರೆ.

    ಸೈನಿಕರ ವಂಶವಾಹಿಗಳನ್ನೇ ತಿದ್ದಿ, ಲಸಿಕೆ ಮೂಲಕ ಅವರಲ್ಲಿ ಅತಿಮಾನುಷ ಶಕ್ತಿ (ಸೂಪರ್​ ಪವರ್​) ತುಂಬುವ ಕೆಲಸಕ್ಕೆ ಚೀನಾ ಇಳಿದಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

    ಸೈನಿಕರನ್ನು ಜೈವಿಕ ಪರೀಕ್ಷೆಗೆ ಒಳಪಡಿಸಿ, ಜೀನ್‌ (ವಂಶವಾಹಿ) ಸಾಮರ್ಥ್ಯ ಅಧ್ಯಯನ ಮಾಡಲಾಗುತ್ತದೆ. ಇವರಲ್ಲಿ ಅರ್ಹರಿಗೆ ಜೀವವರ್ಧಕ ಲಸಿಕೆ ನೀಡಿ ಜೀನ್‌ಗಳನ್ನು ತಿದ್ದುವ ಮೂಲಕ ಸೂಪರ್‌ ಪವರ್‌ ಸೈನಿಕರನ್ನಾಗಿ ರೂಪಿಸಲಾಗುತ್ತದೆ. ಇಂಥವರನ್ನು ಮುಂಚೂಣಿಯ ನೆಲೆಗಳಲ್ಲಿ ಕಾದಾಡಲು ಛೂ ಬಿಡಲಾಗುತ್ತದೆ. ಭವಿಷ್ಯದ ಯುದ್ಧಭೂಮಿಯಲ್ಲಿ ಕಾದಾಡಲು ಇಂಥ ಸೂಪರ್‌ ಸೈನಿಕರನ್ನು ರೂಪಿಸಲು ಚೀನಾ ತಯಾರಿ ನಡೆಸಿದೆ. ಇದಕ್ಕಾಗಿ ಜೈವಿಕ ತಂತ್ರಜ್ಞಾನದ ಮೊರೆ ಹೋಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

    ಒಂದು ವೇಳೆ ಹೀಗಾದರೆ ಎಷ್ಟೇ ಕೊರೆಯುವ ಚಳಿ ಇರಲಿ, ಹಿಮಗಡ್ಡೆಯೇ ಇರಲಿ, ಬಿಸಿಲು, ಮಳೆ ಎಷ್ಟೇ ಘನಘೋರವಾಗಿರಲಿ ಅದು ಸೈನಿಕರಿಗೆ ತಟ್ಟುವುದೇ ಇಲ್ಲ. ಮಾತ್ರವಲ್ಲದೇ ಯಾವ ಸೋಂಕಾಗಲೀ, ಹಸಿವು, ನಿದ್ದೆ, ರೋಗಗಳಾಗಲೀ ಸೈನಿಕರಿಗೆ ಬರುವುದೇ ಇಲ್ಲ ಎನ್ನಲಾಗಿದೆ.

    ಬೆತ್ತಲೆಯಾಗಿ ಲಂಡನ್​ ಸುತ್ತಿದ ಸುಂದರಿ- ಇದರ ಕಾರಣ ಕೇಳಿ ಭೇಷ್ ಎಂದ ನೆಟ್ಟಿಗರು!

    ದಿನದಿಂದ ದಿನಕ್ಕೆ ಕಲ್ಲಾಗಿ ಪರಿವರ್ತನೆಯಾಗುತ್ತಿದೆ ಈ ಬಾಲಕನ ದೇಹ!

    ಸುಪ್ರೀಂಕೋರ್ಟ್​ನಲ್ಲೂ ರಾಗಿಣಿಗೆ ಸಿಗಲಿಲ್ಲ ಬೇಲ್​: ಹೊಸವರ್ಷ ಆಚರಣೆಯೂ ಜೈಲಲ್ಲೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts