More

    ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

    ಮುಂಬೈ: ಸೆಲೆಬ್ರಿಟಿಗಳ ಬಳಕುವ ದೇಹವನ್ನು ನೋಡಿದರೆ ವ್ಹಾ ವ್ಹಾ ಎಂದು ಎಲ್ಲರೂ ಖುಷಿಪಡುತ್ತಾರೆ. ಆದರೆ ಅಭಿಮಾನಿಗಳ ಕಣ್ಣಲ್ಲಿ ಸುಂದರಿಯಾಗಿಯೇ ಇರಲು ಜತೆಗೆ, ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಸಿನಿ ತಾರೆಯರು, ತಮ್ಮ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಮಾಡುವ ಸರ್ಕಸ್​ಗಳು ಅಷ್ಟಿಷ್ಟಲ್ಲ.

    ಸದಾ ಡಯೆಟ್​ ಆಹಾರ, ವ್ಯಾಯಾಮ. ಜಿಮ್ಮು ಅದೂ ಇದೂ ಅಂತೆಲ್ಲಾ ತಲೆಕೆಡಿಸಿಕೊಳ್ಳುವ ಹಲವು ಸಿನಿತಾರೆಯರು ತಮ್ಮ ನೆಚ್ಚಿನ ಆಹಾರಗಳನ್ನೂ ಎಷ್ಟೋ ಬಾರಿ ತ್ಯಾಗ ಮಾಡಬೇಕಾಗಿ ಬರುತ್ತದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Sunny Leone (@sunnyleone)

    ಇದೇ ರೀತಿ ನೀಲಿತಾರೆಯೆಂದೇ ಗುರುತಿಸಿಕೊಂಡಿರುವ ಸುಂದರಿ ಸನಿ ಲಿಯಾನ್​ ಕೂಡ ಸದಾ ಡಯೆಟ್​ ಫುಡ್​ನತ್ತಲೇ ಗಮನ ಹರಿಸುತ್ತಿದ್ದಾರೆ. ವಯಸ್ಸು ಹೆಚ್ಚಿದಂತೆ ತಮ್ಮ ತೂಕದತ್ತ ಗಮನ ಹರಿಸಿ ಬೇಡಿಕೆ ಕುದುರಿಸಿಕೊಳ್ಳಲು ಇದು ಅವರಿಗೆ ಅನಿವಾರ್ಯವೂ ಹೌದು.

    ಆದರೆ ಎದುರಿಗೆ ಪಾನೀಪುರಿ ಘಮಘಮಿಸುತ್ತಿದ್ದರೆ ಡಯೆಟ್​ ಎಲ್ಲಾ ಮರೆತುಹೋಗುತ್ತದೆ ಎನ್ನುವ ಈ ನಟಿ, ತಮ್ಮ ವ್ಯಾನಿಟಿ ವ್ಯಾನ್​ನಲ್ಲಿ ಪಾನೀಪುರಿ ಸವಿಯುವ ದೃಶ್ಯವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸನ್ನಿ ಪಾನೀಪುರಿ ಸವಿಯುತ್ತಿರುವುದನ್ನು ಅವರ ಕೇಶ ವಿನ್ಯಾಸಕಿ ಜೀತಿ ರೆಕಾರ್ಡ್ ಮಾಡಿದ್ದಾರೆ.

    “ತುಮ್ನೆ 12 ಪಾಣಿಪುರಿ ಖಾಯೆ” (ಈಗಾಗಲೇ 12 ಪಾನೀಪುರಿ ತಿಂದಿದ್ದಿಯಾ) ಎಂದು ಸನ್ನಿ ಅವರ ಕೇಶ ವಿನ್ಯಾಸಕಿ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಅದಕ್ಕೆ ಉತ್ತರವಾಗಿ ಸನ್ನಿ, ‘ಜೀತಿ ನೀನು ಸುಳ್ಳುಹೇಳುತ್ತಿದ್ದಿ. ಹೀಗೆಲ್ಲಾ ಸುಳ್ಳು ಹೇಳುವುದು ಒಳ್ಳೆಯದಲ್ಲ, ನಾನಿನ್ನೂ ಎರಡೇ ತಿಂದಿರುವುದು, ಇದು ಮೂರನೆಯದ್ದು ಎಂದು ಇನ್ನೊಂದು ಪಾನೀಪುರಿಯನ್ನು ಬಾಯಿಗೆ ಇಳಿಸಿಕೊಳ್ಳುತ್ತಾರೆ.

    ವ್ಯಾನಿಟಿವ್ಯಾನ್​ನಲ್ಲಿ ಇದ್ದುದು ಮೂರೇ ಪಾನೀಪುರಿ ಎಂಬ ಶೀರ್ಷಿಕೆ ನೀಡಿ ಇದನ್ನು ಅವರು ಶೇರ್​ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

     

     

    ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

    ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!

    https://www.vijayavani.net/s-a-15-year-old-girl-can-reproduce/

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts