More

    ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

    ಮುಂಬೈ: ಗಾಯಕಿಯ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕಾಂಗ್ರೆಸ್​ ಸಚಿವ ಧನಂಜಯ್‌ ಮುಂಡೆ ಅವರನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈಬಿಡಲಾಗದು ಮತ್ತು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

    ಸಾಮಾಜಿಕ ನ್ಯಾಯ ಖಾತೆ ಸಚಿವ ಆಗಿರುವ ಧನಂಜಯ್‌ ಮುಂಡೆ ಅವರ ವಿರುದ್ಧ ಗಾಯಕಿ ರೇಣು ಶರ್ಮಾ ದೂರು ದಾಖಲು ಮಾಡಿದ್ದು, ಸಚಿವರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆ. ಈ ಕುರಿತು ತಾವು ಈ ಹಿಂದೆಯೇ ದೂರು ದಾಖಲು ಮಾಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗಾಯಕಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲಿನ ಅತ್ಯಾಚಾರದ ಕೇಸ್​ ಕುರಿತು ಬರೆದುಕೊಂಡಿದ್ದರು.

    ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್​ ಅವರಿಗೆ ಪತ್ರ ಬರೆದಿದ್ದರು, ಇದೀಗ ನನಗೆ ಜೀವಬೆದರಿಕೆ ಇದೆ. ಪ್ರಭಾವ ಬಳಸಿ ಕಾಂಗ್ರೆಸ್​ ಸಚಿವ ಮುಂಡೆ ನನ್ನ ಜೀವಕ್ಕೆ ಅಪಾಯ ತಂದಿಟ್ಟಿದ್ದಾರೆ ಎಂದು ಗಾಯಕಿ ದೂರಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಂಡೆ, ಗಾಯಕಿ ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದ್ದಾರೆ. 2003ರವರೆಗೂ ನಾನು ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದೆ, ನಮಗೆ ಇಬ್ಬರು ಮಕ್ಕಳಿದ್ದಾರೆ. ಮನೆಯವರೂ ಕೂಡ ನಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದರು. ಇದೀಗ ಅಕ್ಕ-ತಂಗಿ ಸೇರಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

    ಇದರ ಬೆನ್ನಲ್ಲೇ ಇದೀಗ ಗಾಯಕಿ ವಿರುದ್ಧ ಖುದ್ದು ಮುಂಡೆ ಅವರೇ ದೂರು ದಾಖಲು ಮಾಡಿದ್ದಾರೆ. ಇದರ ಜತೆಗೆ, ಇದೀಗ ಈ ಸಚಿವ ಪರವಾಗಿ ಕೆಲವು ನಾಯಕರು ನಿಂತಿದ್ದಾರೆ. ಈ ರೀತಿ ಗಣ್ಯ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡುವುದು ಇಂಥ ಕೆಲವು ಮಹಿಳೆಯರ ಹಳೆಯ ಚಾಳಿ ಎಂದಿದ್ದಾರೆ.

    ಈ ಕುರಿತು ತಾವು ಕೂಡ ಪೊಲೀಸರಲ್ಲಿ ದೂರು ದಾಖಲು ಮಾಡಿರುವುದಾಗಿ ಹೇಳಿದ್ದಾರೆ. ಈ ನಡುವೆಯೇ ತಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ಇತ್ತು ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮಹಿಳಾ ಘಟಕದವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಪತ್ರ ಬರೆದಿದ್ದು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ್ದರು.
    ಬಿಜೆಪಿ ಮುಖಂಡ ಕೃಷ್ಣ ಹೆಗಡೆ ಅವರು ಗುರುವಾರ ಮುಂಬೈ ಮೂಲದ ಮಹಿಳೆಯೊಬ್ಬರು ಕೆಲವು ವರ್ಷಗಳಿಂದ ನನಗೆ ಇದೇ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದರು. ಮುಂಡೆ ಪರವಾಗಿ ಎಲ್ಲರೂ ನಿಂತರು ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಲ್ಲಿ ಅವರನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.

    ಗುರುವಾರ ತಡರಾತ್ರಿ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರ ಮನೆಯಲ್ಲಿ, ಪಕ್ಷದ ಅಧ್ಯಕ್ಷ ಶರದ್‌ ಪವಾರ್ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರು ಸಭೆ ನಡೆಸಿ, ಪ್ರಕರಣದ ಬಗ್ಗೆ ಚರ್ಚಿಸಿ, ಸಚಿವರನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!

    ಅತಿದೊಡ್ಡ ಮಾರುಕಟ್ಟೆಯಿಂದ ಹೊರಬಿತ್ತು ಹಕ್ಕಿಜ್ವರದ ರಿಪೋರ್ಟ್‌- ಚಿಕನ್‌ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌

    ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts