More

    ಹೈಕೋರ್ಟ್​ನಲ್ಲಿ ನ್ಯಾಯ ಸಿಗಲಿಲ್ಲವೆಂದು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಸೋನು ಸೂದ್​

    ನವದೆಹಲಿ: ಜುಹು ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಆರೋಪದ ಮೇರೆಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಎಂಸಿ) ನೀಡಿರುವ ನೋಟಿಸ್ ವಿರುದ್ಧದ ಅರ್ಜಿ ವಜಾ ಮಾಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಟ ಸೂನ್ ಸೂದ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    ಸೋನು ಸೂದ್​ ಬಿಎಂಸಿಯ ಅನುಮತಿ ಇಲ್ಲದೆ, ಜುಹುನಲ್ಲಿ 6 ಮಹಡಿಯ ವಸತಿ ಕಟ್ಟಡವೊಂದನ್ನ ಹೋಟೆಲ್​​ ಆಗಿ ಪರಿವರ್ತಿಸಿದ್ದಾರೆ ಎಂದು ಪಾಲಿಕೆ ಆರೋಪ ಮಾಡಿದೆ. ಈ ಸಂಬಂಧ 2020ರ ಅಕ್ಟೋಬರ್​ನಲ್ಲಿ ಸೋನು ಸೂದ್​ಗೆ ಬಿಎಂಸಿ ನೋಟಿಸ್​ ನೀಡಿತ್ತು. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್‌ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

    ಈ ನೋಟಿಸ್​​​ಗೆ ಸ್ಪಂದಿಸಲು 10 ದಿನಗಳ ಕಾಲಾವಕಾಶ ಬೇಕು. ಅಲ್ಲಿವರೆಗೆ ಕಟ್ಟಡ ತೆರವುಗೊಳಿಸುವ ಕ್ರಮಕ್ಕೆ ಮುಂದಾಗದಂತೆ ಬಿಎಂಸಿಗೆ ನಿರ್ದೇಶಿಸಬೇಕೆಂದು ಕೋರಿ ಸೋನು ಸೂದ್​ ಹೈಕೋರ್ಟ್​ ಅನ್ನು ಕೋರಿದ್ದರು. ಆದರೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್​, ಇಷ್ಟು ದಿನ ನಿಮಗೆ ಸಾಕಷ್ಟು ಕಾಲಾವಕಾಶವಿತ್ತು. ಆದರೆ ನೀವು ತಡ ಮಾಡಿದ್ದೀರಿ. ಚೆಂಡು ಈಗ ಪಾಲಿಕೆ ಅಂಗಳದಲ್ಲಿದೆ. ಅಗತ್ಯವಿದ್ದರೆ ನೀವು ಪಾಲಿಕೆಯ ಮೊರೆ ಹೋಗಬಹುದು ಎಂದು ಹೇಳಿತ್ತು.

    ಈ ಆದೇಶವನ್ನು ಈಗ ಅವರು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಸತಿ ಪ್ರದೇಶವನ್ನು ವಾಣಿಜ್ಯಾತ್ಮಕ ಉದ್ದೇಶಕಕ್ಕೆ ಪರಿವರ್ತಿಸುವ ಅರ್ಜಿಯನ್ನು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗೆ ಒಳಪಟ್ಟು ನಗರಸಭೆ ಆಯುಕ್ತರು ಅನುಮೋದಿಸಿದ್ದಾರೆ ಎಂದು ಸೂದ್ ಅರ್ಜಿಯಲ್ಲಿ ತಿಳಿಸಿದ್ದಾರೆ.

    ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ ಕಾಯ್ದೆ 1966 ರ ಸೆಕ್ಷನ್ 43 (1) ರ ನಿಬಂಧನೆಗಳನ್ನು ಪರಿಗಣಿಸದೆ ಜನವರಿ 13 ರಂದು ಹೈಕೋರ್ಟ್ ಆದೇಶ ನೀಡಿದೆ. ವಸತಿ ಪ್ರದೇಶವನ್ನು, ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವ ಅರ್ಜಿಯನ್ನು 2018ರಲ್ಲಿ ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ಅವರು ತಿಳಿಸಿದ್ದಾರೆ.

    ಕೆಜಿಎಫ್​-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…

    ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

    ಉಪ್ಪಿಟ್ಟಿನ ವಿರುದ್ಧ ಎಡವಟ್ಟು ಪ್ರಶ್ನೆ ಕೇಳಿ ಸಿಕ್ಕಿಹಾಕಿಕೊಂಡ ಸ್ವಿಗ್ಗಿ: ಉಪಮಾಪ್ರಿಯರಿಂದ ಬೈಕಾಟ್​!

    ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts