More

    ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ರನ್ನು ಹಿಂದಿಕ್ಕಿ ಟಾಪ್​ 1 ಆದ್ರು ಸೋನು ಸೂದ್

    ಮುಂಬೈ: ಲಾಕ್​ಡೌನ್​ ದಿನಗಳಿಂದಲೂ ಬಾಲಿವುಡ್​ ನಟ ಸೋನು ಸೂದ್​ ಹೆಸರು ಭಾರಿ ಚಾಲ್ತಿಯಲ್ಲಿದೆ. ಲಾಕ್​ಡೌನ್​ ಸಮಯದಲ್ಲಿ ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಬಡವರಿಗೆ ಹಣಕಾಸು, ವಿದ್ಯಾರ್ಥಿಗಳಿಗೆ ಸಹಾಯ, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು, ರೈತರಿಗೆ ಸಹಾಯ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮನೆಮಾತಾಗಿದ್ದಾರೆ ಸೋನು ಸೂದ್​.

    ಇದೀಗ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದು, ಅದರಲ್ಲಿ ಸೋನು ಸೂದ್​ ಟಾಪ್​ 1 ಪಟ್ಟಿಯಲ್ಲಿದ್ದಾರೆ. ಈ ಮೂಲಕ ಏಷ್ಯಾದ ನಂಬರ್ 1 ಸೆಲೆಬ್ರಿಟಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ಈ ಸ್ಥಾನವನ್ನು ಬಾಲಿವುಡ್​ ತಾರೆಯರಾದ ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ ಮುಂತಾದವರು ಪಡೆದುಕೊಂಡಿದ್ದರು.

    ಸಿನಿಮಾ, ಫ್ಯಾಷನ್​, ಮ್ಯೂಸಿಕ್​ ಇತ್ಯಾದಿ ಕ್ಷೇತ್ರಗಳಿಂದ ಟಾಪರ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ರಿಟನ್​ನ ‘ಈಸ್ಟರ್ನ್ ಐ’ ನಿಯತಕಾಲಿಕೆ ಪ್ರಕಟಿಸಿರುವ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ಇದಾಗಿದೆ. ಭಾರತೀಯ ಮೂಲದ ಯೂಟ್ಯೂಬರ್ ಲಿಲ್ಲಿ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

    ಲಾಕ್​ಡೌನ್​, ಕರೊನಾ ಸಮಯದಲ್ಲಿ ಸೋನು ಸೂದ್​ ಮಾಡಿರುವಷ್ಟು ಸಹಾಯ ಬೇರೆ ಯಾವ ಸೆಲೆಬ್ರಿಟಿ ಕೂಡ ಮಾಡಿಲ್ಲ ಎಂದು ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್ ಹೇಳಿದ್ದಾರೆ. ಇವರ ಸಹಾಯವನ್ನು ಗುರುತಿಸಿ ಅವರಿಗೆ ಬ್ರಿಟನ್‍ನ ‘ಜಿನ್ ಹರ್ಶೋಲ್ಟ್ ಹ್ಯುಮ್ಯಾನಿಟೇರಿಯನ್’ ಪ್ರಶಸ್ತಿ ನೀಡಬೇಕಿದೆ ಎಂದು ಅವರು ಶಿಫಾರಸು ಮಾಡಿದ್ದಾರೆ.

    ಇನ್ನು ಎರಡನೇ ಸ್ಥಾನದಲ್ಲಿರುವ ಯೂಟ್ಯೂಬರ್ ಲಿಲ್ಲಿ ಸಿಂಗ್ ಭಾರೀ ಜನಪ್ರಿಯರಾಗಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ತಮ್ಮದೇ ಆದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅರ್ಮಾನ್​ ಮಲಿಕ್​ 5ನೇ ಸ್ಥಾನ ಹಾಗೂ ಪ್ರಿಯಾಂಕಾ ಛೋಪ್ರಾ 6ನೇ ಸ್ಥಾನ ಗಳಿಸಿದ್ದಾರೆ.

    ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

    ಒಹೋ ಹವಾಯಿ ಚಪ್ಪಲ್ಲಾ ಎಂದು ಕಾಲೆಳೆದವನಿಗೆ ಸ್ಮೃತಿ ಇರಾನಿ ಏನಂದ್ರು ಗೊತ್ತಾ?

    ಸೋನಿಯಾಗಾಂಧಿ ಜೀವನ ಚರಿತ್ರೆ ಪಠ್ಯವಾಗಿಸಲು ಸಿಎಂಗೆ ಮನವಿ ಸಲ್ಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts