More

    ಸೋನಿಯಾಗಾಂಧಿ ಜೀವನ ಚರಿತ್ರೆ ಪಠ್ಯವಾಗಿಸಲು ಸಿಎಂಗೆ ಮನವಿ ಸಲ್ಲಿಕೆ

    ಹೈದರಾಬಾದ್​: ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆಯ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ತೆಲಂಗಾಣದ ಶಾಲೆಯಲ್ಲಿ ಇದನ್ನು ಪಠ್ಯಕ್ರಮದಲ್ಲಿ ಸೇರಿಸುವಂತೆ ಕೋರಲಾಗಿದೆ.

    ಈ ಕುರಿತು ತೆಲಂಗಾನ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರಿಗೆ ಕಾಂಗ್ರೆಸ್​ ಪಕ್ಷದ ವಕ್ತಾರರು ಮನವಿ ಸಲ್ಲಿಸಿದ್ದು, ಪಠ್ಯವಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ನಿನ್ನೆ ಸೋನಿಯಾಗಾಂಧಿಯವರು 74ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಸೋನಿಯಾಗಾಂಧಿಯವರ ಅಪರೂಪದ ಜೀವನ ಚರಿತ್ರೆಯನ್ನು ಮಕ್ಕಳು ಓದುವ ಅಗತ್ಯವಿದೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದದ್ದನ್ನು ನೀಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ ಎಐಸಿಸಿ ವಕ್ತಾರ ಶ್ರವನ್​ ದಾಸೋಜು.

    ಇದನ್ನೂ ಓದಿ: ಮಂಡಿ ನೋವಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರ ಏನಿದೆ?

    ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

    ಸೋನಿಯಾ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂದು ಈ ಹಿಂದೆ ಕೆ ಚಂದ್ರಶೇಖರ್​ ರಾವ್​ ಅವರು ಹೇಳಿರುವ ಮಾತನ್ನೇ ಪುನಃ ನೆನಪಿಸಿರುವ ಎಐಸಿಸಿ, ಸೋನಿಯಾಗಾಂಧಿಯವರ ಪಠ್ಯವನ್ನು ಅಳವಡಿಸುವ ಮೂಲಕ ಅವರಿಗೆ ಈ ರೀತಿಯಾಗಿ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ.

    ತೆಲಂಗಾಣ ರಾಜ್ಯದ ಉದಯದ ಕುರಿತಂತೆ 10ನೇ ವರ್ಗದ ಪಠ್ಯಪುಸ್ತಕದಲ್ಲಿ ರಾವ್​ ಅವರ ಉಪವಾಸದ ಬಗ್ಗೆ ಉಲ್ಲೇಖವಿದ್ದು, ಅದರಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇದು ಸರಿಯಲ್ಲ ಎಂದಿರುವ ಎಐಸಿಸಿ ಈಗ ಅವರ ಜೀವನಚರಿತ್ರೆಯನ್ನು ಮಕ್ಕಳು ಓದಲಿ ಎಂದಿದೆ.

    ಒಹೋ ಹವಾಯಿ ಚಪ್ಪಲ್ಲಾ ಎಂದು ಕಾಲೆಳೆದವನಿಗೆ ಸ್ಮೃತಿ ಇರಾನಿ ಏನಂದ್ರು ಗೊತ್ತಾ?

    ಬೆಲ್ಟ್​ನಿಂದ ಹೊಡೀತಾರೆ, ಬೆರಳನ್ನು ಮುರಿದು ಹಿಂಸಿಸುತ್ತಾರೆ- ಮೃತ ನಟಿಯ ಮೆಸೇಜ್​ ಶೇರ್​ ಮಾಡಿದ ಅಣ್ಣ

    ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts