More

    ಖಾತೆ ತೆರೆಯಲು ಏಕೆ ಸಾಧ್ಯವಾಗಲಿಲ್ಲ? ಎಡವಟ್ಟಾಗಿದ್ದೆಲ್ಲಿ? ವರ್ಚುವಲ್‌ ಸಭೆಯಲ್ಲಿ ಸೋನಿಯಾ ಆತಂಕ

    ನವದೆಹಲಿ: ಕರೊನಾದಿಂದ ದೇಶ ತತ್ತರಿಸಿಹೋಗುತ್ತಿದೆ ನಿಜ. ಇದರ ಮಧ್ಯೆಯೂ ಪಶ್ಚಿಮ ಬಂಗಾಳದಲ್ಲಿ ನಮ್ಮ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ. ಇತ್ತೀಚೆಗೆ ನಡೆದ ಕೇರಳ, ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ಆಗ ಇದ್ದ ಸರ್ಕಾರವನ್ನು ಹೊರಹಾಕಲು ಕಾಂಗ್ರೆಸ್ ಏಕೆ ವಿಫಲವಾಯಿತು ಎಂಬುದನ್ನು ನೋಡಿಕೊಳ್ಳಲೇಬೇಕಿದೆ. ಹಲವಾರು ಕಡೆಗಳಲ್ಲಿ ನಮ್ಮ ಖಾತೆಯನ್ನು ಕೂಡ ತೆರೆಯಲು ಆಗದೇ ಶೂನ್ಯ ಮತದಾನವಾಗಿದ್ದರ ಬಗ್ಗೆಯೂ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಕಾಂಗ್ರೆಸ್‌ ಮಧ್ಯಂತರ ಅಧ್ಯಕ್ಷೆ ಸೋನಿಯಾಗಾಂಧಿ ಆತಂಕ ವ್ಯಕ್ತಪಡಿಸಿದರು.

    ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು, ಫಲಿತಾಂಶದಿಂದ ತೀರಾ ನಿರಾಶರಾಗಿದ್ದೇವೆ ಎಂದು ಹೇಳುವುದು ಸಣ್ಣ ಮಾತಾಗಬಹುದು, ಇದು ಈ ಸಮಯದಲ್ಲಿ ಸರಿಯಾದುದಲ್ಲ. ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಚುನಾವಣೆಯಲ್ಲಿನ ನಮ್ಮ ವೈಫಲ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು.

    ಇದರ ಜತೆಗೆ ಸೋಲು ಅನುಭವಿಸಲು ಕಾರಣಗಳ ಕುರಿತು ಪರಿಶೀಲನೆ ಮಾಡಲು ತಂಡ ರಚಿಸಲಾಗುವುದು ಎಂದು ಹೇಳಿದರು. ವಾಸ್ತವಾಂಶ ನಮಗೆ ಗೊತ್ತಾಗಬೇಕಿದೆ. ನಿರೀಕ್ಷೆಗಿಂತ ಕಳಪೆ ಮಟ್ಟದಲ್ಲಿ ನಮ್ಮ ಸಾಧನೆ ಏಕಾಯಿತು ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರ ಸರಿಯಾದ ಪಾಠ ಕಲಿಯಲು ಸಾಧ್ಯ ಎಂದರು.
    ಬರುವ ಜೂನ್ ತಿಂಗಳ ಕೊನೆಗೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆಯನ್ನು ಈ ಹಿಂದೆ ನಿಗದಿಪಡಿಸಲಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ನಡೆಸುವುದು ಎಂಬ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಯಿತು.

    ಹಿಂದೂಗಳು ತಾಯಿಯ ಅಕ್ಕನ ಮಗನನ್ನು ಮದುವೆ ಆಗುವುದು ಶಿಕ್ಷಾರ್ಹ ಅಪರಾಧವೆ?

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?

    ಕೋವಿಡ್‌ ಸಂಕಷ್ಟಕ್ಕೆ ಮತ್ತೊಮ್ಮೆ ಧಾವಿಸಿದ ಇನ್‌ಫೋಸಿಸ್‌- 100 ಕೋಟಿ ರೂ. ಬಿಡುಗಡೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts