ರೈಲು ನಿಲ್ದಾಣದ ಬಳಿಯಿದ್ದ ಬೃಹತ್ ಮರಗಳ ಹನನ

1 Min Read
ರೈಲು ನಿಲ್ದಾಣದ ಬಳಿಯಿದ್ದ ಬೃಹತ್ ಮರಗಳ ಹನನ
ಅರಸೀಕೆರೆ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಬೆಳೆದಿದ್ದ ಬೃಹತ್ ಗಾತ್ರದ ಹಗಲು ರಾಣಿ ಮರಗಳನ್ನು ಕತ್ತರಿಸಿರುವುದು.

ಅರಸೀಕೆರೆ: ಪಟ್ಟಣದ ರೈಲು ನಿಲ್ದಾಣದ ಮುಂಭಾಗ ಬೆಳೆದಿದ್ದ ಬೃಹತ್ ಗಾತ್ರದ ಹಗಲು ರಾಣಿ ಮರಗಳನ್ನು ಕತ್ತರಿಸುವ ಕಾರ್ಯ ಮಂಗಳವಾರ ಆರಂಭಗೊಂಡಿತು.

ಐದಾರು ದಶಕದಿಂದ ಸಮೃದ್ಧವಾಗಿ ಬೆಳದಿದ್ದ ಮರಗಳು ಲಕ್ಷಾಂತರ ಪ್ರಯಾಣಿಕರಿಗೆ ನೆರಳಿನ ಆಶ್ರಯ ನೀಡುತ್ತಿದ್ದವು. ಸಹಸ್ರಾರು ಹಕ್ಕಿ, ಪಕ್ಷಿಗಳು ಗೂಡು ಕಟ್ಟಿಕೊಂಡು ನೆಮ್ಮದಿ ಕಂಡುಕೊಂಡಿದ್ದವು. ಅಂದಾಜು 39 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟ, ಉದ್ಯಾನವನ, ಎಸ್ಕಲೇಟರ್, ಹೋಟೆಲ್ ಸೇರಿ ಹಲವು ಚಟುವಟಿಕೆಗಳಿಗೆ ಸ್ಥಳ ಗುರುತಿಸಿ ಕಳೆದ ಆಗಸ್ಟ್‌ನಲ್ಲಿ ಅನುಮೋದನೆ ನೀಡಲಾಗಿತ್ತು. ಅಭಿವೃದ್ಧಿ ಹೆಸರಿನಲ್ಲಿ ಇದೀಗ ಮರಗಳ ಹನನ ನಡೆಸುತ್ತಿರುವುದು ಸಹಜವಾಗಿಯೇ ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಮುಂಜಾನೆ, ಸಂಜೆಯಾಗುತ್ತಲೇ ಪಕ್ಷಿ ಚಿಲಿಪಿಲಿಗುಡುತ್ತಿದ್ದ ಪಕ್ಷಿ ಸಂಕುಲ ಬೇರೆಡೆ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ.

See also  ಕ್ವಾರಂಟೈನ್ ತಪ್ಪಿಸಿಕೊಳ್ಳಲು ರೈಲಿನಿಂದ ಹಾರಿದ ಪ್ರಯಾಣಿಕರು!
Share This Article