More

    ಬದುಕುಳಿದ ಏಕೈಕ ಯೋಧ ಬೆಂಗಳೂರಿಗೆ ಶಿಫ್ಟ್‌: ಸಾವಿನ ದವಡೆಯಿಂದ ಆಗಲೂ ಪಾರಾಗಿದ್ದ, ಈಗಲೂ ಗೆದ್ದು ಬರುತ್ತಾನೆ ಎಂದ ತಂದೆ

    ಚೆನ್ನೈ: ತಮಿಳೂನಾಡಿನ ಕುನೂರು ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕಿ ಉಳಿದಿರುವ ಏಕೈಕ ಯೋಧ ಐಎಎಫ್​ ಗ್ರೂಪ್​​ ಕ್ಯಾಪ್ಟನ್​ ವರುಣ್​ ಸಿಂಗ್ ಅವರನ್ನು ಬೆಂಗಳೂರಿಗೆ ಕರೆತರಲು ಸಕಲ ಸಿದ್ಧತೆ ನಡೆಸಲಾಗಿದೆ.

    ತಮಿಳುನಾಡಿನ ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿದೆ. ಈ ಕುರಿತು ಅವರ ತಂದೆ ನಿವೃತ್ತ ಕರ್ನಲ್​ ಕೆ.ಪಿ.ಸಿಂಗ್​ ಖುದ್ದು ಮಾಹಿತಿ ನೀಡಿದ್ದಾರೆ. ಆದರೆ ಈಗಲೂ ಸಾವು ಬದುಕಿನ ನಡುವೆ ಅವರು ಹೋರಾಡುತ್ತಿದ್ದು, ಶೇ 45ರಷ್ಟು ಸುಟ್ಟ ಗಾಯಗಳಾಗಿವೆ.

    ಈ ಬಗ್ಗೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದು, ನಾನೀಗ ಮುಂಬೈನಿಂದ ವೆಲ್ಲಿಂಗ್ಟನ್​ಗೆ ತಲುಪಿದ್ದೇನೆ. ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಆದರೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ ಎಂದಿದ್ದಾರೆ. ಆದರೂ ಬದುಕುಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ತೇಜಸ್​ ಏರ್​ಕ್ರಾಫ್ಟ್​ ಟೆಸ್ಟ್​ ಹಾರಾಟ ನಡೆಸುತ್ತಿದ್ದ ವೇಳೆ ಕೂಡ ಇದೇ ರೀತಿ ಅಪಾಯವಾಗಿತ್ತು. ಅಂದು ಕೂದಲೆಳೆ ಅಂತರದಲ್ಲಿ ಬದುಕಿ ಬಂದಿದ್ದ ವರುಣ್‌. (ಈ ಸಾಹಸಕ್ಕೆ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ) ಈ ಬಾರಿಯೂ ಗೆದ್ದು ಬರುತ್ತಾನೆ ಎಂದಿದ್ದಾರೆ.

    ಕೆ.ಪಿ.ಸಿಂಗ್‌ ಸದ್ಯ ಮುಂಬೈನಲ್ಲಿರುವ ತಮ್ಮ ಕಿರಿಯ ಪುತ್ರ ತನುಜ್ ಮನೆಯಲ್ಲಿದ್ದಾರೆ. ತನುಜ್‌ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್​ ಕಮಾಂಡರ್​. ತಮ್ಮ ಇಬ್ಬರೂ ಪುತ್ರರ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಸಿಂಗ್‌ ಅವರು, ವರುಣ್ ಸಿಂಗ್​ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್​ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

    ವಿಧವೆಯರು, ಮಕ್ಕಳ ಬಾಳಿಗೆ ಬೆಳಕಾಗಿದ್ದರು ರಾವತ್‌ ಪತ್ನಿ: ಅನಾಥವಾಗೋಯ್ತು ಅನಾಥಾಶ್ರಮ- ಎಲ್ಲೆಡೆ ಕಣ್ಣೀರಧಾರೆ

    ರಾವತ್‌ ಜೀವಕ್ಕೆ ಕುತ್ತಾಗೋಯ್ತಾ ಕೊನೆಕ್ಷಣದ ಆ ನಿರ್ಧಾರ? ರಸ್ತೆ ಮಾರ್ಗಕ್ಕೆ ವ್ಯವಸ್ಥೆಯಾಗಿದ್ದಾಗ ಹೆಲಿಕಾಪ್ಟರ್‌ ಏರಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts