More

    ಹಾವಿನ ದ್ವೇಷ… ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗುತ್ತಿದ್ದಂತೆಯೇ ಕುಟುಂಬಸ್ಥರನ್ನು ಮತ್ತೆ ಮತ್ತೆ ಕಚ್ಚುವ ನಾಗರ!      

    ಚಂದ್ರಗಿರಿ (ಆಂಧ್ರಪ್ರದೇಶ): ಹಾವಿನ ದ್ವೇಷ 12 ವರುಷ ಎನ್ನುವ ಪ್ರಸಿದ್ಧ ಹಾಡೊಂದು ನಾಗರಹಾವು ಚಿತ್ರದಲ್ಲಿದೆ. ನಿಜವಾಗಿಯೂ ಹಾವು ದ್ವೇಷವನ್ನು ಇಟ್ಟುಕೊಂಡಿರುತ್ತದೆ, ತನ್ನ ಇರುವಿಕೆಗೆ ಧಕ್ಕೆ ತಂದವರಿಗೆ ಅಥವಾ ಹಾನಿಗೊಳಿಸಿದರೆ, ನಾಗರಹಾವು ದ್ವೇಷ ಸಾಧಿಸುತ್ತದೆ ಎಂಬ ನಂಬಿಕೆ ತಲೆತಲಾಂತರಗಳಿಂದ ಬಂದಿದೆ. ನಾಗದೋಷದ ಮುಕ್ತಿಗಾಗಿ ದೇವರ ಮೊರೆ ಹೋಗುವುದೂ ಇದಕ್ಕಾಗಿಯೇ.

    ಆಧುನಿಕ ವಿಜ್ಞಾನ ಏನೇ ಹೇಳಿದರೂ, ನಂಬಿಕೆಗಳನ್ನು ನಂಬದಿದ್ದರೂ ಕೆಲವೊಮ್ಮೆ ಘಟಿಸುವ ಘಟನೆಗಳು ಯಾರ ಊಹೆಗೂ ನಿಲುಕದ್ದಾಗಿರುತ್ತದೆ.

    ಅಂಥದ್ದೇ ಒಂದು ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ ನಡೆದಿದೆ. ಒಂದು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಹಾವು ಕಚ್ಚಿದೆ.

    ವೆಂಕಟೇಶ್ ಮತ್ತು ವೆಂಕಟಮ್ಮ ದಂಪತಿ ಕುಟುಂಬಸ್ಥರಿಗೆ ಹಾವಿನ ಸಮಸ್ಯೆ ಎದುರಾಗಿದೆ. ಡೋರ್ನಕಂಬಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ಮಗ ಜಗದೀಶ್ ಜತೆ ಈ ದಂಪತಿ ನೆಲೆಸಿದ್ದಾರೆ. ಅದೇನಾಗಿಯೋ ಗೊತ್ತಿಲ್ಲ. ಆದರೆ ಕೆಲ ದಿನಗಳ ಹಿಂದೆ ಇವರು ಮನೆಯಲ್ಲಿದ್ದಾಗ ಹಾವೊಂದು ಬಂದು ಮೂವರನ್ನೂ ಕಚ್ಚಿದೆ.

    ಕೂಡಲೇ ಸ್ಥಳೀಯರು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿ ಬಂದಿದ್ದಾರೆ. ಆದರೆ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗುತ್ತಿದ್ದಂತೆಯೇ, ಎಲ್ಲಿಯೋ ಇದ್ದ ಹಾವು ಪುನಃ ಬಂದು ಕಚ್ಚಿದೆ. ಮತ್ತೊಮ್ಮೆ ಎಲ್ಲರಿಗೂ ಚಿಕಿತ್ಸೆ ನೀಡಲಾಗಿತ್ತು. ಮತ್ತೆ ಮನೆಗೆ ಬಂದಾಗ ಇದೇ ಸಮಸ್ಯೆ ಎದುರಾಗಿದೆ.

    ಇದೀಗ ಆಸ್ಪತ್ರೆಗೆ ಹೋಗಿ ಪ್ರಾಣ ಉಳಿಸಿಕೊಂಡಿರುವ ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ. ಕೃಷಿಕರಾಗಿರುವ ಈ ಕುಟುಂಬಸ್ಥರು ತಮ್ಮ ಕೃಷಿಭೂಮಿಯಲ್ಲಿ ನಾಗರಹಾವಿಗೆ ಹಾನಿ ಮಾಡಿರುವ ಕಾರಣ, ಹೀಗೆ ಸಮಸ್ಯೆ ಆಗುತ್ತಿರುವುದಾಗಿ ಅನೇಕ ಮಂದಿ ಹೇಳುತ್ತಿದ್ದಾರೆ. ಆದರೆ ಆ ಹಾವು ಮಾತ್ರ ಕಣ್ಣಿಗೆ ಕಾಣಿಸಿಕೊಳ್ಳದೇ ಪದೇ ಪದೇ ಕಚ್ಚುತ್ತಿದೆ.

    ಇದೀಗ ಈ ಕುಟುಂಬ ಹಾವಿನ ಕಿರುಕುಳದಿಂದ ತಮಗೆ ಮುಕ್ತಿ ದೊರಕಿಸಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಅಣ್ಣ ‘ರಾಷ್ಟ್ರಪತಿ’, ತಮ್ಮ ‘ಪ್ರಧಾನ ಮಂತ್ರಿ’: ಹುಟ್ಟುತ್ತಲೇ ಪ್ರತಿಷ್ಠಿತ ಹುದ್ದೆ! ಏನಿದರ ಅಸಲಿಯತ್ತು?

    VIDEO: ಸಮಸ್ತ ಕನ್ನಡಿಗರಿಗೆ ನಮಸ್ಕಾರ… ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts