More

    40ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ, ಮೂವರು ಮಕ್ಕಳ ರಕ್ಷಣೆ

    ಕಂಪ್ಲಿ: ಬಾಲಕಾರ್ಮಿಕರ ಪತ್ತೆಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ಪಟ್ಟಣದಲ್ಲಿ 40ಕ್ಕೂ ಅಧಿಕ ಅಂಗಡಿ, ಗ್ಯಾರೇಜ್, ಹೋಟೆಲ್‌ಗಳಿಗೆ ಗುರುವಾರ ದಾಳಿ ನಡೆಸಿ ಮೂವರು ಮಕ್ಕಳನ್ನು ರಕ್ಷಿಸಲಾಗಿದೆ.

    ಕಾರ್ಮಿಕ ನಿರೀಕ್ಷಕ ಎಂ.ಆಶೋಕ ಮಾತನಾಡಿ, ಬಟ್ಟೆ ಅಂಗಡಿ, ಗುಜರಿ, ಗ್ಯಾರೇಜೊಂದರಲ್ಲಿ ಕೆಲಸನಿರತ ಮೂವರು ಮಕ್ಕಳನ್ನು ಪತ್ತೆ ಮಾಡಲಾಗಿದೆ.ಇವರ ವಯಸ್ಸು, ಶಾಲೆ ಬಿಟ್ಟ ಬಗ್ಗೆ ದಾಖಲೆಯೊಂದಿಗೆ ವರದಿ ನೀಡುವಂತೆ ಶಿಕ್ಷಣ ಸಂಯೋಜಕರಿಗೆ ಸೂಚಿಸಿದೆ. ವರದಿ ಪಡೆದು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಅಂಗಡಿಗಳ ನೋಂದಣಿ ಮತ್ತು ನೋಂದಣಿ ನವೀಕರಣ ಮಾಡಿಸದ ಅಂಗಡಿಗಳ ಮಾಲೀಕರಿಗೆ, ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ ಆರು ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಶಿವರಾಜ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಬಳ್ಳಾರಿಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಎ.ಮೌನೇಶ್, ತಾಪಂ ಐಇಪಿ ಸಂಯೋಜಕ ಹನುಮೇಶ್ ಹಾಗಲೂರು ಹೊಸಳ್ಳಿ, ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಂ, ಇಸಿಒಗಳಾದ ಟಿ.ಎಂ.ಬಸವರಾಜ, ಜಿ.ವೀರೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಪೊಲೀಸ್ ಪೇದೆ ದತ್ತಾತ್ರೇಯ ಲೋಹರ್, ಚೈಲ್ಡ್‌ಲೈನ್ ಸಂಯೋಜಕಿ ನೇತ್ರಾ, ಕಿರಿಯ ಆರೋಗ್ಯ ನಿರೀಕ್ಷಕಿ ಜೀವನ್‌ಸ್ವಾತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts