More

    ಸ್ಮೃತಿ ಸವಾಲ್‌: ತಾಕತ್ತಿದ್ರೆ ಗುಜರಾತ್‌ನಿಂದ ಗೆದ್ದು ತೋರಿಸಿ- ಆಮೇಲೆ ಟೀ ಮಾಲೀಕರ ವಿರುದ್ಧ ಹೇಳುವಿರಂತೆ

    ಗಾಂಧಿನಗರ (ಗುಜರಾತ್‌): ಅಸ್ಸಾಂನಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಸಂಸದ ರಾಹುಲ್ ಗಾಂಧಿ, ’ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಚಹಾ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸುತ್ತೇನೆ. ಚಹಾ ತೋಟದ ಮಾಲೀಕರು ಆ ಹಣವನ್ನು ನೀಡುವಂತೆ ಮಾಡುತ್ತೇನೆ ಎಂದು ಹೇಳಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್‌ ಗಾಂಧಿಗೆ ಭಾರಿ ಸವಾಲು ಎಸೆದಿದ್ದಾರೆ.

    ಗುಜರಾತ್‌ನ ನವಸಾರಿ ಜಿಲ್ಲೆಯ ವನ್ಸದಾ ನಗರದಲ್ಲಿ ಪ್ರಚಾರ ಮೆರವಣಿಗೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ’ಈ ಹಿಂದೆ ಕಾಂಗ್ರೆಸ್‌ನವರಿಗೆ ಟೀ ಮಾರುವವರ ಬಗ್ಗೆ (ನರೇಂದ್ರ ಮೋದಿ) ಆಕ್ಷೇಪವಿತ್ತು. ಇದೀಗ ಚಹಾ ಕುಡಿಯುವವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

    ತಾಕತ್ತಿದ್ದರೆ ಮೊದಲು ಗುಜರಾತ್​ನಿಂದ ಸ್ಪರ್ಧೆ ಮಾಡಿ, ಆಮೇಲೆ ಬೇಕಿದ್ದರೆ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡ್ವೀರಂತೆ ಎಂದು ಕಿಡಿ ಕಾರಿದ್ದಾರೆ. ನಿಮಗೆ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧೆ ಮಾಡಿ. ಆಗ ನಿಮ್ಮ ಎಲ್ಲಾ ತಪ್ಪು ತಿಳಿವಳಿಕೆಗಳೂ ಕೊನೆಯಾಗುತ್ತವೆ ಎಂದು ಸ್ಮೃತಿ ಹೇಳಿದ್ದಾರೆ.

    ಗುಜರಾತ್‌ ಹಾಗೂ ಗುಜರಾತ್ ಜನರ ಮೇಲೆ ಕಾಂಗ್ರೆಸ್‌ ದ್ವೇಷ ಹಾಗೂ ಪೂರ್ವಗ್ರಹ ಪೀಡಿತವಾಗಿದೆ. ಇದೇನೂ ಹೊಸ ವಿಷಯವಲ್ಲ. ರಾಹುಲ್ ಗಾಂಧಿ ಹಾಗೂ ಅವರ ಪಕ್ಷ ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ‘ನೆನಪಿದೆಯೇ ಮೊದಲಾ ಡೇಟಿಂಗ್‌’ ಎಂದ ದಂಪತಿ ಕೊಟ್ಟ ಟಿಪ್ಸ್‌‌ ನೋಡಿ ಕಣ್‌ಕಣ್‌ಬಿಟ್ಟ ಹೋಟೆಲ್‌ ಸಿಬ್ಬಂದಿ

    ಮಹಿಳೆಯಾಗುವ ಮುನ್ನ ವೀರ್ಯ ಸಂರಕ್ಷಿಸಿಟ್ಟ ದ್ವಿಲಿಂಗಿ ವೈದ್ಯೆ: ಭವಿಷ್ಯದಲ್ಲಿ ಅಮ್ಮನಾಗುವ ಯೋಚನೆ

    ಹಾಲಿನ ವ್ಯವಹಾರ ನಡೆಸಲು 30 ಕೋಟಿ ರೂ. ಹೆಲಿಕಾಪ್ಟರ್‌ ಖರೀದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts