More

    ಮುಗುಳ್ನಗೆ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ… ಹೇಳಿದ್ದೇನು ಗೊತ್ತೆ?!

    ನವದೆಹಲಿ : ಕೇಂದ್ರ ಸಚಿವರಾಗಿ ಎಷ್ಟೋ ಮಹಿಳೆಯರಿಗೆ ಮಾದರಿಯಾಗಿರುವ ಸ್ಮೃತಿ ಇರಾನಿ ಅವರ ಹೊಸ ಇನ್​ಸ್ಟಾಗ್ರಾಂ ಪೋಸ್ಟ್​ ಅವರ ಅಭಿಮಾನಿಗಳ ಮನಸೂರೆಗೊಂಡಿದೆ. ತಮ್ಮದೊಂದು ಮುಗುಳ್ನಗೆಯ ಫೋಟೋ ಮತ್ತು ಸರಳವಾದ ಶಬ್ದಗಳಲ್ಲಿ ಗಾಢ ಅರ್ಥ ನೀಡುವ ಮಾತೊಂದನ್ನು ಹಂಚಿಕೊಂಡು, ಅವರು ನೆಟ್ಟಿಗರ ಹುಬ್ಬೇರಿಸಿದ್ದಾರೆ.

    ವರ್ಷಗಳ ಹಿಂದೆ ‘ಕ್ಯೂಂಕಿ ಸಾಸ್​ ಭಿ ಕಭೀ ಬಹು ಥೀ’ ಹಿಂದಿ ಧಾರಾವಾಹಿಯಲ್ಲಿ ಮಾದರಿ ಸೊಸೆಯ ರೂಪದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡು ಜನರ ಮನ ಗೆದ್ದಿದ್ದರು ಸ್ಮೃತಿ ಇರಾನಿ. ನಂತರ ಬಿಜೆಪಿಯ ಪ್ರಮುಖ ಮಹಿಳಾ ನಾಯಕಿಯಾಗಿ, ಕೇಂದ್ರದ ಟೆಕ್ಸ್​ಟೈಲ್ಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಇರಾನಿ, ಸಾರ್ವಜನಿಕ ಜೀವನದಲ್ಲಿ ಹೆಸರು ಮಾಡಿದ್ದಾರೆ. ಸಹಜವಾಗಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಫೋಟೋ ಮತ್ತು ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.

    ಇದನ್ನೂ ಓದಿ: ಅಮಿತ್​ ಷಾ ರಾಲಿಯಲ್ಲಿ ಹಿರಿಯ ಟಿಎಂಸಿ ಸಂಸದ ಸಿಸಿರ್ ಅಧಿಕಾರಿ !

    ಇಂದು ಬೆಳಿಗ್ಗೆ ‘ಗ್ಯಾನ್ ಫ್ರಂ ಗೂಗಲ್ ಬಾಬಾ’ ಎನ್ನುತ್ತಾ ಪ್ರೇರಣಾದಾಯಕ ಸುಭಾಷಿತದೊಂದಿಗೆ ತಮ್ಮ ನಗುಮೊಗದ ಫೋಟೋ ಶೇರ್ ಮಾಡಿದ್ದಾರೆ. ಸಂತಸಪೂರ್ಣ ಭಾನುವಾರಕ್ಕೆ ಇದುವೇ ಗುಟ್ಟು ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಮೂರು ಗಂಟೆಗಳಲ್ಲೇ 37 ಸಾವಿರ ಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಜೊತೆಗೆ ಹಲವರ ಸಕಾರಾತ್ಮಕ ಕಾಮೆಂಟುಗಳ ಸುರಿಮಳೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Smriti Irani (@smritiiraniofficial)

    ಮಿಲಿಯನ್ ಡಾಲರ್ ಸ್ಮೈಲ್ ಎನ್ನುವಂತಹ ನಗುವನ್ನು ಮುಖದ ಮೇಲರಳಿಸಿಕೊಂಡಿರುವ ಇರಾನಿ, “ಕೀಪ್ ಸ್ಮೈಲಿಂಗ್ ಅಂಡ್ ಒನ್ ಡೇ ಲೈಫ್ ವಿಲ್ ಗೆಟ್ ಟೈರ್ಡ್ ಆಫ್ ಅಪ್​ಸೆಟ್ಟಿಂಗ್ ಯು” ಎಂಬ ಪ್ರೇರಣಾದಾಯಕ ಖೋಟ್​ಅನ್ನು ಶೇರ್ ಮಾಡಿದ್ದಾರೆ. ‘ಮುಗುಳ್ನಗೆ ಬೀರುತ್ತಿರಿ… ಒಂದು ದಿನ ಜೀವನ ನಿಮಗೆ ತೊಂದರೆ ಕೊಟ್ಟು ಕೊಟ್ಟು ತಾನೇ ಸುಸ್ತಾಗುತ್ತದೆ’ ಎಂಬ ಅರ್ಥ ಬರುವ ಈ ಖೋಟ್​ಅನ್ನು ಗೂಗಲ್​ನಿಂದ ಪಡೆದಿದ್ದಾಗಿ ಇರಾನಿ ಹೇಳಿದ್ದಾರೆ. ‘ಇದು ಹ್ಯಾಪಿ ಸಂಡೇಗೆ ಗೂಗಲ್ ಬಾಬಾರ ಗ್ಯಾನ್’ ಎಂದಿದ್ದಾರೆ! (ಏಜೆನ್ಸೀಸ್)

    ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !

    ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts