More

    ಕನಕದುರ್ಗ ರಥದ ಬೆಳ್ಳಿ ಸಿಂಹಗಳು ಮಿಸ್ಸಿಂಗ್​! ರಥ ಸುಟ್ಟ ಬೆನ್ನಲ್ಲೇ ಆಘಾತ- ತನಿಖೆಗೆ ಒತ್ತಾಯ

    ವಿಜಯವಾಡ (ಆಂಧ್ರಪ್ರದೇಶ): ಇಲ್ಲಿಯ ಕನಕದುರ್ಗ ದೇವಸ್ಥಾನದ ರಥಕ್ಕೆ ಅಳವಡಿಸಲಾಗಿದ್ದ ಬೆಳ್ಳಿ ಸಿಂಹಗಳ ಮೂರು ಪ್ರತಿಮೆಗಳು ಕಾಣೆಯಾಗಿವೆ. ಇದೇ 6ರಂದು ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ರಥವನ್ನು ಸುಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಇನ್ನೊಂದು ದೇವಾಲಯದ ರಥದ ಸಿಂಹಗಳು ಕಾಣೆಯಾಗಿರುವುದು ಆತಂಕ ಸೃಷ್ಟಿಸಿದೆ.

    ಆದರೆ ಇವುಗಳು ಹೇಗೆ ಕಾಣೆಯಾಗಿವೆ ಎಂಬ ಬಗ್ಗೆ ಆಡಳಿತಮಂಡಳಿಯಲ್ಲಿಯೇ ಗೊಂದಲಗಳು ಇದ್ದು, ಆದರೆ ಪ್ರತಿಪಕ್ಷಗಳು ತನಿಖೆಗೆ ಆಗ್ರಹಿಸಿವೆ.

    ದೇವಾಲಯದ ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ ಪ್ರತಿಮೆಗಳನ್ನು ಮೂರು ಕೆ.ಜಿ ಬೆಳ್ಳಿಯಿಂದ ಮಾಡಲಾಗಿದೆ. ಒಟ್ಟೂ ನಾಲ್ಕು ಪ್ರತಿಮೆಗಳು ಇದ್ದವು, ಅದರಲ್ಲಿ ಇದೀಗ ಒಂದೇ ಪ್ರತಿಮೆ ಇದ್ದು, ಉಳಿದ ಮೂರು ಕಾಣೆಯಾಗಿವೆ. ಆದರೆ ಇದು ಕಳುವಾಗಿದೆಯೇ ಎಂಬ ಬಗ್ಗೆ ಅಧಿಕೃತವಾಗಿ ಯಾರೂ ದೃಢೀಕರಿಸಿಲ್ಲ.

    ಇದನ್ನೂ ಓದಿ: ಶತಮಾನದಷ್ಟು ಹಳೆಯ ಅಮರಾವತಿ ರಥ ಬೆಂಕಿಗಾಹುತಿ: ಪತ್ತೆಯಾಗದ ಕಾರಣ

    ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ರಥವನ್ನು ಸುಡಲಾಗಿತ್ತು. ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಬಿಜೆಪಿ ಹಾಗೂ ಜನಸೇನಾಗಳ ಮುಖಂಡರು ಇದೇ 10ರಂದು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು.

    ಅದಕ್ಕೆ ಸಂಬಂಧಿಸಿದಂತೆ, ಪೊಲೀಸರು ಎಲ್ಲಾ ದೇವಾಲಯಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ, ಕನಕದುರ್ಗಾ ದೇವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇವಾಲಯದಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದರು.
    ಸಭೆಯ ದೇವಾಲಯದ ಅಧಿಕಾರಿಗಳು ಪೊಲೀಸರೊಂದಿಗೆ ದೇವಾಲಯದ ಆವರಣದಲ್ಲಿ ಬೆಳ್ಳಿ ರಥವನ್ನು ಪರಿಶೀಲಿಸಿದಾಗಲೇ ಸಿಂಹಗಳ ಪ್ರತಿಮೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

    ಕಳೆದ ವರ್ಷ ತೆಲುಗು ಹೊಸ ವರ್ಷದ ಉಗಾಡಿ ಹಬ್ಬದ ನಂತರ ಈ ವರ್ಷ ಕರೊನಾದಿಂದಾಗಿ ರಥವನ್ನು ಮುಚ್ಚಿಡಲಾಗಿತ್ತು. ಸುಮಾರು 18 ತಿಂಗಳು ಇದನ್ನು ಮಲ್ಲಿಕಾರ್ಜುನ ಮಹಾಮಂಟಪದಲ್ಲಿ ಇರಿಸಲಾಗಿದೆ.

    ಆದರೆ ಇದರಲ್ಲಿ ಆಗ ಎಷ್ಟು ಸಿಂಹಗಳು ಇದ್ದವು, ಮುಚ್ಚಿಡುವ ಸಂದರ್ಭದಲ್ಲಿ ಅವುಗಳನ್ನು ರಿಪೇರಿಗಾಗಿ ನೀಡಲಾಗಿದೆಯೇ ಅಥವಾ ತೆಗೆದು ಲಾಕರ್‌ನಲ್ಲಿ ಇರಿಸಲಾಗಿದೆಯೇ ಅಥವಾ ನಿಜವಾಗಿಯೂ ಕಳ್ಳತನವಾಗಿದೆಯೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲಿಯೇ ಸದ್ಯ ಗೊಂದಲವಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಾಬು ಹೇಳಿದ್ದಾರೆ.

    ಆದರೆ, ರಾಜ್ಯದ ಬಿಜೆಪಿ ಘಟಕ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಅವರು ಇಂದು ರಾಜ್ಯಪಾಲ ಬಿಸ್ವಾಭೂಸನ್ ಹರಿಚಂದನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಕಳೆದು ಹೋದ ಫೋನ್​ ಸಿಕ್ಕಾಗ ಅದರಲ್ಲಿತ್ತು ಭಯಾನಕ ಸೆಲ್ಫಿ!

    ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts