More

    ನೆಗೆಟಿವ್‌ ಬಂದರೂ ನಿಲ್ಲದ ಜ್ವರ: ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸೋಮವಾರ (ಮೇ 31) ರಾತ್ರಿಯಿಂದ ಜ್ವರದಿಂದ ಬಳಲುತ್ತಿರುವ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಳೆದ ವರ್ಷದ ಆಗಸ್ಟ್‌ನಲ್ಲಿ ಕರೊನಾ ಸೋಂಕಿನಿಂದ ಸಿದ್ದರಾಮಯ್ಯ ಗುಣಮುಖರಾಗಿದ್ದರು. ಈ ಬಾರಿ ಪುನಃ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಎಂದು ಬಂದಿದೆ. ಆದರೆ ಇದರ ಹೊರತಾಗಿಯೂ ಜ್ವರ ನಿಲ್ಲುತ್ತಿಲ್ಲ. ಆದ್ದರಿಂದ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

    ಇಂದು ಬೆಳಗ್ಗೆ ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ಆದರೆ ಜ್ವರ ಹೆಚ್ಚಾದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ಯಾಮಿಲಿ‌ ಡಾಕ್ಟರ್ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ತೆರಳಿರುವುದಾಗಿ ಹೇಳಲಾಗಿದೆ. ಆಸ್ಪತ್ರೆಗೆ ಸಿದ್ದರಾಮಯ್ಯ ಅವರ ಜತೆ ಕುಟುಂಬಸ್ಥರು ಆಗಮಿಸಿದ್ದಾರೆ. ಇವರ ಮಗ ಶಾಸಕ ಡಾ.ಯತೀಂದ್ರ ಕೂಡ ವೈದ್ಯರಾಗಿದ್ದು, ತಂದೆಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

    ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?

    ಜನಸಂಖ್ಯೆಯಲ್ಲಿ ಟಾಪ್‌ 1ನಲ್ಲಿರೋ ಚೀನಾದಲ್ಲಿ ಇನ್ಮುಂದೆ ಒಂದಲ್ಲ, ಎರಡಲ್ಲ…. ಮೂರು ಮಕ್ಕಳಾಗ್ಬೋದು!

    ಲಾಕ್‌ಡೌನ್‌ನಲ್ಲಿ ರಸ್ತೆಯ ಮೇಲೆ ಏಲಿಯನ್‌? ಬೆಚ್ಚಿಬಿದ್ದ ವಾಹನ ಸವಾರರು: ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts