More

    ಎಲ್ಲ ಮಾದರಿಯ ಕ್ರಿಕೆಟ್‌ಗೆ ವೇಗಿ ಶ್ರೀಶಾಂತ್ ವಿದಾಯ

    ನವದೆಹಲಿ: ವೇಗದ ಬೌಲರ್ ಎಸ್.ಶ್ರೀಶಾಂತ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ಬುಧವಾರ ವಿದಾಯ  ಘೋಷಿಸಿದ್ದಾರೆ. 39 ವರ್ಷದ ಕೇರಳದ ಆಟಗಾರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. 2007ರ ಟಿ20 ಹಾಗೂ 2011 ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಶ್ರೀತಾಂಶ್, ಕಳೆದ 25 ವರ್ಷಗಳಿಂದ ವೃತ್ತಿಜೀವನದಲ್ಲಿದ್ದರು. 2013ರ ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಬಿಸಿಸಿಐನಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆ ಪೂರೈಸಿದ ಬಳಿಕ ಶ್ರೀಶಾಂತ್ ಪ್ರಸಕ್ತ ವರ್ಷ ಕೇರಳ ಪರ ರಣಜಿ ಪಂದ್ಯವಾಡಿದ್ದರು.

    ‘ಇದೊಂದು ಕಠಿಣ ನಿರ್ಧಾರ, ಕಳೆದ 25 ವರ್ಷಗಳಿಂದ ಕ್ರಿಕೆಟ್ ಆಡುತ್ತಾ ಬಂದಿರುವೆ. ಈ ವೇಳೆ ನನಗೆ ಸಹಕರಿಸಿದ, ಕುಟುಂಬ ಸದಸ್ಯರು, ಕೇರಳ ಕ್ರಿಕೆಟ್ ಸಂಸ್ಥೆ, ಬಿಸಿಸಿಐಗೆ ಅಭಾರಿಯಾಗಿದ್ದೇನೆ’ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ. 27 ಟೆಸ್ಟ್ ಪಂದ್ಯಗಳಿಂದ 87 ವಿಕೆಟ್ ಕಬಳಿಸಿದ ಶ್ರೀಶಾಂತ್, 53 ಏಕದಿನ ಪಂದ್ಯಗಳಿಂದ 75 ವಿಕೆಟ್ ಹಾಗೂ 10 ಟಿ20 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಕೇರಳ ಟಸ್ಕರ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದರು.

    https://twitter.com/sreesanth36/status/1501556272428371970?s=20&t=QcRJR8Fu0rS4k8OrQWVssw

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts