More

    ಸಿಎಂ ಎದುರು ಹೊಸ ಬೇಡಿಕೆ ಇಟ್ಟ ಶ್ರೀರಾಮುಲು? ಅವರ ಆಸೆ ಏನು ಗೊತ್ತಾ?

    ಬೆಂಗಳೂರು: ಏಕಾಏಕಿ ಖಾತೆ ಬದಲಾವಣೆಯಿಂದಾಗಿ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಇದೀಗ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ಎದುರು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.

    ಖಾತೆ ಬದಲಾವಣೆಯಿಂದ ಮುನಿಸಿಕೊಂಡರೂ ಒಲ್ಲದ ಮನಸ್ಸಿನಿಂದಲೇ ಸಮಾಧಾನಗೊಂಡಂತಿರುವ ಶ್ರೀರಾಮುಲು ಇದೀಗ ಇಟ್ಟಿರುವ ಹೊಸ ಬೇಡಿಕೆಯಿಂದ ಇದೀಗ ರಾಜಕೀಲ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ ಎನ್ನಲಾಗಿದೆ.

    ಅಷ್ಟಕ್ಕೂ ಇವರು ಇಟ್ಟಿರುವ ಹೊಸ ಬೇಡಿಕೆ ಎಂದರೆ ತಮ್ಮನ್ನು ಉಪಮುಖ್ಯಮಂತ್ರಿ ಮಾಡಬೇಕು ಎನ್ನುವುದು! 2018ರ ವಿಧಾನಸಭೆ ಚುನಾವಣೆ ವೇಳೆ ತಮ್ಮನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹೀಗಾಗಿ ತಮಗೆ ಇದೀಗ ಅದೇ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನನ್ನ ಗಮನಕ್ಕೆ ತರದೇ ಖಾತೆ ಬದಲಾಯಿಸಿದ್ದು ಸರಿಯೇ? ಸಿಎಂಗೆ ಶ್ರೀರಾಮುಲು ಪ್ರಶ್ನೆ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಗಳನ್ನು ನನ್ನಿಂದ ಹಿಂದಕ್ಕೆ ಪಡೆಯಲಾಗಿದೆ. ಕಡೇ ಪಕ್ಷ ನನಗೆ ಡಿಸಿಎಂ ಸ್ಥಾನವನ್ನಾದರೂ ನೀಡಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಉಪಮುಖ್ಯಮಂತ್ರಿ ಮಾಡಬೇಕು ಎಂಬುದು ನನ್ನ ಹಳೆಯ ಬೇಡಿಕೆ. ಈಗಿರುವ ಹೊಸ ಸಮಾಜ ಕಲ್ಯಾಣ ಖಾತೆ ಜತೆಗೆ ಡಿಸಿಎಂ ಹುದ್ದೆಯನ್ನೂ ನಿಭಾಯಿಸಬಲ್ಲೆ. ಜನರ ಬೇಡಿಕೆಯನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಶ್ರೀರಾಮುಲು ಯಡಿಯೂರಪ್ಪನವರ ಎದುರು ಹೇಳಿದ್ದಾರೆ ಎಂದೇ ಹೇಳಲಾಗುತ್ತಿದೆ.

    ವಾಲ್ಮೀಕಿ ಸಮುದಾಯದವರಾಗಿರುವ ಶ್ರೀರಾಮುಲು, ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯದ 60 ಲಕ್ಷ ಮಂದಿ ತಮ್ಮನ್ನು ಡಿಸಿಎಂ ಮಾಡಬೇಕು ಎಂದು ಬಯಸಿದ್ದಾರೆ ಎಂದು ಈ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದು, ಇಲ್ಲಿ ಉಲ್ಲೇಖಾರ್ಹ.

    ಮುಸ್ಲಿಂ ಯುವತಿಯ ಸ್ನೇಹಕ್ಕಾಗಿ ಬಿತ್ತು ಮತ್ತೊಂದು ಹೆಣ: ಐವರಿಂದ ಹಿಂದೂ ಯುವಕನ ಹತ್ಯೆ!

    ವಿದ್ಯಾರ್ಥಿಗಳನ್ನು ಉಗ್ರರ ತಂಡಕ್ಕೆ ಸೇರಿಸುತ್ತಿದ್ದ ಮೂವರು ಶಿಕ್ಷಕರು ಅರೆಸ್ಟ್​!

    ಬೇರೆ ಬೇರೆ ಮದುವೆಯಾಗಲು ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ- ಮುಂದೇನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts