More

    ಸಂಕಷ್ಟದಲ್ಲಿ ಶ್ರೀರಾಮುಲು: ಡಿಸಿಎಂ ಆಗೋ ಹೊತ್ತಲ್ಲೇ ಎದುರಾಯ್ತು ಜಾತಿ ಕಂಟಕ!

    ಮೈಸೂರು: ಉಪಮುಖ್ಯಮಂತ್ರಿ ಆಗುವ ಹೊಸ್ತಿಲಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಜಾತಿ ಕಂಟಕ ಎದುರಾಗಿದೆ. ಶ್ರೀರಾಮುಲು ಅವರು ನಾಯಕ ಸಮುದಾಯ ಅಲ್ಲ, ಅವರು ಬೋಯ ಸಮುದಾಯಕ್ಕೆ ಸೇರಿರುತ್ತಾರೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಆರೋಪಿಸಿದ್ದಾರೆ.

    ತಮ್ಮ ಜಾತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವಂತೆ ಶ್ರೀರಾಮುಲುಗೆ ಪತ್ರ ಬರೆದಿರುವ ಅವರು, ಶ್ರೀರಾಮುಲು ಬೋಯ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಹೇಳಿಕೊಂಡು ಉಪಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಹವಣಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

    ಅವರ ಜಾತಿಯ ಕುರಿತಂತೆ 13.03.2019ರಂದು ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯದ ದಾವಣಗೆರೆ ವಿಭಾಗದಲ್ಲಿ ಎ.ಡಿ.ಜಿ.ಪಿಗೆ ದೂರು ಸಲ್ಲಿಕೆಯಾಗಿದ್ದು, ಅದಿನ್ನೂ ತನಿಖಾ ಹಂತದಲ್ಲಿದೆ.

    ನೀವು ನಾಯಕ ಪರಿಶಿಷ್ಟ ಪಂಗಡ ಎಂದು ಹೇಳಿಕೊಂಡು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹೊರಟ್ಟಿದ್ದೀರಿ. ಇದು ಅಕ್ಷಮ್ಯ ಅಪರಾಧ. ತಾವು ತಮ್ಮ ಜಾತಿಯ ಬಗ್ಗೆ ನಾಯಕ ಸಮುದಾಯಕ್ಕೆ ಮತ್ತು ಕರ್ನಾಟಕ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ನಾಯಕನಾ ಅಥವಾ ಭೊಯನಾ ಎಂದು ಸಾರ್ವಜನಿಕವಾಗಿ ಉತ್ತರ ಕೊಡಬೇಕು. ನೀವು ನಾಯಕ ಸಮುದಾಯದ ಹಕ್ಕನ್ನು ಕಬಳಸುತ್ತಿದ್ದೀರಿ. ನೀವು ಕರ್ನಾಟಕದ ಜನತೆಗೆ ಮೋಸ ಮಾಡುತ್ತಿದ್ದೀರ. ಆದ್ದರಿಂದ ಈ ಕೂಡಲೇ ಸ್ಪಷ್ಟಿಕರಣ ನೀಡಬೇಕು. ನಾಯಕ ಸಮುದಾಯಕ್ಕೆ ಸೇರಿದ್ದೂ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ನಮ್ಮ ಅಭ್ಯಂತರವಿಲ್ಲ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಿಮಿನಲ್‌ ಹಾಗೂ ಸಿವಿಲ್ ಮೊಕದ್ದಮೆ ದಾಖಲೆ ಮಾಡಬೇಕಾಗುತ್ತದೆ. ಪರಿಶಿಷ್ಟ ಪಂಗಡದವನಾಗಿ ನ್ಯಾಯದಾನದ ಹಿತದೃಷ್ಟಿಯಿಂದ ತಮ್ಮಲ್ಲ ಕೇಳುತ್ತಿದ್ದೇನೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಹೇಳಿದ್ದಾರೆ.

    ಸೂಪರ್ ಸಿಎಂ ಟ್ಯಾಗ್‌ನಿಂದ ಹೊರಬಂದೆ- ಟೀಕಾಕಾರರಿಗೆ ತಿರುಗೇಟು ನೀಡಿದ ವಿಜಯೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts