More

    ನಾಲ್ಕು ಡಿಸಿಎಂ ಹುದ್ದೆ ಹೆಚ್ಚಿಸಿದರೆ ತಪ್ಪಲ್ಲ : ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಹೇಳಿಕೆ

    ಕೊಪ್ಪಳ: ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕವಲ್ಲ. ಹೆಚ್ಚುವರಿ ನಾಲ್ವರನ್ನು ಡಿಸಿಎಂ ಮಾಡಿದರೆ ತಪ್ಪಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

    ಈ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಇತರರ ಹೇಳಿಕೆ ತಪ್ಪಲ್ಲ. ಬಿಜೆಪಿ ಅಧಿಕಾರದಲ್ಲಿ ಮೂವರು ಡಿಸಿಎಂ ಇದ್ದರು. ಅದೊಂದು ಗೌರವ ಹುದ್ದೆ. ಈ ಬಗ್ಗೆ ಸಿಎಂ ಹಾಗೂ ಪಕ್ಷ ತೀರ್ಮಾನಿಸುತ್ತದೆ. ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಭಾನುವಾರ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದರು.

    ಸರ್ಕಾರ ರಚನೆ ವೇಳೆಯೇ ನಾನು ಮಂತ್ರಿ ಆಗಿದ್ದೆ. ಅರಣ್ಯ, ಪರಿಸರ ಹಾಗೂ ಯೋಜನಾ ಖಾತೆ ನೀಡಿದ್ದರು. ಬದಲಾದ ರಾಜಕೀಯದಲ್ಲಿ ಅಧಿಕಾರ ಸ್ವೀಕರಿಸಲಿಲ್ಲ. ಈ ವರ್ಷ ಜುಲೈನಲ್ಲಿ ನನ್ನನ್ನು ಮಂತ್ರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಆದರೆ ನಾನು ಮಂತ್ರಿ ಆಗುವೆ ಎಂದು ಪರೋಕ್ಷವಾಗಿ ಸಂಪುಟ ವಿಸ್ತರಣೆ ಸುಳಿವು ನೀಡಿದರು.

    ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗಿದೆ. ಇದರಲ್ಲಿ ಒಂದಷ್ಟು ಬದಲಾವಣೆ ಮಾಡಬೇಕಿದೆ. ಗ್ಯಾರಂಟಿಗಳಿಗೆ ವಾರ್ಷಿಕ 56 ಸಾವಿರ ಕೋಟಿ ರೂ. ಬೇಕಿದೆ. ಆರ್ಥಿಕ ಸುಧಾರಣೆಗೆ ಚರ್ಚೆ ನಡೆಸಬೇಕಿದೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳ ಸ್ವರೂಪ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು.

    ರಾಮಮಂದಿರ ಉದ್ಘಾಟನೆಗೆ ಹೋಗುವುದು, ಬಿಡುವುದು ಸಿಎಂ ಸಿದ್ದರಾಮಯ್ಯಗೆ ಬಿಟ್ಟ ವಿಚಾರ. ಆಹ್ವಾನ ಬಂದಿಲ್ಲದಿದ್ದರೂ ಹೋದರೂ ತಪ್ಪಿಲ್ಲ. ಆಹ್ವಾನ ಬಂದಿಲ್ಲ ಎಂದು ಸಿಎಂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಈ ವಿಷಯ ಅನವಶ್ಯಕವಾಗಿ ದೊಡ್ಡದು ಮಾಡವ ಅಗತ್ಯವಿಲ್ಲ ಎಂದರು.

    ನಮ್ಮ ಸರ್ಕಾರ ಪತನವಾಗುವ ಮಾತುಗಳು ಅತಿಶಯೋಕ್ತಿ. ರಾಜಕೀಯವಾಗಿ ಮಾತನಾಡಬಹುದಷ್ಟೆ. ಕಾಂಗ್ರೆಸ್​ ಕಥೆ ಮುಗಿಯಿತು ಎಂದರು. ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲವಾ ? ಯಾರೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. 95 ಶಾಸಕರು ಬಿಟ್ಟು ಹೋಗಬೇಕು. ಇದು ಆಗದ ಮಾತು. ಸರ್ಕಾರ ಬೀಳುವುದಿಲ್ಲ.

    -ಬಸವರಾಜ ರಾಯರಡ್ಡಿ. ಸಿಎಂ ಆರ್ಥಿಕ ಸಲಹೆಗಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts