More

    ಸಿಂದಗಿ ಜಿಲ್ಲೆ ಬೇಡಿಕೆಗೆ ವ್ಯಾಪಕ ಬೆಂಬಲ

    ಸಿಂದಗಿ: ನಾವು ಇಂಡಿ ಜಿಲ್ಲೆಯಾಗುವುದನ್ನು ವಿರೋಧಿಸಲ್ಲ. ಸಿಂದಗಿಯನ್ನು ಜಿಲ್ಲೆ ಮಾಡುವ ಹಕ್ಕನ್ನು ಮಂಡಿಸಲು ಬದ್ಧರಾಗಿದ್ದು, ಜ. 5ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಬಳಿ ಹತ್ತು ಜನರ ನಿಯೋಗವನ್ನು ಕೊಂಡೊಯ್ದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

    ಪಟ್ಟಣದ ಬಸವಮಂಟಪದಲ್ಲಿ ಸಿಂದಗಿ ಜಿಲ್ಲೆ ಮಾಡುವ ಕುರಿತು ಶುಕ್ರವಾರ ಪಕ್ಷಾತೀತವಾಗಿ ಸಾರ್ವಜನಿಕವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಇಂಡಿಯನ್ನು ಜಿಲ್ಲೆ ಮಾಡುವ ಬಗ್ಗೆ ನಾವು ವಿರೋಧಿಸದೇ, ಸಿಂದಗಿಯನ್ನೂ ಜಿಲ್ಲೆ ಮಾಡುವಂತೆ ಸಿಎಂ ಅವರನ್ನು ಒತ್ತಾಯಿಸಲು ಪ್ರಸ್ತಾವನೆಯೊಂದನ್ನು ನೀಡಿ, ಅದಕ್ಕೆ ತಕ್ಕುದಾದ ಸರ್ವೆ ಮಾಡಿಸಲು ಒತ್ತು ಕೊಡೋಣ. ಇಂಡಿ ಶಾಸಕರಂತೆ ನಾವು ಕಠೋರ ನಿರ್ಧಾರದ ಮೂಲಕ ಸಿಎಂಗೆ ದಿಟ್ಟ ಸಂದೇಶವನ್ನು ರವಾನಿಸಲು ಅಣಿಯಾಗೋಣ ಎಂದರು.

    ವಿಪ ಮಾಜಿ ಸದಸ್ಯಅರುಣ ಶಹಾಪೂರ, ಸಾಹಿತಿ ಡಾ. ಚೆನ್ನಪ್ಪ ಕಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ ಮತ್ತಿತರರು ಮಾತನಾಡಿ, ಸಿಂದಗಿ ತಾಲೂಕು ಕಂದಾಯ ಉಪವಿಭಾಗಗಳನ್ನೇ ಇಬ್ಭಾಗಿಸಿ ಸರ್ಕಾರ ನಾಲ್ಕು ತಾಲೂಕುಗಳನ್ನು ರಚಿಸಿದೆ. ಇಂತಹ ದೊಡ್ಡ ಮತ್ತು ಯೋಗ್ಯತಾನುಸಾರದ ಜಿಲ್ಲೆ ಮಾಡುವತ್ತ ಸರ್ಕಾರ ನಿರ್ಧರಿಸಲಿ. ಆದರೆ ಸಿಂದಗಿ ಜಿಲ್ಲೆ ಮಾಡುವ ನಮ್ಮ ಧ್ವನಿ ಮತ್ತು ಅದರ ಬಗೆಗಿನ ಹೋರಾಟ ಮಾತ್ರ ನಿಲ್ಲದು. ನಮ್ಮೆಲ್ಲರ ಒಗ್ಗಟ್ಟಿನ ಹೋರಾಟದ ಸಿಂದಗಿ ಜಿಲ್ಲೆ ಮಾಡುವ ಸಂಕಲ್ಪಕ್ಕೆ ಕ್ಷೇತ್ರದ ಸರ್ವರೂ ವ್ಯಾಪಕ ಬೆಂಬಲ ಸೂಚಿಸಿದ್ದು, ಸಿಂದಗಿಯಲ್ಲೇ ಆರಂಭಗೊಂಡ ಗೋಕಾಕ ಚಳುವಳಿ ಹೋರಾಟಕ್ಕೆ ಸಿಕ್ಕ ಜಯದಂತೆ ಈ ಹೋರಾಟವನ್ನು ಒಂದು ಜಯದ ಅಂತ್ಯಕ್ಕೆ ತಲುಪಿಸೋಣ ಎಂದರು.

    ಆದಿಶೇಷ ಮಠದ ನಾಗರತ್ನ ವೀರರಾಜೇಂದ್ರ ಸ್ವಾಮೀಜಿ, ಶಿವಪ್ಪಗೌಡ ಬಿರಾದಾರ, ಶರಣಪ್ಪ ವಾರದ, ಅಶೋಕ ಅಲ್ಲಾಪುರ, ಅಶೋಕ ವಾರದ, ಎಂ.ಎಸ್. ಮಠ, ಎಸ್.ಬಿ. ಕೊಣ್ಣೂರ, ಆನಂದ ಶಾಬಾದಿ, ಯಶವಂತರಾಯ ರೂಗಿ ಮಲಘಾಣ, ಸಲೀಂ ಜುಮನಾಳ, ಶಿವಾಜಿ ಮೆಟಗಾರ, ಜಗದೀಶ ಕಲಬುರ್ಗಿ, ಡಾ. ದಸ್ತಗೀರ ಮುಲ್ಲಾ ಇಂಗಳಗಿ, ರಾಜಶೇಖರ ಕೂಚಬಾಳ, ಹರ್ಷವರ್ಧನ ಪೂಜಾರಿ, ಗುರು ತಳವಾರ, ಶೈಲಜಾ ಸ್ಥಾವರಮಠ, ಮಹಾನಂದ ಬಮ್ಮಣ್ಣಿ ಮತ್ತಿತರರು ಮಾತನಾಡಿ, ಸಿಂದಗಿ ಜಿಲ್ಲೆ ಮಾಡುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.

    ಚಂದ್ರಶೇಖರ ದೇವರಡ್ಡಿ, ಕೆ.ಎಚ್. ಸೋಮಾಪುರ, ಸಿದ್ದುಗೌಡ ಪಾಟೀಲ, ಶಬ್ಬೀರಪಟೇಲ ಬಿರಾದಾರ, ಸಿದ್ದಣ್ಣ ಹಿರೇಕುರುಬರ, ಚಂದ್ರಕಾಂತ ಸಿಂಗೆ, ಮಲ್ಲು ಅಲ್ಲಾಪುರ, ಯಲ್ಲಪ್ಪ ಇಂಗಳಗಿ, ಶೇಖರಗೌಡ ಹರನಾಳ, ಅಪ್ಪು ತಾರಾಪುರ, ಮುತ್ತು ಶಾಬಾದಿ, ಶರಣು ಮಾವೂರ, ಶಿವಾನಂದ ರೋಡಗಿ, ಶೈಲಾ ಮಂದೇವಾಲಿ, ನೀಲಮ್ಮ ಯಡ್ರಾಮಿ ಸೇರಿದಂತೆ ಕನ್ನಡಪರ, ದಲಿತಪರ, ಸಾಹಿತಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts