More

    ಕಳುವಾಗಿ 22 ವರ್ಷದ ಹಿಂದೆ ಲಂಡನ್‌ ಸೇರಿದ್ದ ಶಿವ ಇಂದು ಭಾರತಕ್ಕೆ

    ನವದೆಹಲಿ: 1998ರಲ್ಲಿ ರಾಜಸ್ಥಾನದ ಬರೇಲಿಯಲ್ಲಿರುವ ಗಟೇಶ್ವ ದೇವಸ್ಥಾನದಿಂದ ಕಳ್ಳತನವಾಗಿ ಲಂಡನ್‌ಗೆ ಸಾಗಿಸಲಾಗಿದ್ದ ಶಿವನ ಪ್ರತಿಮೆಯೊಂದು ವಾಪಸ್‌ ಭಾರತಕ್ಕೆ ಹಸ್ತಾಂತರವಾಗಲಿದೆ.

    ಅಪರೂಪದ ನಾಟ್ಯಭಂಗಿಯಲ್ಲಿರುವ ಶಿವನ ವಿಗ್ರಹವನ್ನು ಬ್ರಿಟನ್‌ ಅಧಿಕಾರಿಗಳು ಗುರುವಾರ ಭಾರತಕ್ಕೆ ಇಂದು ಹಸ್ತಾಂತರ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಪ್ರತಿಮೆಯನ್ನು ಪುರಾತತ್ವ ಇಲಾಖೆಗೆ ಹಿಂದಿರುಗಿಸುವುದಾಗಿ ತಿಳಿದುಬಂದಿದೆ.

    9ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯನ್ನು ಕಳ್ಳತನ ಮಾಡಿ ಲಂಡನ್‌ಗೆ ಸಾಗಿಸಲಾಗಿತ್ತು. ಕಳ್ಳತನವಾದ ಐದು ವರ್ಷಗಳ ನಂತರ ಅಂದರೆ 2003ರಲ್ಲಿ ಈ ವಿಗ್ರಹ ಲಂಡನ್‌ನಲ್ಲಿರುವುದಾಗಿ ತಿಳಿದುಬಂತು. ನಂತರ ಬ್ರಿಟನ್‌ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶಿವನ ವಿಗ್ರಹ ಪತ್ತೆಯಾಗಿ, 2005ರಲ್ಲಿ ಲಂಡನ್‌ಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಲುಪಿಸಲಾಗಿತ್ತು.

    ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಪಸ್‌ ಹೋಗಲಾರೆ ಎಂದ ನವಾಜ್‌ ಷರೀಫ್: ಕಾರಣ ಏನು ಗೊತ್ತಾ?

    ಲಂಡನ್‌ಗೆ ಹೋಗಿದ್ದ ಈ ಮೂರ್ತಿಯನ್ನು ಅಲ್ಲಿಯ ಆಗರ್ಭ ಶ್ರೀಮಂತರೊಬ್ಬರು ಭಾರೀ ಹಣ ನೀಡಿ ಖರೀದಿ ಮಾಡಿದ್ದರು. ಆದರೆ, ವಿಗ್ರಹ ಭಾರತದೊಂದಿಗೆ ಆಧ್ಯಾತ್ಮಿಕ ನಂಟು ಹೊಂದಿದೆ ಎಂದು ಅರಿತಿದ್ದ ಅವರು, ಭಾರತೀಯ ರಾಯಭಾರಿ ಕಚೇರಿಗೆ ಹಿಂತಿರುಗಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    2017ರಲ್ಲಿ ಭಾರತದ ಪುರಾತತ್ವ ಇಲಾಖೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದು, ಇದು ರಾಜಸ್ಥಾನದಿಂದ ಕಳುವಾಗಿರುವ ಶಿವನಮೂರ್ತಿ ಎಂದು ಖಚಿತಪಡಿಸಿದ್ದಾರೆ. ಇದಾದ ಬಳಿಕ ಈ ಮೂರ್ತಿಯನ್ನು ಭಾರತಕ್ಕೆ ಮರಳಿ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

    ಭಾರತಕ್ಕೆ ಇಂದು ಇದು ಬರಲಿದ್ದು, ಮರಳಿ ಬರೋಲಿಯ ಗಟೇಶ್ವರ ದೇವಸ್ಥಾನದಲ್ಲಿ ಮರು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
    ಸುಮಾರು ನಾಲ್ಕು ಅಡಿ ಎತ್ತರದ ಕಲ್ಲಿನ ಮೂರ್ತಿ ಇದಾಗಿದೆ. ಪ್ರತಿಹರ ಶೈಲಿಯಲ್ಲಿ ಇದನ್ನು ಕೆತ್ತಲಾಗಿದೆ.

    ದೀಪಿಕಾಗೆ ಪಾಕಿಸ್ತಾನ‌ ಲಿಂಕ್‌? ₹5 ಕೋಟಿ ಕುರಿತು ‘ರಾ’ ಅಧಿಕಾರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts