More

    ಪಾಕಿಸ್ತಾನಕ್ಕೆ ವಾಪಸ್‌ ಹೋಗಲಾರೆ ಎಂದ ನವಾಜ್‌ ಷರೀಫ್: ಕಾರಣ ಏನು ಗೊತ್ತಾ?

    ಲಾಹೋರ್: ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತ ಸದ್ಯ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸದ್ಯ ನಾನು ವಾಪಸ್‌ ಸ್ವದೇಶ ಪಾಕಿಸ್ತಾನಕ್ಕೆ ಹೋಗಲಾರೆ ಎಂದಿದ್ದಾರೆ.

    ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಷರೀಫ್‌, ಅನಾರೋಗ್ಯದ ನೆಪವೊಡ್ಡಿ ಪಾಕಿಸ್ತಾನದ ಲಾಹೋರ್‌ ಕೋರ್ಟ್‌ ಅನುಮತಿ ಮೇರೆಗೆ ಲಂಡನ್‌ಗೆ ಚಿಕಿತ್ಸೆಗೆಂದು ತೆರಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಚಿಕಿತ್ಸೆಗಾಗಿ ಲಾಹೋರ್ ಹೈಕೋರ್ಟ್‌ ನಾಲ್ಕು ವಾರಗಳ ಅನುಮತಿ ನೀಡಿತ್ತು.

    ಈ ಅವಧಿ ಎಂದೋ ಮುಗಿದು ಹೋಗಿದೆ. ಆದರೆ ಇದೀಗ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ತಾವು ಪಾಕಿಸ್ತಾನಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಧುಮೇಹ, ಹೃದಯ, ಮೂತ್ರಪಿಂಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಾನು ಪೀಡಿತನಾಗಿದ್ದೇನೆ. ಈ ಸಂದರ್ಭದಲ್ಲಿ ಪ್ರಯಾಣ ಮಾಡಿದರೆ ಕರೊನಾ ವೈರಸ್‌ ಬಾಧಿಸುವ ಸಾಧ್ಯತೆ ಇರುವುದಾಗಿ ವೈದ್ಯರು ಹೇಳುತ್ತಿದ್ದು, ನಾನು ವಾಪಸ್‌ ಹೋಗಲಾರೆ ಎಂದಿದ್ದಾರೆ.
    ಈ ಕುರಿತು ಅವರು ಲಾಹೋರ್‌ ಕೋರ್ಟ್‌ಗೆ ವಕೀಲರ ಮೂಲಕ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಫ್ರಾನ್ಸ್‌ನಿಂದ ರಫೇಲ್‌ ವಿಮಾನದಲ್ಲಿ ಬರಲಿದ್ದಾರೆ ಕರುನಾಡ ವಿದ್ಯಾರ್ಥಿ

    ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ 70 ವರ್ಷದ ನವಾಜ್‌ ಷರೀಫ್ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ. ಲಾಹೋರ್ ಹೈಕೋರ್ಟ್ ಅವರಿಗೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ನಾಲ್ಕು ವಾರಗಳ ಕಾಲಾವಕಾಶ ಮಾತ್ರ ನೀಡಿತ್ತು. ಆದರೆ ಇದೀಗ ವಕೀಲ ಅಮ್ಜದ್ ಪರ್ವೇಜ್ ಮೂಲಕ ಲಾಹೋರ್ ಹೈಕೋರ್ಟ್‌ಗೆ ವಾಪಸ್‌ ಬರುವುದು ಕಷ್ಟ ಎಂಬ ಮನವಿ ಸಲ್ಲಿಸಿದ್ದಾರೆ.

    ಇದೇ ವೇಳೆ ಅವರ ಮಗಳು ಮರಿಯಮ್ ನವಾಜ್ ಕೂಡ ಮಾಹಿತಿ ನೀಡಿದ್ದು, ತಮ್ಮ ತಂದೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಕರೊನಾ ಅವಧಿಯಲ್ಲಿ ಅವರು ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಅಲ್-ಅಜೀಜಿಯಾ ಮಿಲ್ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಷರೀಫ್‌ಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಅವರು ಏಳು ವರ್ಷಗಳ ಶಿಕ್ಷೆ ಅನುಭವಿಸಲು ಕೋಟ್ಲಖ್‌ಪತ್ ಜೈಲಿನಲ್ಲಿದ್ದರು. ಈ ನಡುವೆಯೇ ಭ್ರಷ್ಟಾಚಾರದ ಇನ್ನೊಂದು ಕೇಸ್‌ ಅವರನ್ನು ಸುತ್ತಿಕೊಂಡಿತ್ತು. ಜಾಮೀನು ನೀಡಿಕೆ ಸಂದರ್ಭದಲ್ಲಿ ವಿದೇಶಕ್ಕೆ ಹೋಗುವುದನ್ನು ಕೋರ್ಟ್‌ ನಿಷೇಧಿಸಿತ್ತು.

    ದೀಪಿಕಾಗೆ ಪಾಕಿಸ್ತಾನ‌ ಲಿಂಕ್‌? ₹5 ಕೋಟಿ ಕುರಿತು ‘ರಾ’ ಅಧಿಕಾರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts