More

    ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

    ಗೋರಖಪುರ (ಉತ್ತರ ಪ್ರದೇಶ): ಗೋರಖಪುರ ಮರ್ಡರ್​ ಕೇಸ್​…

    2011ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮರ್ಡರ್​ ಕೇಸಿದು. ಪ್ರೀತಿ ಏನೆಲ್ಲಾ ಮಾಡಿಸಿಬಿಡುತ್ತದೆ, ಮನೆಯವರು ಪ್ರೀತಿಗೆ ವಿರೋಧ ಒಡ್ಡಿದಾಗ ಪ್ರೇಮಿಗಳು ಯಾವ ಹಂತಕ್ಕೆ ಹೋಗಬಹುದು ಎಂದು ತಿಳಿಸೋ, ಮೈನಡುಗಿಸುವ ಭಯಾನಕ ಕೊಲೆಯ ಪ್ರಕರಣವಿದು.

    ಒಂಬತ್ತು ವರ್ಷಗಳ ಬಳಿಕ ಈ ಕೊಲೆ ಪ್ರಕರಣದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪುನಃ ಹರಿದಾಡುತ್ತಿದ್ದು, ಮತ್ತೊಮ್ಮೆ ಈ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಕೊಲೆಯ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಲೇ ಸಾಗಿದ್ದು, ಮತ್ತೆ ಇದಕ್ಕೀಗ ಜೀವ ಬಂದಿದೆ.

    ಏನಿದು ಕೇಸ್​? ಇದು ಶುರುವಾಗುವುದು ಶಿಖಾ ದುಬೆ ಎಂಬ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಹಾಗೂ ದೀಪು ಎಂಬ ಯುವಕನ ಪ್ರೇಮದ ಕಥೆಯಿಂದ.

    ಅದು 2011 ಜೂನ್ 11. ಉತ್ತರ ಪ್ರದೇಶದ ಗೊರಖ್​ಪುರದಲ್ಲಿ ಪೊಲೀಸರಿಗೆ ಓರ್ವ ಯುವತಿಯ ಶವ ಸಿಕ್ಕಿತ್ತು. ಆ ಶವ ಗುರುತು ಸಿಗಲಾರದಷ್ಟು ವಿಕಾರವಾಗಿತ್ತು. ಆದರೆ ಅಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರಗಳನ್ನು ನೋಡಿದ್ದ ಪೊಲೀಸರಿಗೆ ಅವಳೊಬ್ಬರು ಇಂಜಿನಿಯರಿಂಗ್​ ವಿದ್ಯಾರ್ಥಿನಿ ಅನ್ನುವುದು ಖಾತ್ರಿಯಾಗಿತ್ತು.

    ಈ ಯುವತಿ ಯಾರು ಎಂದು ತನಿಖೆ ಮಾಡುತ್ತಿದ್ದಾಗಲೇ, ಇತ್ತ ಇಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿದ್ದ ಶಿಖಾ ದುಬೆ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ರಾಮ್ ಪ್ರಕಾಶ್ ದುಬೆ ಕೇಸ್​ ದಾಖಲಿಸಿದ್ದರು. ಗುರುತು ಸಿಗದಷ್ಟು ವಿಕಾರವಾಗಿದ್ದ ಶವಕ್ಕೂ, ಶಿಖಾ ದುಬೆಗೂ ಹೋಲಿಕೆ ಇದ್ದುದರಿಂದ ಪೊಲೀಸರಿಗೆ ಈ ಶವ ಶಿಖಾಳದ್ದೇ ಎಂದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ.

    ನಂತರ ಪಾಲಕರನ್ನು ಕರೆದುಕೊಂಡು ಹೋಗಿ ಶವ ಗುರುತಿಸುವಂತೆ ಹೇಳಿದರು. ವಿಕಾರವಾಗಿದ್ದ ಶವವನ್ನು ಕಂಡು ಕಂಗಾಲಾದ ಪಾಲಕರು ಅವರೇ ತಮ್ಮ ಮಗಳು ಎಂದು ಹೇಳಿ ಶವಸಂಸ್ಕಾರ ಮಾಡಿದರು. ಆದರೆ ಅವರಿಗೆ ತಮ್ಮ ಮಗಳು ದೀಪುವಿನ ಪ್ರೇಮಕ್ಕೆ ಬಿದ್ದ ವಿಷಯ ತಿಳಿದಿತ್ತು.

    ಇದನ್ನೂ ಓದಿ: ಎನ್​ಕೌಂಟರ್​: ಐವರು ನಕ್ಸಲರನ್ನು ಹೊಡೆದುರುಳಿಸಿದ ಕಮಾಂಡೋ

    ಇತ್ತ ಅವನ ಜತೆ ಪ್ರೇಮ ಬೆಳೆಸಬೇಡ ಎಂದು ಶಿಖಾಳ ಮನೆಯವರು ಹೇಳುತ್ತಿದ್ದರೆ, ಅತ್ತ ದೀಪುವಿನ ಮನೆಯವರಿಗೂ ಈ ಸ್ನೇಹ ಸಂಬಂಧ ಇಷ್ಟವಿರಲಿಲ್ಲ. ಆದ್ದರಿಂದ ದೀಪುನೇ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಶಿಖಾಳ ತಂದೆಗೆ ಗುಮಾನಿ ಶುರುವಾಯಿತು. ಆದ್ದರಿಂದ ಆತನ ವಿರುದ್ಧ ಕೇಸ್​ ದಾಖಲಿಸಿದರು.

    ಈ ಕೇಸ್ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ದೀಪುವಿನ ವಿಳಾಸ ಸಿಕ್ಕಿತು. ಅಲ್ಲಿಗೆ ಹೋಗಿ ನೋಡಿದಾಗ ಅವರಿಗೇ ದಿಗಿಲಾಗಿ ಹೋಯ್ತು. ಏಕೆಂದರೆ, ಅಲ್ಲಿ ದೀಪುವಿನ ಜತೆ ಶಿಖಾ ಇದ್ದಳು!

    ಇಬ್ಬರನ್ನೂ ವಾಪಸ್​ ಕರೆದುಕೊಂಡು ಬರಲಾಯಿತು. ಜೀವಂತ ಇರುವ ಮಗಳನ್ನು ನೋಡಿ ದುಃಖ, ನೋವು, ಖುಷಿ ಎಲ್ಲವೂ ಒಮ್ಮೆಲೇ ಆಯಿತು. ಆದರೆ ತಮ್ಮ ಮಗಳು ಹೀಗೆ ಹೇಳದೇ ಕೇಳದೇ ಓಡಿಹೋಗಿದ್ದರಿಂದ ಅತ್ಯಂತ ವಿಚಲಿತರಾದ ಆಕೆಯ ತಂದೆ, ಮಗಳ ಕೆನ್ನೆ ಮುಟ್ಟಿ ಕಣ್ಣೀರಿಟ್ಟರು, “ಇವಳು ನನ್ನ ಮುದ್ದಿನ ಮಗಳು ಶಿಖಾ, ಆದರೆ ಇವಳ ಅಂತ್ಯಸಂಸ್ಕಾರ ಮಾಡಿಬಿಟ್ಟಿದ್ದೇನೆ, ಇವಳು ನನಗೆ ಬೇಡ’ ಎಂದು ಹೃದಯ ಕಲ್ಲು ಮಾಡಿಕೊಂಡು ಹೇಳಿದರು. ಇದೇ ಫೋಟೋ ಇದೀಗ ಭಾರಿ ವೈರಲ್​ ಆಗುತ್ತಿದೆ.

    ಇಲ್ಲಿಗೆ ಒಂದು ಹಂತ ಮುಗಿಯಿತು, ಆದರೆ ಶಿಖಾ ಕುಟುಂಬದವರು ತಮ್ಮದೇ ಮಗಳು ಎಂದು ತಿಳಿದುಕೊಂಡು ಅಂತ್ಯಸಂಸ್ಕಾರ ನೆರವೇರಿಸಿದ್ದ ಯುವತಿ ಯಾರು? ಇದು ಪೊಲೀಸರಿಗೆ ತಲೆಬಿಸಿ ಮಾಡಿತು. ಅದರ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದೇ ಭಯಾನಕ ಮರ್ಡರ್​ ಕೇಸ್​!

    ಶಿಖಾ ಮತ್ತು ದೀಪುವಿನ ಪ್ರೀತಿಯ ವಿಷಯ ತಿಳಿದ ಇಬ್ಬರ ಮನೆಯವರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಲ್ಲ, ಅದಕ್ಕಾಗಿಯೇ ಇಬ್ಬರೂ ಓಡಿಹೋಗುವ ಯೋಜನೆ ರೂಪಿಸಿಕೊಂಡಿದ್ದರು. ಆದರೆ ತಾವು ಓಡಿಹೋದರೆ ಪಾಲಕರು ಸುಲಭದಲ್ಲಿ ಬಿಡುವುದಿಲ್ಲ ಎಂದು ಶಿಖಾಳಿಗೆ ಗೊತ್ತಿತ್ತು.

    ಆಗಲೇ ಇಬ್ಬರೂ ಕೂಡ ಭಯಾನಕ ಮರ್ಡರ್​ ಪ್ಲ್ಯಾನ್​ ರೂಪಿಸಿದ್ದರು. ತನ್ನಷ್ಟೆ ಎತ್ತರ, ಹಾಗೂ ತನ್ನದೇ ಹೋಲಿಕೆ ಇರುವ ಯುವತಿಗಾಗಿ ಹುಡುಕಾಟ ನಡೆಸಿದ್ದ ಶಿಖಾಳಿಗೆ ಸಿಕ್ಕಿದ್ದು 25 ವರ್ಷದ ಮೂರು ವರ್ಷದ ಮಗುವಿನ ತಾಯಿ ಪೂಜಾ! ಪೂಜಾ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಳು.

    ಟ್ರಾನ್ಸಪೋರ್ಟ್ ಕೆಲಸ ಮಾಡಿಕೊಂಡಿದ್ದ ಸುಗ್ರೀವ್ ಎಂಬುವವನ ಸಹಾಯ ಪಡೆದ ಶಿಖಾ ಹಾಗೂ ದೀಪು, ಪೂಜಾಳಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಕರೆದುಕೊಂಡು ಬಂದಿದ್ದರು. ನಂತರ ಟ್ರಕ್​ನಲ್ಲಿಯೇ ಸುಗ್ರೀವ್​ ಆಕೆಯನ್ನು ಕರೆದುಕೊಂಡು ಬಂದು ಮೊದಲೇ ಯೋಜನೆ ರೂಪಿಸಿದಂತೆ ರಾಡ್‍ನಿಂದ ಹೊಡೆದು ಕೊಲೆ ಮಾಡಿದರು. ನಂತರ ಮೂವರೂ ಸೇರಿ ಆಕೆಯ ಗುರುತು ಸಿಗದಂತೆ ಮುಖವನ್ನು ವಿಕಾರಗೊಳಿಸಿದ್ದರು.

    ತಾನು ಧರಿಸುತ್ತಿದ್ದ ಸರ, ಬಟ್ಟೆ, ಐಕಾರ್ಡ್​ ಇತ್ಯಾದಿಗಳನ್ನು ಕೊಲೆ ಜಾಗದಲ್ಲಿ ಇಟ್ಟ ಪೂಜಾ, ನೋಡಿದವರು ತಾನೇ ಸತ್ತಿದ್ದಾರೆ ಎಂದು ತಿಳಿದುಕೊಳ್ಳಲಿ ಎಂದು ಪ್ಲ್ಯಾನ್​ ಮಾಡಿದ್ದಳು. ಇಷ್ಟೇ…

    ಮುಂದೆ ಅವಳು ಅಂದುಕೊಂಡಂತೆ ಆಕೆಯ ಅಪ್ಪ ಕೂಡ ಕೊಲೆಯಾದವಳು ತಮ್ಮದೇ ಮಗಳು ಎಂದುಕೊಂಡರು. ಆದರೆ ಕೊನೆಗೆ ಎಲ್ಲವೂ ಉಲ್ಟಾ ಆಯಿತು. ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಇಬ್ಬರೂ ಸದ್ಯ ಜಾಮೀನಿನ ಮೇಲೆ ಹೊರಕ್ಕೆ ಇದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕೊಲೆ ಕೇಸ್​ ಪ್ರಕರಣ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿರುವ ಕಾರಣ ಸದ್ಯ ಎಲ್ಲರೂ ಆರೋಪಿಗಳಷ್ಟೇ.

    ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

    ಶಾಸಕನ ಮೇಲೆ ಗ್ಯಾಂಗ್​ರೇಪ್​ ಆರೋಪ: ಗಾಯಕಿಯಿಂದ ದಾಖಲಾಯ್ತು ದೂರು

    VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

    ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

    ಭಾರತದ ಸೇನೆ ಯುದ್ಧಕ್ಕೆ ಸದಾ ರೆಡಿ- ಚೀನಾಕ್ಕೆ ತಿವಿದ ಅಮಿತ್​ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts