More

    ವಿಶ್ವದ ಹಿರಿಯ ಜೀವಿತ ವಿವಾಹಿತರಿವರು- ಗುಟ್ಟಾಗಿ ಮದುವೆಯಾಗಿದ್ದ ಇವರ ಹೆಸರೀಗ ವಿಶ್ವದಾಖಲೆ

    ಲಂಡನ್‌: ಇಲ್ಲಿಯ ನಿವಾಸಿಗಳಾದ ಜೂಲಿಯೊ ಸೀಸರ್ ಮೊರಾ ಮತ್ತು ವಾಲ್ಡ್ರಾಮಿನಾ ಮ್ಯಾಕ್ಲೋವಿಯಾ ಕ್ವಿಂಟೆರೋಸ್ ದಂಪತಿ ವಿಶ್ವದ ಅತ್ಯಂತ ಹಿರಿಯ ಬದುಕಿರುವ ವಿವಾಹಿತರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಇವರ ಮದುವೆಯಾಗಿ 79 ವರ್ಷಗಳಾಗಿವೆ, ಈ ಸುದೀರ್ಘ ದಾಂಪತ್ಯ ನಡೆಸಿರುವ ದಂಪತಿಯೀಗ ವಿಶ್ವದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ ಇದೀಗ ಗಿನ್ನೆಸ್‌ ವಿಶ್ವದಾಖಲೆ ಪುಸ್ತಕದಲ್ಲಿಯೂ ಇವರ ಹೆಸರು ಸೇರ್ಪಡೆಯಾಗಿದೆ.

    ಜೂಲಿಯೊ ಸೀಸರ್ ಮೊರಾ ವಯಸ್ಸು 110 ಹಾಗೂ ವಾಲ್ಡ್ರಾಮಿನಾ ಮ್ಯಾಕ್ಲೋವಿಯಾ ಕ್ವಿಂಟೆರೋಸ್ ವಯಸ್ಸು 105. ಮೊರೆ 1910ರ ಮಾರ್ಚ್‌ 10 ಹಾಗೂ ವಾಲ್ಡ್ರಾಮಿನಾ 1915ರ ಅಕ್ಟೋಬರ್‌ 16ರಂದು ಜನಿಸಿದ್ದಾರೆ. ಅಂದರೆ ಇಬ್ಬರ ವಯಸ್ಸನ್ನು ಸೇರಿಸಿದರೆ 215 ವರ್ಷಗಳು. ದಂಪತಿಯ ಒಟ್ಟು ವಯಸ್ಸನ್ನು ಪರಿಗಣನೆಗೆ ತೆಗೆದುಕೊಂಡರೂ ಇವರು ವಿಶ್ವದ ಅತ್ಯಂತ ಹಿರಿಯ ಬದುಕಿರುವ ವಿವಾಹಿತರು ಎಂಬ ಕೀರ್ತಿಯನ್ನು ಪಡೆದಿದ್ದಾರೆ.

    ಮಾತ್ರವಲ್ಲದೆ ಮೊರಾ ಅವರು ವಿಶ್ವದ ಅತ್ಯಂತ ಹಿರಿಯ ಪಿಂಚಣಿದಾರರು ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

    ಇದನ್ನೂ ಓದಿ: ₹3.59 ಕೋಟಿಗೆ ಮಾರಾಟವಾಯ್ತು ಆರು ತಿಂಗಳ ಕುರಿಮರಿ!

    ಅಂದಹಾಗೆ ಇವರು ತಮ್ಮ ಶಾಲಾ ದಿನಗಳಿಂದಲೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಂತೆ. ಮೊರಾ ಸಹೋದರಿಯು ವಾಲ್ಡ್ರಾಮಿನಾ ಅವರ ಸಹೋದರ ಸಂಬಂಧಿಯನ್ನು ಮದುವೆಯಾಗಿದ್ದರಿಂದ ಅಲ್ಲಿಂದಲೇ ಇಬ್ಬರ ಪರಿಚಯವಾಗಿದೆ. ಆಗಿ ಇವರಿನ್ನೂ ಶಾಲಾ ವಿದ್ಯಾರ್ಥಿಗಳು. ಆಗಲೇ ಇಬ್ಬರೂ ಸ್ನೇಹಿತರಾಗಿದ್ದು, ನಂತರ ಪ್ರೀತಿಸುತ್ತಿದ್ದರಂತೆ. ಈ ಕುರಿತು ದಂಪತಿ ಹೇಳಿಕೊಂಡಿದ್ದಾರೆ.

    ಸುದೀರ್ಘ ಪರಿಚಯ, ಸ್ನೇಹ, ಪ್ರೇಮದ ನಂತರ 1941ರ ಫೆಬ್ರುವರಿ 7ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮನೆಯವರೂ ಈ ಮದುವೆಗೆ ಒಪ್ಪದಿದ್ದ ಹಿನ್ನೆಲೆಯಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿದ್ದರಂತೆ ಈ ದಂಪತಿ.

    ಇಬ್ಬರೂ ಮದುವೆಯಾಗಿರುವ ವಿಷಯ ತಿಳಿದು ಇಬ್ಬರ ಮನೆಯವರೂ ತಮ್ಮತಮ್ಮ ಮಕ್ಕಳನ್ನು ಮನೆಗೆ ಸೇರಿಸಕೊಂಡಿರಲಿಲ್ಲವಂತೆ. ಅನೇಕ ವರ್ಷ ನಾವು ಮನೆಗೆ ಹೋಗಿರಲಿಲ್ಲ. ನಂತರ ನಿಧಾನವಾಗಿ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆವು ಎನ್ನುತ್ತಾರೆ ಈ ಹಿರಿಯ ದಂಪತಿ.

    ಇವರಿಗೆ ಐದು ಮಕ್ಕಳು, 11 ಮೊಮ್ಮಕ್ಕಳು, 21 ಮೊಮ್ಮಕ್ಕಳು ಮತ್ತು 9 ಮರಿಮಕ್ಕಳು ಇದ್ದಾರೆ. ಇವರ ಹಿರಿಯ ಮಗ 58 ವರ್ಷದವನಿದ್ದಾಗ ನಿಧನರಾದ್ದಾರೆ.

    ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!

    ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts