More

    ಮೋಸ ಮಾಡದೇ ಸ್ವಯಾರ್ಜಿತ ಆಸ್ತಿ ದಾನಪತ್ರ ಮಾಡಿದ್ದರೆ ಹೆದರಬೇಕಿಲ್ಲ, ಖಾತೆ ನಿಮ್ಮ ಹೆಸರಿಗೇ ಸೇರುವುದು…

    ಮೋಸ ಮಾಡದೇ ಸ್ವಯಾರ್ಜಿತ ಆಸ್ತಿ ದಾನಪತ್ರ ಮಾಡಿದ್ದರೆ ಹೆದರಬೇಕಿಲ್ಲ, ಖಾತೆ ನಿಮ್ಮ ಹೆಸರಿಗೇ ಸೇರುವುದು...ಪ್ರಶ್ನೆ: ನಮ್ಮ ಅಜ್ಜಿ ತನ್ನ ಸ್ವಯಾರ್ಜಿತ ಜಮೀನನ್ನು ನನಗೆ ರಿಜಿಸ್ಟರ್ ದಾನ ಪತ್ರ ಮಾಡಿದ್ದಾರೆ. ಇನ್ನೂ ಖಾತೆಯಾಗಿಲ್ಲ. ನಮ್ಮ ಅಜ್ಜಿಗೆ ನಾಲ್ಕು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಮತ್ತು 20 ಮೊಮ್ಮಕ್ಕಳು ಇದ್ದಾರೆ. ಯಾರದೂ ತಕರಾರಿಲ್ಲ. ಕೇವಲ ನಮ್ಮ ಚಿಕ್ಕಪ್ಪನ ಹೆಂಡತಿ ಖಾತೆಯಾಗಲು ತಕರಾರು ಮಾಡುತ್ತಿದ್ದಾರೆ. ನನಗೆ ತೊಂದರೆಯಾಗುತ್ತದೆಯೇ?

    ಉತ್ತರ: ನಿಮ್ಮ ಅಜ್ಜಿಯ ಸ್ವಯಾರ್ಜಿತ ಆಸ್ತಿಯನ್ನು ಅವರು ಏನಾದರೂ ಮಾಡಬಹುದು. ಅದಕ್ಕೆ ಯಾರೂ ಅಡ್ಡಿಬರುವಂತೆ ಇಲ್ಲ. ನಿಮಗೆ ನೊಂದಾಯಿತ ದಾನಪತ್ರ ಆಗಿದ್ದರೆ ಖಾತೆ ನಿಮ್ಮ ಹೆಸರಿಗೆ ಆಗಲೇ ಬೇಕು. ನಿಮ್ಮ ಚಿಕ್ಕಮ್ಮ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ದಾನಪತ್ರ ರದ್ದುಮಾಡಿಸಿ ತರಬೇಕಾಗುತ್ತದೆ.

    ಅವರಿಗೆ ಈ ಬಗ್ಗೆ ಹಕ್ಕು ಬರುವುದಿಲ್ಲ. ನಿಮ್ಮ ಅಜ್ಜಿಯಿಂದ ನೀವು ಮೋಸಮಾಡಿ ದಾನಪತ್ರವನ್ನು ಬರೆಸಿಕೊಂಡಿದ್ದರೆ, ಆಗಲೂ, ನಿಮ್ಮ ಅಜ್ಜಿ ದಾನಪತ್ರವನ್ನು ರದ್ದುಮಾಡಲು ಕೇಸು ಹಾಕಬಹುದು. ನಿಮ್ಮ ಚಿಕ್ಕಮ್ಮನಿಗೆ ಯಾವ ಅಧಿಕಾರವೂ ಇರುವುದಿಲ್ಲ. ನೀವು ಮೋಸ ಮಾಡದೇ ಇದ್ದರೆ ಹೆದರ ಬೇಕಾಗಿಲ್ಲ. ಖಾತೆ ಮಾಡದಿದ್ದರೆ ಆ ವಿಷಯದ ಬಗ್ಗೆ ನೀವು ಸೂಕ್ತ ಹಿಂಬರಹ ಪಡೆದು ಅಪೀಲು ಹಾಕಬಹುದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts