More

    ‘ಬೀಜ ಭಯೋತ್ಪಾದನೆ’ಯಿಂದ ಭಾರತದಲ್ಲಿ ಆತಂಕ ಸೃಷ್ಟಿಸಲಿದೆಯೇ ಚೀನಾ?

    ನವದೆಹಲಿ: ಇಡೀ ವಿಶ್ವಕ್ಕೆ ಕರೊನಾ ವೈರಸ್‌ ನೀಡಿ, ಲಡಾಖ್‌ ಗಣಿಯಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದು ಭಾರತದ ಜತೆ ದ್ವೇಷ ಕಟ್ಟಿಕೊಂಡಿರುವ ಚೀನಾ ಇದೀಗ ತನ್ನ ಭಯಾನಕ ಕುತಂತ್ರ ಬುದ್ಧಿಯನ್ನು ಮುಂದುವರೆಸಿದೆ.

    ಗಡಿಯಲ್ಲಿನ ಗಲಾಟೆ ನಂತರ ಭಾರತದಿಂದ ಚೀನಾದ ವಿರುದ್ಧ ಡಿಜಿಟಲ್‌ ಸ್ಟ್ರೈಕ್‌ ಶುರುವಾಗಿದೆ. ಇದಾಗಲೇ ಟಿಕ್‌ಟಾಕ್‌ ಸೇರಿದಂತೆ ನೂರಾರು ಚೀನಿ ಆ್ಯಪ್‌ಗಳನ್ನು ಬ್ಯಾನ್‌ ಮಾಡುವ ಜತೆಗೆ, ಚೀನಾದ ವಸ್ತುಗಳ ಮೇಲೆ ಭಾರತ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಹೊಂದಿರುವ ಚೀನಾದ ಇದೀಗ ಭಾರತವನ್ನು ಬೆದರಿಸಲು ‘ಬೀಜ ಭಯೋತ್ಪಾದನೆ’ ಶುರು ಮಾಡಿದೆ.

    ಕಳೆದ ವಾರ ಚೀನಾ ವಿಳಾಸದ ಕೆಲ ಬೀಜಗಳು ಅಮೆರಿಕದಲ್ಲಿ ಪತ್ತೆಯಾಗಿದ್ದವು. ಈ ಬೀಜಗಳನ್ನು ಯಾರೂ ನೆಡಬಾರದು ಎಂದು ಡೊನಾಲ್ಡ್‌ ಟ್ರಂಪ್‌ ಸರ್ಕಾರ ಅಲ್ಲಿಯ ಪ್ರಜೆಗಳಿಗೆ ಎಚ್ಚರಿಕೆ ನೀಡಿತ್ತು.

    ಇದೀಗ ಅದೇ ಸ್ಟ್ರೈಕ್‌ ಅನ್ನು ಚೀನಾ ಭಾರತದ ಮೇಲೆ ಪ್ರಯೋಗಿಸಲು ಶುರುಮಾಡಿದೆ. ಭಾರತದ ಆಹಾರ ವ್ಯವಸ್ಥೆ ಮೇಲೆ ಚೀನಾ ತನ್ನ ಮುಂದುವರೆದ ಜೈವಿಕ ತಂತ್ರಜ್ಞಾನ ಬಳಸಿಕೊಂಡು ಇಡೀ ಭಾರತದ ಆಹಾರದ ಮೇಲೆ ಇನ್ನಿಲ್ಲದ ಸಮಸ್ಯೆ ತಂದೊಡ್ಡುವ ಆತಂಕ ಎದುರಾಗಿದೆ.

    ವಿಷಯುಕ್ತ ಬೀಜಗಳನ್ನು ರವಾನೆ ಮಾಡುವ ಮೂಲಕ ಭಾರತದ ಆಹಾರದ ಮೇಲೆ ಚೀನಾ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಬೀಜ ನಿಗಮ (NSAI) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೆ. ಗುಪ್ತಚರ ಇಲಾಖೆಗೆ ಈ ಮಾಹಿತಿ ಬಂದಿದ್ದು, ಜಾಗೃತರಾಗಿರುವಂತೆ ಅದು ಹೇಳಿದೆ. ಚೀನಾ ಸದ್ದಿಲ್ಲದೆ ಬೀಜ ಭಯೋತ್ಪಾದನೆ ಮಾಡಬಹುದು ಎಚ್ಚರದಿಂದ ಇರಿ ಎಂದು ಹೇಳಿದೆ.

    ಇದನ್ನೂ ಓದಿ: ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌

    ಭಾರತದ ಕಂಪನಿಗಳು ಚೀನಾದಲ್ಲಿ ಬೀಜ ಘಟಕ ಸ್ಥಾಪಿಸಲು ಸಾಧ್ಯವಿಲ್ಲ, ಆದರೆ ಚೀನಾದವರು ಭಾರತದಲ್ಲಿ ಆ ಕೆಲಸ ಮಾಡಬಲ್ಲರು. ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಬೀಜ ಆಮದು ಮಾಡಿಕೊಳ್ಳಲು ಅವಕಾಶ ಇಲ್ಲ. ಆದರೆ ಚೀನಾ ಅನ್ಯ ಮಾರ್ಗ ಅನುಸರಿಸಬಹುದು ಎಂಬ ಎಚ್ಚರಿಕೆಯನ್ನು ಅದು ನೀಡಿದೆ.

    ಭಾರತದ ಹವಾಮಾನ ಮತ್ತು ಕೃಷಿ ವ್ಯವಸ್ಥೆಯನ್ನು ಚೀನಾ ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಯನ ಮಾಡಿಕೊಂಡು ಬಂದಿದೆ. ಸೂಕ್ಷ್ಮಾಣು ವ್ಯವಸ್ಥೆಯೂ ಅದಕ್ಕೆ ಗೊತ್ತು. ಆದ್ದರಿಂದ ಇಂಥದ್ದೊಂದು ಕಿತಾಪತಿಯನ್ನು ಚೀನಾ ಮಾಡುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಕೆ ನೀಡಿದೆ.

    ಇಲ್ಲಿಯವರೆಗೆ ಭಾರತದ ಮಾರುಕಟ್ಟೆಯಲ್ಲಿ ಚೀನಾದ ಯಾವ ಬೀಜಗಳು ಕಂಡುಬಂದಿಲ್ಲ. ಆದರೂ ಬಿಟಿ ಹತ್ತಿಯನ್ನು ಇದೆ ರೀತಿ ಭಾರತದಲ್ಲಿ ಚೀನಾ ಹೊಕ್ಕಿಸಿತ್ತು. ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಸದ್ದಿದಲ್ಲದೆ ತನ್ನ ಕೆಲಸ ಮಾಡಿತ್ತು. ಆದ್ದರಿಂದ ಎಚ್ಚರಿಕೆ ಅಗತ್ಯ ಎಂದಿದೆ.

    ರೋಗವೂ ಇಲ್ಲ, ಲಕ್ಷಣವೂ ಇಲ್ಲ, ಆದರೂ ಐಸಿಯುಗಳಲ್ಲಿ ಲಕ್ಷ ಲಕ್ಷ ಕೊಟ್ಟು ಬೆಡ್‌ ಬುಕಿಂಗ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts