More

    ವಿದ್ಯಾರ್ಥಿವೇತನ ವಿತರಣೆಗೆ ವಿನೂತನ ತಂತ್ರಜ್ಞಾನ- ದೇಶದಲ್ಲೇ ಮೊದಲು; ಏನಿದು ಟೆಕ್ನಿಕ್​? ಇಲ್ಲಿದೆ ಡಿಟೇಲ್ಸ್​

    ಬೆಂಗಳೂರು: ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಿಗಾಗಿ ರಾಜ್ಯ ವಿದ್ಯಾರ್ಥಿ ವೇತನ ವಿತರಣಾ ಪದ್ಧತಿ ಜಾರಿಗೆ ತರಲಾಗಿದೆ. ವಿದ್ಯಾರ್ಥಿ ವೇತನ ವಿತರಣಾ ವ್ಯವಸ್ಥೆಯ ನ್ಯೂನತೆಗಳ ಯನ್ನು ತಪ್ಪಿಸಲು ಈ ವ್ಯವಸ್ಥೆ ರೂಪಿಸಲಾಗಿದೆ.

    1.20 ಕೋಟಿ ಪ್ರಾಥಮಿಕ ಶಾಲಾ ಮಕ್ಕಳು, 65 ವಿಶ್ವವಿದ್ಯಾಲಯದ 15 ಲಕ್ಷ ಮತ್ತು 13000 ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ದಾಖಲೆ ನಿರ್ವಹಣೆ, ಡೇಟಾ ಸಂಗ್ರಹ ದೊಡ್ಡ ಸಮಸ್ಯೆ ಆಗಿತ್ತು‌. ಈ ಸಮಸ್ಯೆ ಪರಿಹಾರಕ್ಕೆ ವಿನೂತನ ತಂತ್ರಜ್ಞಾನ ನೆರವಾಗಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಂಪೂರ್ಣ ಕಾಗದ ರಹಿತ ವ್ಯವಸ್ಥೆ ಇದಾಗಿದ್ದು, ದಾಖಲೆಗಳ ಅಪ್ಲೋಡ್ ಅವಶ್ಯಕತೆ ಇಲ್ಲದ ಸರಳ ವ್ಯವಸ್ಥೆ ಇದಾಗಿದೆ ಎಂದರು.

    ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ಮತ್ತು ಹೆಸರು, ಎಸ್ಎಟಿಎಸ್ ಐಡಿ, ಜಾತಿ ಮತ್ತು ಆದಾಯ ಪ್ರಮಾಣವು ಪತ್ರದ ಆರ್ ಡಿ ಸಂಖ್ಯೆಗಳನ್ನು ನೀಡಿದರೆ ಸಾಕು ಎಂದು ತಿಳಿಸಿದರು.
    1ನೇ ತರಗತಿಯಿಂದ ಪದವಿ, ಸನಾತಕ ಪದವಿ ಸೇರಿದಂತೆ ಎಲ್ಲ ಹಂತದ ವಿದ್ಯಾರ್ಥಿಗಳಿಗೆ ಈ ತಂತ್ರಜ್ಞಾನ ಪ್ರಯೋಜನ ಪಡೆಯಬಹುದು.

    ನಿರುದ್ಯೋಗಿಗಳಗೆ ಗುಡ್​ನ್ಯೂಸ್ ಕೊಟ್ಟ ಸಿಎಂ: ಐದು ವರ್ಷಗಳಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ

    ಎರಡನೆಯ ಪತ್ನಿಯ ಮಕ್ಕಳೂ ಅನುಕಂಪದ ಹುದ್ದೆಗೆ ಅರ್ಹರು: ಹೈಕೋರ್ಟ್​ನಿಂದ ಮಹತ್ವದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts