More

    ಮಕ್ಕಳನ್ನು ಶಾಲೆಗೆ ಸೇರಿಸಲು ಇನ್ನೂ ಒಂದು ವಾರ ಕಾಲಾವಕಾಶ ನೀಡಿದ ಸರ್ಕಾರ

    ಬೆಂಗಳೂರು : 2020 -21 ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ದಾಖಲಾತಿಗೆ ನೀಡಿದ್ದ ಕಾಲಾವಕಾಶವನ್ನು ಅಕ್ಟೋಬರ್ 16ರ ವರೆಗೆ ವಿಸ್ತರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅಕ್ಟೋಬರ್ 16 ರವರೆಗೆ ದಾಖಲಾತಿಗೆ ಅವಕಾಶ ನೀಡಲಾಗಿದೆ.

    ಮಕ್ಕಳನ್ನು ಶಾಲೆಗೆ ಸೇರಿಸಲು ಇನ್ನೂ ಒಂದು ವಾರ ಕಾಲಾವಕಾಶ ನೀಡಿದ ಸರ್ಕಾರಕರೊನಾ ವೈರಸ್ ಹಿನ್ನೆಲೆಯಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಅವಧಿಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆ ಮನವಿಗೆ ಸ್ಪಂದಿಸಿದೆ.ಈ ಮೊದಲು ಸೆಪ್ಟೆಂಬರ್‌ 30ರ ಒಳಗೆ ಮಕ್ಕಳ ದಾಖಲಾತಿಯನ್ನು ಪೂರ್ಣಗೊಳಿಸಲು ಸರ್ಕಾರ ಹೇಳಿತ್ತು. ಆದರೆ ಹಲವು ಪಾಲಕರು ಈ ವರ್ಷ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕಿದ್ದರು. ಆದ್ದರಿಂದ ಕೆಲವು ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿವೆ.

    ಇದರಿಂದ ಶಾಲೆಯ ಆಡಳಿಯ ಮಂಡಳಿ ಮನವಿ ಸಲ್ಲಿಸಿದ್ದವು. ಅದನ್ನೀಗ ಸರ್ಕಾರ ಪುರಸ್ಕರಿಸಿದೆ. ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಿದೆ.

    24 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಣೆ- ಪ್ರವೇಶ​ ಪಡೆಯುವಾಗ ಎಚ್ಚರ: ಇಲ್ಲಿದೆ ವಿವರ

    ಟಿಕ್‌ಟಾಕ್‌ ಸ್ಟಾರ್‌ ಪ್ರತೀಕ್‌ ಕಾರು ಅಪಘಾತದಲ್ಲಿ ದುರ್ಮರಣ

    ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts