More

    ಶಾಲಾ ಪ್ರವೇಶಕ್ಕೆ ಕ್ಷಣಗಣನೆ… ಶಿಕ್ಷಣ ಇಲಾಖೆ ಹೇಳಿರುವ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ….

    ಬೆಂಗಳೂರು: ಕರೊನಾದಿಂದ ಲಾಕ್​ಡೌನ್​ ಆಗಿದ್ದ ಶಾಲೆಗಳು ಜೂ.15ರಿಂದ 2021- 22ನೇ ಸಾಲಿನ ಶೈಕ್ಷಣಿಕದ ಪ್ರವೇಶ ಪ್ರಕ್ರಿಯೆ ಆರಂಭಿಸಲಿವೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ದೂರ ಊರುಗಳಲ್ಲಿದ್ದ ಶಿಕ್ಷಕರು ಈಗಾಗಲೆ ಶಾಲೆಗಳಿರುವ ಊರಿಗೆ ಸೇರಿದ್ದು, ಮಂಗಳವಾರದಿಂದ ಶಾಲೆಗೆ ತೆರಳಲಿದ್ದಾರೆ. ಜುಲೈ 1ರಿಂದ ತರಗತಿಗಳು ಆರಂಭವಾಗಲಿದೆ.

    ಶಿಕ್ಷಕರು ಶಾಲೆಗೆ ಹಾಜರಾಗಿ ಶಾಲಾ ಸ್ವಚ್ಛತೆ, ಪ್ರವೇಶ ಪ್ರಕ್ರಿಯೆ ಸೇರಿ ಶಾಲಾ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್​ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಜು.1ರಂದು ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕಿದೆ. ಆದರೆ, ಕೋವಿಡ್​ ಹಿನ್ನೆಲೆಯಲ್ಲಿ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಸಾಧ್ಯವಾಗದಿದ್ದರೆ ಆನ್​ಲೈನ್​ ಬೋಧನೆ ನಡೆಸುವಂತೆಯೂ ಸೂಚಿಸಲಾಗಿದೆ. ಇದಕ್ಕಾಗಿ ಪಾಲಕರ ಬಳಿ ಟಿವಿ, ಆ್ಯಂಡ್ರಾಯ್ಡ್​ ಮೊಬೈಲ್​, ರೇಡಿಯೋ, ಕಂಪ್ಯೂಟರ್​, ಇಂಟರ್​ನೆಟ್​ ಸೇರಿ ಯಾವ ತಾಂತ್ರಿಕ ಸೌಲಭ್ಯಗಳಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

    ಈ ಜಿಲ್ಲೆಗಳಿಗೆ ವಿನಾಯ್ತಿ: ಕೋವಿಡ್​ ಕಠಿಣ ರ್ನಿಬಂಧಗಳು ಇನ್ನೂ ಜಾರಿಯಲ್ಲಿರುವ ಜಿಲ್ಲೆಗಳಿಗೆ ಶಾಲಾ ಪ್ರವೇಶ ಪ್ರಕ್ರಿಯೆ ಆರಂಭದಿಂದ ವಿನಾಯ್ತಿ ನೀಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ (ಶೈಕ್ಷಣಿಕ ಜಿಲ್ಲೆ), ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಿಕ್ಷಕರು ಮನೆಯಿಂದಲೇ ಕಲಿಕಾ ಪೂರ್ವ ತಯಾರಿಗಾಗಿ ಕಾರ್ಯನಿರ್ವಹಿಸುವಂತೆ ಕೋರಲಾಗಿದೆ. ಕೋವಿಡ್​ ನಿಯಮಗಳು ಭಾಗಶ@ ತೆರವಾದ ನಂತರ ಶಾಲೆಗಳಿಗೆ ತೆರಳಿ ಇಲಾಖೆಯ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

    ಏನು ಪೂರ್ವ ತಯಾರಿ?: ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಸೇರಿ ಎಲ್ಲರೂ ಹಾಜರಿರಬೇಕು. ಸ್ವಚ್ಛತಾ ಕಾರ್ಯ ಸೇರಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಸರಿಪಡಿಸಬೇಕು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ಚರ್ಚಿಸುವುದು, ಶಾಲಾ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿ, ಶಾಲಾ ಪಂಚಾಂಗ ಸಿದ್ಧಪಡಿಸುವುದು, ಮುಖ್ಯ ಶಿಕ್ಷಕರು ತರಗತಿ ಶಿಕ್ಷಕರನ್ನು ನೇಮಿಸುವುದು, ಹಿಂದಿನ ವರ್ಷದ ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ಹಾಜರಾತಿ ವಹಿ ಸಿದ್ಧಪಡಿಸುವ ಕಾರ್ಯಗಳನ್ನು ನಡೆಸುವಂತೆ ತಿಳಿಸಲಾಗಿದೆ.

    ಸಂಚಾರಿ ವಿಜಯ್‌ಗೆ ಇನ್ನೊಮ್ಮೆ ಪರೀಕ್ಷೆ: ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ

    ಹುಡುಗಿ ಫಿಕ್ಸ್‌ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್‌ ಏರಿ ಕುಳಿತ ವಿಜಯನಗರದ ಕುವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts