More

    VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

    ತಿರುವನಂತಪುರ: ಶೂಟಿಂಗ್​ ವೇಳೆ ಅನೇಕಬಾರಿ ಅನೇಕ ರೀತಿಯ ಅನಾಹುತಗಳು ಸಂಭವಿಸುವುದು ಮಾಮೂಲು. ಅದರಲ್ಲಿಯೂ ಹೆಚ್ಚಾಗಿ ಅಪಾಯಕಾರಿ ಸ್ಟಂಟ್​ಗಳನ್ನು ಖುದ್ದು ನಾಯಕ-ನಾಯಕಿಯರೇ ಮಾಡಲು ಮುಂದಾದಾಗ ಇಂಥ ಅಪಾಯಗಳು ಸಂಭವಿಸುವುದುಂಟು.

    ಅಂಥದ್ದೇ ಒಂದು ಅನಾಹುತ ಮಲಯಾಳಂ ಸೆಟ್​ನಲ್ಲಿ ಇಂದು ನಡೆದಿದೆ. ಖ್ಯಾತ ನಟ ಜಯಸೂರ್ಯ ಅವರು ಅಭಿನಯಿಸುತ್ತಿರುವ “ವೆಲ್ಲಂ” ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.

    ಈ ಚಿತ್ರದಲ್ಲಿ ಜಯಸೂರ್ಯ ಅವರು ಪವರ್​ ಟಿಲ್ಲರ್​ ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಟಿಲ್ಲರ್​ ಅವರನ್ನು ಎಳೆದುಕೊಂಡು ಹೋಗಿದೆ. ಕೂಡಲೇ ಭಯಭೀತರಾದ ನಟ ದಿಗಿಲುಗೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ ಕೂಡಲೇ ಓಡೋಡಿ ಬಂದಿದ್ದಾರೆ.

    ಅವರೆಲ್ಲರೂ ಸೇರಿ ನಟನನ್ನು ತಕ್ಷಣವೇ ಹಿಡಿದುಕೊಂಡ ಕಾರಣ, ಭಾರಿ ಅನಾಹುತ ತಪ್ಪಿದೆ. ಪವರ್​ ಟಿಲ್ಲರ್​ ದೃಶ್ಯವು ಸ್ವಲ್ಪಅಪಾಯಕಾರಿಯಾಗಿದ್ದು, ಡ್ಯೂಪ್​ ಬಳಸಿಕೊಳ್ಳುವಂತೆ ಹೇಳಲಾಗಿತ್ತು. ಆದರೆ ಜಯಸೂರ್ಯ ಅವರು ಈ ದೃಶ್ಯವನ್ನು ತಾವೇ ಮಾಡುವುದಾಗಿ ಹೇಳಿ ಅದರ ತರಬೇತಿ ಕೂಡ ಪಡೆದುಕೊಂಡಿದ್ದರು.

    ಆದರೆ ಶೂಟಿಂಗ್​ ವೇಳೆ ನಿಯಂತ್ರಣ ತಪ್ಪಿಬಿಟ್ಟಿದೆ ಎಂದು ಚಿತ್ರತಂಡ ಹೇಳಿದೆ.

    ಇದೇ ವೇಳೆ ತಮ್ಮ ನೂರನೇ ಚಿತ್ರವಾದ “ಸನ್ನಿ”ಯಲ್ಲಿ ಜಯಸೂರ್ಯ ನಟಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣ ಮುಗಿಸಿ ಈ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದರು. ಸ್ವಲ್ಪ ಸುಸ್ತಾಗಿದ್ದರಿಂದ ಹೀಗಾಗಿರಬಹುದು ಎಂದು ತಂಡ ಹೇಳಿದೆ. ಒಟ್ಟಿನಲ್ಲಿ ಅಪಾಯ ತಪ್ಪಿದೆ.

    ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದ್ದು, ಜಯಸೂರ್ಯ ಅವರ ಅಭಿಮಾನಿಗಳನ್ನು ಕಂಗೆಡಿಸಿದೆ. ತಮ್ಮ ನೆಚ್ಚಿನ ನಟನಿಗೆ ಏನೂ ಅಪಾಯ ಆಗದೇ ಇರುವ ಕಾರಣ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಈ ದೃಶ್ಯಕ್ಕೆ ಡ್ಯೂಪ್​ ಬಳಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.

    ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

    400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಕೌತುಕ- ನೀವೂ ಕಣ್ತುಂಬಿಸಿಕೊಳ್ಳಬಹುದು ಈ ‘ಮಹಾ ಸಂಯೋಗ’

    ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts