More

    ಪದವೀಧರರಿಗೆ ಗುಡ್‌ನ್ಯೂಸ್‌- 6100 ಮಂದಿ ಅಪ್ರೆಂಟಿಸ್‌ಗೆ ಆಹ್ವಾನಿಸಿದ ಎಸ್‌ಬಿಐ

    ಸ್ಟೇಟ್​ ಬ್ಯಾಂಕ್​ ಆಫ್‌​ ಇಂಡಿಯಾ ದೇಶಾದ್ಯಂತ ಪದವೀಧರರಿಗೆ ಉದ್ಯೋಗ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಅರ್ಜಿ ಆಹ್ವಾನಿಸಿದೆ. ಒಬ್ಬ ಅಭ್ಯರ್ಥಿ ಒಂದು ರಾಜ್ಯದಿಂದ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದುಕೊಂಡ ರಾಜ್ಯದ ಸ್ಥಳಿಯ ಭಾಷೆಯ ಜ್ಞಾನ ಅವಶ್ಯ. ಈ ತರಬೇತಿಯು 1 ವರ್ಷದ ಅವಧಿಯದ್ದಾಗಿದೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಒಟ್ಟು 200 ಜನರಿಗೆ ಈ ಅವಕಾಶ ದೊರೆಯಲಿದೆ. ಇದು ಕೇವಲ ತರಬೇತಿ ಆಗಿದ್ದು, ಬ್ಯಾಂಕ್​ನಲ್ಲಿ ಕಾಯಂ ಉದ್ಯೋಗಕ್ಕೆ ಹಕ್ಕು ಎಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯರ್ಥಿಗಳು ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅಪ್ರೆಂಟೀಸ್​ ಆ್ಯಕ್ಟ್​ 1961ರ ಅಡಿಯಲ್ಲಿ ಅಭ್ಯರ್ಥಿಯು ಎಸ್​ಬಿಐನಲ್ಲಿ / ಯಾವುದೇ ಸಂಸ್ಥೆಯಲ್ಲಿ ಅಪ್ರೆಂಟೀಸ್​ ತರಬೇತಿ ಪಡೆದಿರಬಾರದು ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಹೊಂದಿರಬಾರದು. ಆನ್​ಲೈನ್​ ಅರ್ಜಿ ಸಲ್ಲಿಕೆ ವಿಧಾನ ಹಾಗೂ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

    ಎಲ್ಲೆಲ್ಲಿ ಅವಕಾಶ?
    ಕರ್ನಾಟಕದಲ್ಲಿ ಒಟ್ಟು 200 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಬಾಗಲಕೋಟೆ, ಉತ್ತರಕನ್ನಡದಲ್ಲಿ ತಲಾ 8ಸ್ಥಾನ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ದಣ ಕನ್ನಡ, ಕಲಬುರಗಿ, ವಿಜಯಪುರ, ಧಾರವಾಡಗಳಲ್ಲಿ ತಲಾ 10 ಸ್ಥಾನ, ತುಮಕೂರು-9, ಬೀದರ್​, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ಯಾದಗಿರಿ, ರಾಯಚೂರು, ರಾಮನಗರ, ಶಿವಮೊಗ್ಗಗಳಲ್ಲಿ ತಲಾ 5 ಜನರಿಗೆ ಉದ್ಯೋಗ ತರಬೇತಿ ನೀಡಲಾಗುತ್ತದೆ.

    ವಿದ್ಯಾರ್ಹತೆ: 31.10.2020ರ ಒಳಗೆ ಮಾನ್ಯತೆ ಪಡೆದ ವಿವಿ/ಸಂಸ್ಥೆಯಲ್ಲಿ ಯಾವುದೇ ಪದವಿ.

    ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಸ್ಟೈಪೆಂಡ್‌​: ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ 15,000 ರೂ. ಸ್ಟೆ$ಪೆಂಡ್​ ನೀಡಲಾಗುವುದು. ಅಪ್ರೆಂಟೀಸ್​ಗಳು ಇತರ ಯಾವುದೇ ಭತ್ಯೆಗೆ ಅರ್ಹರಾಗಿರುವುದಿಲ್ಲ.

    ಆಯ್ಕೆ ಪ್ರಕ್ರಿಯೆ: ಆನ್​ಲೈನ್​ ಮೂಲಕ ಲಿಖಿತ ಪರೀೆ ನಡೆಸಲಾಗುವುದು. ಜನರಲ್​/ ಫಫೈನಾನ್ಶಿಯಲ್​ ಅವೇರ್​ನೆಸ್​, ಜನರಲ್​ ಇಂಗ್ಲಿಷ್​, ಕ್ವಾಂಟಿಟೇಟೀವ್​ ಆಪ್ಟಿಟ್ಯೂಡ್​, ರೀಸನಿಂಗ್​ ಎಬಿಲಿಟಿ ಆ್ಯಂಡ್​ ಕಂಪ್ಯೂಟರ್​ ಆಪ್ಟಿಟ್ಯೂಡ್​ ವಿಷಯ ಆಧಾರಿತ ಪ್ರಶ್ನೆಗಳಿರುತ್ತವೆ. ಅಭ್ಯಥಿರ್ಯ ಶೈಕ್ಷಣಿಕ ಅರ್ಹತೆ, ವಯಸ್ಸು, ಜಿಲ್ಲಾವಾರು ಇರುವ ತರಬೇತಿಯ ಸ್ಥಾನ ಹಾಗೂ ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 26.7.2021
    ಅಧಿಸೂಚನೆಗೆ: https://bit.ly/3jW63WQ
    ಮಾಹಿತಿಗೆ:http://www.sbi.co.in

    ನರೇಗಾ ಯೋಜನೆಯಲ್ಲಿ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

    ಕೈಗಾ ಅಣುಶಕ್ತಿ ಘಟಕದಲ್ಲಿ ಇಂಜಿನಿಯರ್​ಗಳಿಗೆ ಆಹ್ವಾನ: 26 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts