More

    ಸಿಸಿಬಿ ವಶಕ್ಕೆ ಸಂಪತ್​ರಾಜ್​ – ಕೋರ್ಟ್​ ಆದೇಶ: ‘ಪ್ರಥಮಪ್ರಜೆ’ ಇತಿಹಾಸಕ್ಕೆ ಕಪ್ಪುಚುಕ್ಕೆ!

    ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಾಂಗ್ರೆಸ್​ನ ಮಾಜಿ ಮೇಯರ್​ ಸಂಪತ್​ ಕುಮಾರ್​ ಅವರನ್ನು ಎರಡು ದಿನಗಳವರೆಗೆ ಸಿಸಿಬಿ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.

    ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಹಲವಾರು ಮನೆಗಳಿಗೆ ಬೆಂಕಿ ಇಟ್ಟು, ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಪತ್​ಕುಮಾರ್​, ತಲೆಮರೆಸಿಕೊಂಡಿದ್ದರು. ನಿನ್ನೆ ಅವರನ್ನು ಕೊನೆಗೂ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರನ್ನು 67ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯದ ಮಟ್ಟಿಗೆ ಎರಡು ದಿನಗಳವರೆಗೆ ಅವರನ್ನು ಪೊಲೀಸರ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.

    ಬೃಹತ್​ ಮಹಾನಗರ ಪಾಲಿಕೆಯ ಮೇಯರ್​ ಆಗಿ ಆಯ್ಕೆಯಾದವರನ್ನು ಆ ನಗರದ ಪ್ರಥಮ ಪ್ರಜೆ ಎನ್ನಲಾಗುತ್ತದೆ. ಭಾರತ ದೇಶಕ್ಕೆ ರಾಷ್ಟ್ರಪತಿಗಳು ಪ್ರಥಮ ಪ್ರಜೆ ಇದ್ದಂತೆ, ಮಹಾನಗರಗಳಿಗೆ ಆಯಾ ಮೇಯರ್​ಗಳೇ ಪ್ರಥಮ ಪ್ರಜೆ. ಇಂಥ ಒಂದು ಗೌರವ ಸ್ಥಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ ಸಂಪತ್​ಕುಮಾರ್​ ಎಂದು ಇದೀಗ ಭಾರಿ ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ಮಾಜಿ ಮೇಯರ್ ಸಂಪತ್​ ರಾಜ್​ ಬಂಧನ; ಕೊನೆಗೂ ಸಿಕ್ಕಿಬಿದ್ದ ‘ಹಳ್ಳಿ ಗಲಭೆ’ ಕಿಂಗ್​ಪಿನ್​

    ಇದಕ್ಕೆ ಕಾರಣ, ಇದುವರೆಗೆ ಮೇಯರ್​ ಸ್ಥಾನದಲ್ಲಿ ಇದ್ದ ಯಾರು ಕೂಡ ಬಂಧನಕ್ಕೆ ಒಳಗಾಗಿರಲಿಲ್ಲ ಎನ್ನಲಾಗಿದೆ. ಟೌನ್ ಮುನ್ಸಿಪಲ್ ಆಗಿದ್ದ ಬೆಂಗಳೂರು ನಂತರ ನಗರಸಭೆ, ಕಾರ್ಪೋರೇಷನ್​, ಬಿಎಂಪಿ ಹಾಗೂ ನಂತರ ಬಿಬಿಎಂಪಿ ಆಗಿ ಪುನಾರಚನೆಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಒಟ್ಟೂ 53 ಮಂದಿ ಮೇಯರ್​ ಆಗಿ ಆಯ್ಕೆಯಾಗಿದ್ದು, ಇಂಥದ್ದೊಂದು ಕ್ರಿಮಿನಲ್​ ಪ್ರಕರಣದಲ್ಲಿ ಆರೋಪಿಯಾದವರು ಸಂಪತ್​ರಾಜ್​ ಅವರೇ ಮೊದಲಿಗರು ಎನ್ನಲಾಗಿದೆ.

    ಈ ನಡುವೆಯೇ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾರ್ಜ್​ಷೀಟ್​ ಸಲ್ಲಿಸಿದ ಮಾತ್ರಕ್ಕೆ ಯಾರೂ ಅಪರಾಧಿಯಲ್ಲ, ಸದ್ಯ ಸಂಪತ್​ಕುಮಾರ್​ ಆರೋಪಿಯಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಸಂಪತ್​ರಾಜ್​ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

    ಗಲಭೆ ಆರೋಪಿ ಸಂಪತ್​ರಾಜ್​ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…

    ದಿನಕ್ಕೊಂದು ಮೊಟ್ಟೆ- ಶುರುವಾಗುವುದು ಶುಗರ್​: ಅಧ್ಯಯನದಲ್ಲಿ ಆತಂಕದ ವಿಷಯ ಬಹಿರಂಗ!

    ಇಸ್ಲಾಂನಲ್ಲಿ ಇರುವುದೇನು? ಆಗುತ್ತಿರುವುದೇನು? ದಾಖಲೆ ನಿರ್ಮಿಸಿ ಕಾಶ್ಮೀರಕ್ಕೆ ಹೊರಟ ಹಿಂದೂ ಯುವಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts