More

    ಗಲಭೆ ಆರೋಪಿ ಸಂಪತ್​ರಾಜ್​ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…

    ಬೆಂಗಳೂರು: ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೆ.ಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಸೇರಿದಂತೆ ಇಡೀ ಪ್ರದೇಶಕ್ಕೆ ಕೊಳ್ಳಿ ಇಡಲು ಪ್ರಚೋದನೆ ನೀಡಿರುವ ಆರೋಪಿ ಸಂಪತ್​ರಾಜ್​ ಆಸ್ಪತ್ರೆಯಿಂದ ನಿಗೂಢವಾಗಿ ಕಣ್ಮರೆಯಾಗಿ ಕ್ಷಣ ಕ್ಷಣಕ್ಕೂ ಬೇರೆ ಬೇರೆ ಜಾಗಕ್ಕೆ ಹೋಗುತ್ತಿದ್ದುದರಿಂದ ಪೊಲೀಸರು ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದರು.

    ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳ ಕಣ್ಣಿಗೆ ಕಾಣಿಸದಂತೆ, ಅವರು ಸ್ಥಳಕ್ಕೆ ಧಾವಿಸುವ ಮೊದಲೇ ಸ್ಥಳಾಂತರಗೊಂಡು ಪೊಲೀಸರದ್ದೇ ದಿಕ್ಕುತಪ್ಪಿಸುತ್ತಿರುವ ಆರೋಪ ಹೊತ್ತ ಸಂಪತ್​ರಾಜ್​ ಕೊನೆಗೂ ನಿನ್ನೆ ರಾತ್ರಿ ಸಿಕ್ಕಿಬಿದ್ದಿದ್ದಾರೆ.

    ಇವರು ಸಿಕ್ಕಿಬೀಳುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮಾಧ್ಯಮಗಳ ಮುಂದೆ ಬಂದು ನೀಡಿರುವ ಪ್ರತಿಕ್ರಿಯೆ ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಪೊಲೀಸರು ಹುಡುಕಿದರೂ ಸಿಗದ ಸಂಪತ್​ರಾಜ್​ ಎಲ್ಲಿದ್ದರು ಎಂದು ಡಿ.ಕೆ.ಶಿವಕುಮಾರ್​ ಅವರಿಗೆ ಮೊದಲೇ ಗೊತ್ತಿತ್ತಾ ಎಂದು ಇದೀಗ ಪ್ರಶ್ನಿಸಲಾಗುತ್ತಿದೆ. ಏಕೆಂದರೆ, ಅವರು ಹೇಳಿರುವ ಪ್ರಕಾರ, ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ. ಆರೋಗ್ಯ ಸರಿ ಇರಲಿಲ್ಲ. ಸುಖಾಸುಮ್ಮನೇ ಅವರು ಓಡಿಹೋಗಿದ್ದಾರೆ ಎಂಬ ಸುದ್ದಿ ಹಾಕಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಮಾಜಿ ಮೇಯರ್ ಸಂಪತ್​ ರಾಜ್​ ಬಂಧನ; ಕೊನೆಗೂ ಸಿಕ್ಕಿಬಿದ್ದ ‘ಹಳ್ಳಿ ಗಲಭೆ’ ಕಿಂಗ್​ಪಿನ್​

    ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೊದಲು ನನ್ನನ್ನು ಟಾರ್ಗೆಟ್ ಮಾಡಿದ್ದರು, ಇದೀಗ ಸಂಪತ್ ರಾಜ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

    ತಮಗೆ ಕರೊನಾ ಬಂದಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್​ಕುಮಾರ್​, ವೈದ್ಯರಿಂದ ಪದೇ ಪದೇ ಕರೊನಾ ಗುಣಮುಖವಾಗಿಲ್ಲ ಎಂಬ ಸರ್ಟಿಫಿಕೇಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂಬ ಗಂಭೀರ ಆರೋಪವೂ ಇದೆ. ನಂತರ ಆಸ್ಪತ್ರೆಯಿಂದಲೇ ಕಣ್ಮೆರೆಯಾಗಿದ್ದರು ಎನ್ನಲಾಗಿದೆ. ಆದರೆ ಇದೀಗ ಡಿ.ಕೆ.ಶಿವಕುಮಾರ್​ ಅವರು ಇವೆಲ್ಲಾ ಸುಳ್ಳು ಎಂಬ ಹೇಳಿಕೆ ನೀಡಿದ್ದಾರೆ.

    ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆನ್ನುವ ಶಾಸಕ ಅಖಂಡ ಅವರ ಬೇಡಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕುರಿತು ಹೇಳಿರುವ ಡಿ.ಕೆ.ಶಿ, ಅಖಂಡ ಅವರು ನನ್ನ ಬಳಿ ಮಾತನಾಡಿಲ್ಲ. ಅವರು ಕೆಪಿಸಿಸಿ ಕಚೇರಿ ಅಥವಾ ನನ್ನ ಮನೆಗೆ ಎಲ್ಲಿಯಾದರೂ ಬಂದು ಮಾತನಾಡಲಿ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದರೆ ಸಮಸ್ಯೆ ಬಗೆಹರಿಸಬಹುದು ಎಂದರು.

    ಇದನ್ನೂ ಓದಿ: ಸಂಪತ್​ ರಾಜ್​ ಅರೆಸ್ಟ್​; ಬಂಧನಕ್ಕೂ ಮುನ್ನ ಏನೇನಾಗಿತ್ತು?

    ಸಂಪತ್​ರಾಜ್​ ಅವರ ವಿರುದ್ಧ ಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿ, ಒಬ್ಬರ ವೈಯುಕ್ತಿಕ ಹೇಳಿಕೆ ಮೇಲೆ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಬಂದು ನನ್ನ ಬಳಿ ಮಾತನಾಡಲಿ. ಕಾನೂನಿಗಿಂತ ಸಂಪತ್ ರಾಜ್, ಡಿಕೆಶಿ ಯಾರೂ ಮೇಲಲ್ಲ. ಬಿಜೆಪಿ ನಾಯಕರು ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆಯಾಗಬೇಕು. ಸಂಪತ್ ರಾಜ್’ರನ್ನು ಬಂಧನಕ್ಕೊಳಪಡಿಸುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆಂದು ಹೇಳಿದ್ದಾರೆ.

    ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

    ಪಟಾಕಿಗೆ ಬಲಿಯಾದ ಬಿಜೆಪಿ ಸಂಸದೆಯ ಏಕೈಕ ಮೊಮ್ಮಗಳು!

    ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts