More

    ಹೆಣ್ಣೆಂಬ ಕಾರಣಕ್ಕೆ ಈ ಪ್ರತಿಭಾನ್ವಿತ ಅಥ್ಲೆಟ್​ನ ಕನಸು ನುಚ್ಚುನೂರು,​ ತಂಡದಿಂದ ಕೈಬಿಟ್ಟ ಕ್ರೀಡಾ ಪ್ರಾಧಿಕಾರ!

    ಚೆನ್ನೈ: ಈ ಚಿತ್ರದಲ್ಲಿ ಕಾಣುತ್ತಿರುವ 18 ವರ್ಷದ ಯುವತಿಯ ಹೆಸರು ಸಮೀಹಾ ಬಾರ್ವಿನ್. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಡೈಯಾಲುಮೂಡು ಪಟ್ಟಣದ ಅಥ್ಲೀಟ್​ ಈಕೆ. ಇದಾಗಲೇ ಹತ್ತು ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಈ ಪ್ರತಿಭೆಗೆ ಈಗ ಹೆಣ್ಣು ಎಂಬ ನೋವು ಕಾಡುತ್ತಿದೆ!

    ಇದಕ್ಕೆ ಕಾರಣಕ್ಕೆ ಆ.23ರಿಂದ ಪೋಲೆಂಡ್‍ನಲ್ಲಿ ನಡೆಯುತ್ತಿರುವ 4ನೇ ವಿಶ್ವ ಕಿವುಡರ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಈಕೆ ಹೆಣ್ಣು ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆಯಂತೆ. ತಂಡಕ್ಕೆ ಐದು ಮಂದಿ ಪುರುಷ ಅಥ್ಲೀಟ್‍ಗಳೂ ಆಯ್ಕೆಯಾಗಿದ್ದು, ಇವಳೊಬ್ಬಳೇ ಹೆಣ್ಣು. ಆದ್ದರಿಂದ ಅವರ ಜತೆಗೆ ಈಕೆಯನ್ನು ಕರೆದುಕೊಂಡು ಹೋಗುವುದು ಸರಿಯಲ್ಲ ಎಂಬ ಕಾರಣದಿಂದ ಕ್ರೀಡಾ ಪ್ರಾಧಿಕಾರವು ಈಕೆಯನ್ನು ತಂಡದಿಂದ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಭಾರತದ ತಂಡ ಆ. 14ರಂದು ಪೋಲೆಂಡ್‍ಗೆ ತೆರಳಲಿದೆ.

    ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾದ ಏಕೈಕ ಮಹಿಳೆಯಾಗಿರುವ ಸಮೀಹಾ, ಲಾಂಗ್ ಜಂಪ್ ಮತ್ತು 100 ಮೀ. ರೇಸ್‍ನಲ್ಲಿ ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾಳೆ. 2017ರ ಜಾರ್ಖಂಡ್ನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‍ಶಿಪ್, 2018 ಮತ್ತು 2019ರಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮೀಹಾ ಚಿನ್ನದ ಪದಕ ಕೂಡ ಪಡೆದುಕೊಂಡಿದ್ದಾಳೆ. ಆದರೆ ಇದೀಗ ಆಕೆಯ ಕನಸು ನುಚ್ಚು ನೂರಾಗುತ್ತಿದೆ.

    ಸಮೀಹಾ ಬಾರ್ವಿನ್ ಜೊತೆಗೆ ಒಬ್ಬ ಸಹಾಯಕರನ್ನು ಕಳುಹಿಸಿಕೊಟ್ಟರೆ ಆಕೆಯನ್ನು ಕರೆದುಕೊಂಡು ಹೋಗಬಹುದು ಎಂದು ಪ್ರಾಧಿಕಾರ ಹೇಳಿದೆ. ಆದರೆ ಸಣ್ಣ ಕಾಫಿ ಶಾಪ್ ನಡೆಸುತ್ತಿರುವ ಸಮೀಹಾ ಕುಟುಂಬ ತೀವ್ರ ಆರ್ಥಿಕ ಸಮಸ್ಯೆಯಲ್ಲಿದ್ದು, ಇದು ಅವರಿಂದ ಸಾಧ್ಯವಾಗುತ್ತಿಲ್ಲ. ಸಮೀಹಾಳ ಪ್ರವಾಸದ ಖರ್ಚನ್ನು ಕುಟುಂಬವೇ ಭರಿಸುವುದು ಕೂಡ ಕಷ್ಟ ಆಗುತ್ತಿರುವ ಕಾರಣ, ಕನ್ಯಾಕುಮಾರಿ ಸಂಸದ ವಿ. ವಿಜಯ್‍ಕುಮಾರ್ ಅವರು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಜುಲೈ 26ರಂದು ಪತ್ರ ಬರೆದಿದ್ದರು. ಈಕೆಗೆ ಸಹಾಯ ನೀಡುವಂತೆ ಕೋರಿದ್ದರು. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

    ನೀರಜ್​ ಹೆಸರಿದ್ದವರಿಗೆಲ್ಲಾ ಉಚಿತ ಪೆಟ್ರೋಲ್, ಡೀಸೆಲ್​​- ಚಿನ್ನದ ಹುಡುಗನಿಗೆ ಹೀಗೊಂದು ಗೌರವ

    ಎಂಪಿ, ಎಂಎಲ್​ಎಗಳಿಗೆ ಶಾಕ್​ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್​ ದಾಖಲಾದ್ರೆ ವಾಪಸ್​ ಪಡೆಯೋದು ಇನ್ನು ಸುಲಭವಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts