More

    ಹಫ್ತಾ ಕೊಡಲಿಲ್ಲವೆಂದು ಬೆಂಗಳೂರಿನಿಂದ ಆರು ರೋಹಿಂಗ್ಯಾಗಳು ಕಿಡ್​ನ್ಯಾಪ್​- ವಿಶ್ವಸಂಸ್ಥೆಗೆ ಪತ್ರ

    ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿಯಲ್ಲಿ ನೆಲೆಸಿರುವ ರೋಹಿಂಗ್ಯಾಗಳು ಹಫ್ತಾ ಕೊಡಲಿಲ್ಲ ಎಂಬ ಹಿನ್ನೆಲೆಯಲ್ಲಿ ಕೆಲವು ರೌಡಿಗಳು ಅವರನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ದಾಸರಹಳ್ಳಿಯಲ್ಲಿ ಇರುವ ರೋಹಿಂಗ್ಯಾ ವಸಾಹತು ಪ್ರದೇಶದಿಂದ ಆರು ಯುವಕರನ್ನು ಅಪರಿಚಿತರು ಅಪಹರಣ ಮಾಡಿಕೊಂಡು ಹೋಗಿದ್ದು, ನಂತರ ಅವರ ಕುಟುಂಬಸ್ಥರು 40 ಸಾವಿರ ರೂಪಾಯಿ ಹಣ ನೀಡಿದ ನಂತರ ಬಿಡುಗಡೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ದಿಲ್ ಮೊಹಮ್ಮದ್ ಎಂಬ ಯುವಕ ಇನ್ನೂ ಕಾಣೆಯಾಗಿರುವುದಾಗಿ ಹೇಳಲಾಗಿದೆ.

    ಈ ಕುರಿತು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಅವರಿಗೆ ಸಂತ್ರಸ್ತರ ಕುಟುಂಬಗಳು ಪತ್ರ ಬರೆದಿದ್ದಾರೆ. ಕಾನೂನು ಮತ್ತು ನೀತಿ ಸಂಶೋಧನಾ ಸಂಸ್ಥೆ ಎಂಬ ಹೆಸರಿನ ಬೆಂಗಳೂರು ಮೂಲದ ಸ್ವಯಂಸೇವಾ ಸಂಸ್ಥೆಯು ಇವರಿಗೆ ನೆರವಾಗಿದೆ.

    ಸುಮಾರು 40 ರೋಹಿಂಗ್ಯಾ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಇವರೆಲ್ಲರೂ ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. .ಹಿಲಾಲ್ ಎಂದು ಕರೆಯಲ್ಪಡುವ ಒಬ್ಬ ವ್ಯಕ್ತಿ ಮತ್ತು ಅವನ ಸಹಚರರು ಆಗಾಗ್ಗೆ ಇವರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದು, ಇಲ್ಲಿರುವ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಅರ್ನಬ್​ಗೆ ಸುತ್ತಿಕೊಂಡ ಆತ್ಮಹತ್ಯೆ ಪ್ರಕರಣ- ಸಾವಿನ ತನಿಖೆಗೆ ಕೋರಿ ಅರ್ಜಿ- ನೋಟಿಸ್​

    ಅಕ್ಟೋಬರ್ 31 ರಂದು ಹಿಲಾಲ್ ತನ್ನ ಸಹಚರರೊಂದಿಗೆ ರೋಹಿಂಗ್ಯಾಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಈ ಪ್ರದೇಶದಲ್ಲಿ ಚಿಂದಿ ಆಯುವ ಕೆಲಸ ಮುಂದುವರೆಸಲು ಅವರಿಂದ ‘ಹಫ್ತಾ’ಕ್ಕೆ ಬೇಡಿಕೆ ಇಟ್ಟಿದ್ದ. ಅವರ ಬೇಡಿಕೆಯನ್ನು ನಿರಾಕರಿಸಿದ ನಂತರ, ಹಿಲಾಲ್ ಮತ್ತು ಅವನ ಜನರು ರೋಹಿಂಗ್ಯಾ ವಸಾಹತುಗಾರರನ್ನು ಥಳಿಸಿದ್ದಾರೆ, ಗರ್ಭಿಣಿಯರು ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿ ಇರುವವರಿಂದ ಮೊಬೈಲ್ ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಿರಾಶ್ರಿತರಿಂದ ಮೊಬೈಲ್ ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಯುವಕರ ಸುರಕ್ಷಿತ ಬಿಡುಗಡೆಗಾಗಿ 40 ಸಾವಿರ ರೂಪಾಯಿಗಳನ್ನು ಕುಟುಂಬಸ್ಥರು ನೀಡಿದ್ದಾರೆ. ಆ ನಂತರವಷ್ಟೇ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಅಪಹರಣಕಾರರ ವಿರುದ್ಧ ಅಮೃತಹಳ್ಳಿ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.

    ‘ಆರ್​ಆರ್​ನಗರದ್ದು ಆಘಾತ, ಶಿರಾ ರಿಸಲ್ಟಂತೂ ಅಚ್ಚರಿ- ಸೋಲಿನ ಹೊಣೆ ನಾನೇ ಹೊರುವೆ’

    ಎಂಜಿಬಿ ಎಂದರೆ ಮಹಾಘಟ್​​ಬಂಧನ ಅಲ್ಲ… ‘ಮರ್​ ಗಯಾ ಭಾಯ್’ ಎಂದ್ರಂತೆ ರಾಹುಲ್​!

    ‘ಹಿಂದೊಮ್ಮೆ ಎರಡೇ ಸೀಟು ಬಂದಿತ್ತು- ನಂತರ ಸಿಎಂ, ಪಿಎಂ ಸ್ಥಾನ ಸಿಕ್ಕಿತು, ನಿರಾಶರಾಗಬೇಡಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts