More

    ರಾತ್ರೋರಾತ್ರಿ ಒಂದು ಕಿ.ಮೀ ಉದ್ದದ ರಸ್ತೆ ‘ಕಳುವು’: ಹೀಗೊಂದು ವಿಚಿತ್ರ ಘಟನೆ- ದೂರು ದಾಖಲು

    ಸಿಧಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ ವರದಿಯಾಗಿದೆ. ಅದೇನೆಂದರೆ ರಾತ್ರೋರಾತ್ರಿ ಒಂದು ಕಿಲೋ ಮೀಟರ್‌ ಉದ್ದದ ರಸ್ತೆ ಕಳುವು ಆಗಿದೆ ಎಂದು ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದೆ.

    ಗ್ರಾಮದ ಡೆಪ್ಯುಟಿ ಸರಪಂಚ್ ಮತ್ತು ಸ್ಥಳೀಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ದೂರನ್ನು ದಾಖಲು ಮಾಡಿದ್ದಾರೆ. ರಾತ್ರಿ ಇದ್ದ ರಸ್ತೆ ಬೆಳಗ್ಗೆ ಕಾಣೆಯಾಗಿದ್ದು, ಅದನ್ನು ಯಾರೋ ಕಳುವು ಮಾಡಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ. ಸದ್ಯ ಈ ವಿಷಯವು ಜನಪದ್ ಪಂಚಾಯತ್ ಕಚೇರಿಗೂ ತಲುಪಿದ್ದು , ಜನಪದ್ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಕಣ್ಮರೆಯಾದ ರಸ್ತೆಯ ವರದಿಯನ್ನು ತಮ್ಮ ಕಚೇರಿ ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಜತೆಗೆ ರಸ್ತೆ ಕಣ್ಮರೆಯಾಗಿರುವುದನ್ನೂ ಒಪ್ಪಿಕೊಂಡಿದ್ದಾರೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಈ ರಸ್ತೆಯನ್ನು 2017ರಲ್ಲಿ ಕಚ್ಚಾರಸ್ತೆಯಿಂದ ಪಕ್ಕಾ ರಸ್ತೆ ಮಾಡಲು 10 ಲಕ್ಷ ರೂಪಾಯಿ ಮಂಜೂರು ಮಾಡಲಾಗಿತ್ತು. ಈ ರಸ್ತೆಯನ್ನು ಪಕ್ಕಾ ರಸ್ತೆ ಮಾಡಲಾಗಿದೆ ಎಂದು ಸಂಪೂರ್ಣ ದಾಖಲಾತಿಗಳನ್ನೂ ನೀಡಲಾಗಿತ್ತು. ದಾಖಲೆಗಳಲ್ಲಿ ಈ ರಸ್ತೆ ಈಗ ಐಷಾರಾಮಿ ರಸ್ತೆಯ ರೀತಿಯಲ್ಲಿ ಇದ್ದು, ಯಾವುದೇ ತೊಂದರೆ ಇಲ್ಲ. ಆದರೆ ರಸ್ತೆ ಎಷ್ಟು ಕಳಪೆಯಾಗಿದೆ ಎಂದರೆ ರಾತ್ರಿ ಸುರಿದ ಮಳೆಯಿಂದಾಗಿ ಸಂಪೂರ್ಣ ಕಿತ್ತುಹೋಗಿದ್ದು, ನಡೆಯಲು ಕೂಡ ಆಗದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಈ ಬಗ್ಗೆ ವಿಚಾರಿಸಿದಾಗ ದಾಖಲೆಗಳನ್ನು ಕಂಡು ಬೆರಗಾಗಿದ್ದಾರೆ. ಅದರಲ್ಲಿ ರಸ್ತೆಗೆ ಯಾವುದೇ ತೊಂದರೆಯಿಲ್ಲ. 10 ಲಕ್ಷ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಬರೆಯಲಾಗಿದೆ.

    ಇದರಿಂದ ರೊಚ್ಚಿಗೆದ್ದಿರುವ ಜನರು, ಇದೀಗ ರಾತ್ರೋರಾತ್ರಿ ರಸ್ತೆ ಕಾಣೆಯಾಗಿರುವುದಾಗಿ ದೂರು ಕೊಟ್ಟಿದ್ದಾರೆ. ಪ್ರಕರಣ ಇದೀಗ ಗಂಭೀರ ತಿರುವು ಕಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸ್ಥಳೀಯ ಆಡಳಿತ ಮುಂದಾಗಿದೆ.

    ರಾತ್ರೋರಾತ್ರಿ ಚಿಕ್ಕೋಡಿ ದೇವಿ ಕಣ್ಣುಬಿಟ್ಟಿದ್ದೇಕೆ? ಕೊನೆಗೂ ಬಯಲಾಯ್ತು ‘ಭಯಾನಕ’ ರಹಸ್ಯ

    ತಂಗಿಯನ್ನು ತನಗೆ ಮದ್ವೆ ಮಾಡಿಸದಿದ್ರೆ ಡಿವೋರ್ಸ್‌ ಕೊಡ್ತೀನಿ ಅಂತ ಧಮ್ಕಿ ಹಾಕ್ತಿದ್ದಾರೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts