More

    ಬಿರಿಯಾನಿ, ಕೇಕ್, ದೋಸೆ, ಚಾಕೋಲೇಟ್ಸ್… ಆಹಾ! 9ರ ಈ ಪೋರ ಏನು ಮಾಡಿದ್ದಾನೆ ನೋಡಿ…

    ತಿರುವನಂತಪುರ: ಕೇರಳದ 9 ವರ್ಷದ ಈ ಬಾಲಕ ಮಾಡಿರುವ ಸಾಧನೆ ನೋಡಿದರೆ ನೀವು ದಂಗಾಗುವುದು ಗ್ಯಾರೆಂಟಿ. ಏಕೆಂದರೆ ಈತ ಮಾಡಿರುವ ಸಾಧನೆಯೇ ಅಂಥದ್ದು.

    ಕೇವಲ ಒಂದೇ ಒಂದು ಗಂಟೆಯಲ್ಲಿ 172 ವಿಧದ ಭಕ್ಷ್ಯ ತಯಾರಿಸಿದ್ದಾನೆ ಈತ. ಈ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.

    ಈ ಬಾಲಕನ ಹೆಸರು ಹಯನ್ ಅಬ್ದುಲ್ಲಾ. ನಾಲ್ಕನೇ ವಯಸ್ಸಿನಿಂದಲೇ ಈತನಿಗೆ ಅಡುಗೆ ಮಾಡುವುದು ಎಂದರೆ ಪಂಚಪ್ರಾಣ. ಆಗಿನಿಂದಲೇ ಅಡುಗೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಬಾಲಕ, ಇದೀಗ 1 ಗಂಟೆಯಲ್ಲಿ ಬಿರಿಯಾನಿ, ಜ್ಯೂಸ್, ಪ್ಯಾನ್ ಕೇಕ್, ದೋಸೆ, ಮಿಲ್ಕ್ ಶೇಕ್, ಮತ್ತು ಚಾಕೋಲೇಟ್ಸ್ ಸೇರಿದಂತೆ ಹಲವಾರು ಬಗೆಯ ಖಾದ್ಯಗಳನ್ನು ಫಟಾಫಟ್​ ತಯಾರಿಸಬಲ್ಲ. ಚೆನ್ನೈನ ಶೆರ್ವುಡ್ ಹಾಲ್ ಸೀನಿಯರ್ ಸೆಕೆಂಡರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಹಯನ್ ಕರೊನಾದಿಂದಾಗಿ ನಡೆಸಿದ್ದ ಆನ್​ಲೈನ್​ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಅಲ್ಲಿ ದಾಖಲೆ ನಿರ್ಮಿಸಿದ್ದಾನೆ.

    ಅಂದಹಾಗೆ ಈತನ ಪಾಲಕರು ಚೆನ್ನೈನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದಾರೆ. ಅವರ ತಂದೆ ಹಶ್ನಾಸ್ ಅಬ್ದುಲ್ಲಾ ಪಯೋಲಿಯವರು ಮತ್ತು ತಾಯಿ ಫಿರೋಕ್ ಮೂಲದವರಾಗಿದ್ದಾರೆ. ಮೊದಲಿನಿಂದಲೂ ಈತನಿಗೆ ಅಡುಗೆ ಮಾಡುವುದು ಎಂದರೆ ಬಲು ಇಷ್ಟ. ಮೊದಲು ತನಗೆ ಅಡುಗೆಗೆ ಸಹಾಯ ಮಾಡುತ್ತಿದ್ದ ಎನ್ನುತ್ತಾರೆ ಬಾಲಕನ ತಾಯಿ.

    ಮೊದಲಿನಿಂದಲೂ ಅಪ್ಪ- ಅಮ್ಮ ಅಡುಗೆ ಮಾಡುವುದನ್ನು ನೋಡುತ್ತಾ ಇದನ್ನು ಕಲಿತಿದ್ದೇನೆ. ಆದರೆ ರೆಕಾರ್ಡ್​ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈ ರೆಕಾರ್ಡ್​ ಮಾಡಲು ವಿಶೇಷ ತಯಾರಿ ನಡೆಸಿಲ್ಲ ಎಂದು ಹಯನ್ ಹೇಳಿದ್ದಾನೆ.

    ಈತ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಹಯನ್ ಡೆಲಿಕೇಟ್ಸ್ ಎಂಬ ಯೂಟ್ಯೂಬ್ ಚಾನೆಲ್​ ಹೊಂದಿದ್ದಾನೆ. ಈ ಚಾನೆಲ್​ನಲ್ಲಿ ವಿವಿಧ ಅಡುಗೆಗಳ ಬಗ್ಗೆ ಇಂಗ್ಲಿಷ್, ಮಲಾಯಾಳಿ ಮತ್ತು ತಮಿಳು ಭಾಷೆಗಳಲ್ಲಿ ವಿವರಣೆ ದೊರೆಯುತ್ತದೆ, ಪೈಲಟ್ ಆಗಬೇಕೆಂಬುದು ಹಯಾನ್ ಮಹಾದಾಸೆಯಾಗಿದೆ. ಪಾಸ್ತಾ ಬಾರ್ ಸ್ಥಾಪಿಸಬೇಕೆನ್ನುವುದೂ ಈತನ ಕನಸು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

     

    ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

    ಸಮೀಪಿಸುತ್ತಿದೆ ಈ ಕೊಲೆಪಾತಕಿಯ ಸಾವು… ನೇಣಿಗೆ ಕೊರಳೊಡ್ಡುವ ಮುನ್ನ ಇದೋ ಕೊನೆಯ ಪ್ರಯತ್ನ…

    15ನೇ ವಯಸ್ಸಲ್ಲಿ ಸೀಟಿ ನುಂಗಿದ್ದಳು, 40ನೇ ವಯಸ್ಸಲ್ಲಿ ಹೊರ ಬಂತು- ವೈದ್ಯರೇ ಕಂಗಾಲು!

    ಟೂಲ್​ಕಿಟ್​ ಹಗರಣ ಬಯಲಾಗ್ತಿದ್ದಂತೆ ಕೋರ್ಟ್​ಗೆ ಧಾವಿಸಿದ್ದ ದಿಶಾ- ನ್ಯಾಯಾಲಯ ಹೇಳಿದ್ದೇನು?

    ಮದುವೆಯಾಗಲು ಇಷ್ಟವಿಲ್ಲವೆಂದರೂ ಒತ್ತಾಯ ಮಾಡುತ್ತಿದ್ದೀರಿ… ನನಗೆ ಬೇರೆ ಇಲ್ಲ… ಗುಡ್​ಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts