More

    ದಾಖಲೆ ಬರೆದ ಕಾಶಿ ವಿಶ್ವನಾಥ: ಶಿವರಾತ್ರಿಯಲ್ಲಿಯೂ ಕಂಡರಿಯದಷ್ಟು ಜನಸಾಗರ- 5 ಲಕ್ಷಕ್ಕೆ ಏರಿದ ಭಕ್ತರ ಸಂಖ್ಯೆ!

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಕಾಶಿಯ ವಿಶ್ವನಾಥ ದೇಗುಲದ ಸಂಕೀರ್ಣ ಸೇರಿದಂತೆ ಇಲ್ಲಿ ಹಲವು ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್​​ ಉದ್ಘಾಟನೆ ನೆರವೇರಿಸಿದ ಬೆನ್ನಲ್ಲೇ ಕಾಶಿ ಇತಿಹಾಸ ಸೃಷ್ಟಿಸಿದೆ. ಹಿಂದೆಂದೂ ಕೇಳರಿಯದಷ್ಟು ಭಕ್ತರು ಕಾಶಿಗೆ ಹೊಸವರ್ಷಕ್ಕೆ ಭೇಟಿ ಕೊಟ್ಟಿದ್ದಾರೆ.

    ಇಲ್ಲಿಯವರೆಗೆ ಹೆಚ್ಚೆಂದರೆ 2.5 ಲಕ್ಷ ಜನರು ಮಾತ್ರ ಕಾಶಿಗೆ ಭೇಟಿ ನೀಡಿದ್ದರು, ಅದು ಕೂಡ ಶಿವರಾತ್ರಿಯ ಸಮಯದಲ್ಲಿ. ಆದರೆ ನವೀಕರಣಗೊಂಡಿರುವ ಕಾಶಿಯ ದರ್ಶನ ಪಡೆಯಲು ಹೊಸ ವರ್ಷದಲ್ಲಿ ಡಬಲ್‌ ಭಕ್ತರು ಅಂದರೆ ಐದು ಲಕ್ಷದಷ್ಟು ಭಕ್ತರು ಭೇಟಿ ನೀಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಒಂದೇ ದಿನಕ್ಕೆ ಇಷ್ಟು ಮಂದಿ ಭೇಟಿ ಕೊಟ್ಟ ದಾಖಲೆ ಕಾಶಿಗೆ ಇಲ್ಲ, ಈ ಪರಿಯ ಭಕ್ತರನ್ನು ನೋಡಿ ಧನ್ಯರಾಗಿದ್ದೇವೆ ಎನ್ನುತ್ತಿದ್ದಾರೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು.

    ‘ಸಾಮಾನ್ಯವಾಗಿ ದೇವಾಲಯಗಳಿಗೆ ಹೊಸ ವರ್ಷಗಳಿಗೆ ಜನರು ಹೋಗುವಂತೆ ಕಾಶಿಗೂ ಬರುತ್ತಾರೆ. ಪ್ರತಿವರ್ಷ ಒಂದು ಲಕ್ಷಕ್ಕಿಂತ ಕಡಿಮೆ ಭಕ್ತರು ಬರುತ್ತಿದ್ದರು. ಕಾಶಿ ನವೀಕರಣಗೊಂಡಿರುವ ಕಾರಣ ಭಕ್ತರ ಸಂಖ್ಯೆ ಒಂದರಿಂದ ಒಂದೂವರೆ ಲಕ್ಷ ಆಗಬಹುದು ಎಂದು ಊಹಿಸಿದ್ದೆವು. ಆದರೆ ಐದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು ಅಚ್ಚರಿ ತಂದಿದೆ’ ಎಂದಿದ್ದಾರೆ ಅವರು.

    ಕಾಶಿ ವಿಶ್ವನಾಥ ಧಾಮ ಕಾರಿಡಾರ್ ನಿಂದ ಕಾಶಿ ವಿಶ್ವನಾಥ ದೇಗುಲಕ್ಕೆ, ಗಂಗಾ ನದಿಯಿಂದ ಸಂಪರ್ಕ ಕಲ್ಪಿಸುತ್ತದೆ. ಕಾರಿಡಾರ್​ನ ಮೊದಲ ಹಂತವನ್ನು ಪ್ರಧಾನಿ ಉದ್ಘಾಟನೆ ಮಾಡಿದ್ದು, ಭಕ್ತರಿಗೆ ಹಲವು ರೀತಿಯ ವ್ಯವಸ್ಥೆಯನ್ನು ಇದು ಕಲ್ಪಿಸುತ್ತದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ಸಹ ಈ ಬಾರಿ 1.12 ಲಕ್ಷ ಭಕ್ತರು ರಾಮಲಲ್ಲಾನ ದರ್ಶನಕ್ಕೆ ಬಂದಿದ್ದು, ಇದು ಕೂಡ ದಾಖಲೆ ಎಂದು ಅಯೋಧ್ಯೆ ರಾಮಮಂದಿರ ಟ್ರಸ್ಟ್​ ಹೇಳಿದೆ.

    VIDEO: ಆಕಾಶದಿಂದ ಸುರಿಯಿತು ಮೀನುಗಳು ಮಳೆ: ರಸ್ತೆಯ ತುಂಬಾ ವಿಲವಿಲ… ನಂಬಲಸಾಧ್ಯವಾದ ವಿಡಿಯೋ ವೈರಲ್‌

    ಅದಿತಿಯನ್ನು ಗುಟ್ಟಾಗಿ ಮದುವೆಯಾದ ‘ದೇವೋಂಕೆ ದೇವ್ ಮಹಾದೇವ್’-​ ವಿವಾಹದ ಫೋಟೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts