More

    ರೈಲು ತಪ್ಪೋಗತ್ತೆ ಎಂದು ಲಗುಬಗೆಯಿಂದ ಹತ್ತಲು ಹೋಗ್ತೀರಾ- ಈ ವಿಡಿಯೋ ನೋಡಿ…

    ಪನ್ವಾಲ್ (ಮಹಾರಾಷ್ಟ್ರ): ರೈಲ್ವೆ ನಿಲ್ದಾಣಕ್ಕೆ ಬರುವ ಸಮಯದಲ್ಲಿ ಇನ್ನೇನು ರೈಲ್ವೆ ಹೊರಟೇ ಹೋಯ್ತು ಎಂದುಕೊಂಡು ಅದನ್ನು ಲಗುಬಗೆಯಿಂದ ಏರುವ ಸಾಹಸ ಮಾಡುವವರೇ ಹೆಚ್ಚು. ಆದರೆ ರೈಲು ಹೋದರೆ ಇನ್ನೊಂದು ರೈಲು ಬರುತ್ತದೆ, ಆದರೆ ಪ್ರಾಣ ಹೋದರೆ?

    ಹೀಗೆ ಎಡವಟ್ಟು ಮಾಡಿಕೊಂಡು ಆಗೀಗ ಪ್ರಾಣ ಕಳೆದುಕೊಳ್ಳುವುದೋ ಇಲ್ಲವೇ ಅಂಗವೈಕಲ್ಯರಾಗುವುದೋ ನಡೆದೇ ಇದೆ. ಅಂಥದ್ದೇ ಒಂದು ಭಯಾನಕ ಘಟನೆ ಮಹಾರಾಷ್ಟ್ರದ ಪನ್ವಾಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಚಲಿಸುತ್ತಿದ್ದ ರೈಲು ಹತ್ತುವಾಗ ಜಾರಿ ಬಿದ್ದು ಇನ್ನೇನು ಜೀವಕ್ಕೆ ಅಪಾಯ ತಂದುಕೊಳ್ಳಲಿದ್ದ ಅಂಗವಿಕಲನೊಬ್ಬ. ಆದರೆ ಈ ಸಮಯದಲ್ಲಿ ಸಮಯಪ್ರಜ್ಞೆ ತೋರಿದ ರೈಲ್ವೆ ಸುರಕ್ಷತಾ ಪಡೆ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

    ಫೆಬ್ರವರಿ 5ರಂದು ನಡೆದಿರುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಚಲಿಸುತ್ತಿದ್ದ ರೈಲನ್ನು ಹತ್ತುವ ಪ್ರಯತ್ನ ಮಾಡಬೇಡಿ. ದಯವಿಟ್ಟು ಮಾರ್ಗಸೂಚಿಗಳನ್ನು ಅನುಸರಿಸಿ ಜೀವ ರಕ್ಷಿಸಿಕೊಳ್ಳಿ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

    ಕಂಬಳಕ್ಕೆ ಮತ್ತೊಂದು ಗರಿ: ಓಟದಲ್ಲಿ ಹಿಂದಿನ ದಾಖಲೆ ಮುರಿದು ಇನ್ನೊಂದು ಇತಿಹಾಸ ಸೃಷ್ಟಿ

    ಟೆಕ್ರಿ ಗಡಿಯಲ್ಲಿ ರೈತನ ಆತ್ಮಹತ್ಯೆ? 40 ಲಕ್ಷ ಟ್ರ್ಯಾಕರ್​ ತಂದು ರ‍್ಯಾಲಿ ನಡೆಸುವುದು ಗುರಿ ಎಂದಿದ್ದಾರೆ ಟಿಕಾಯತ್

    ಯೋಧನಿಗೊಂದು ಹೃದಯಸ್ಪರ್ಶಿ ಸ್ವಾಗತ- ಹೂವಿನಿಂದ ಅಲಂಕೃತಗೊಂಡ ಚಿಕ್ಕಮಗಳೂರಿನ ಬಿದರೆ ಗ್ರಾಮ

    ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts