More

    10 ವರ್ಷ ಬಳಿಕ ಕನ್ನಡಿಗನಿಗೆ ಇಫ್ಕೋ ಪ್ರಶಸ್ತಿ; ಎಸ್.ಆರ್.ರಂಗಮೂರ್ತಿ ಅವರಿಗೆ ರಾಷ್ಟ್ರೀಯ ಮಟ್ಟದ ಸಹಕಾರಿ ಬಂಧು ಪ್ರಶಸ್ತಿ ಪ್ರದಾನ

    ವಿಟ್ಲ: ಸಹಕಾರ ಸಂಘಗಳ ಮೂಲಕ ಇಫ್ಕೋ ರೈತರ ಸೇವೆ ಮಾಡುತ್ತಿದೆ. 57 ಸಹಕಾರಿ ಸಂಘಗಳ ಮೂಲಕ ಕಾರ್ಯಾರಂಭಿಸಿದ ಸಂಸ್ಥೆ 53 ವರ್ಷಗಳಲ್ಲಿ ರಾಷ್ಟ್ರಮಟ್ಟದ ರೈತರ ಸಂಸ್ಥೆಯಾಗಿ ಬೆಳೆದಿದೆ. ಹತ್ತು ವರ್ಷಗಳ ಬಳಿಕ ಕನ್ನಡಿಗ ಸಹಕಾರಿ ಕ್ಷೇತ್ರದ ಸಾಧಕ ಹಿರಿಯ ಸಹಕಾರಿ ಎಸ್.ಆರ್.ರಂಗಮೂರ್ತಿ ಅವರಿಗೆ ಈ ಪ್ರಶಸ್ತಿ ಲಭಿಸುತ್ತಿದೆ ಎಂದು ಇಫ್ಕೋ ಫರ್ಟಿಲೈಸರ್ಸ್‌ ಕಂಪನಿ ಕರ್ನಾಟಕ ಪ್ರಾಂತೀಯ ಅಧಿಕಾರಿ ಡಾ.ನಾರಾಯಣ ಸ್ವಾಮಿ ಹೇಳಿದರು.

    ದೇಶದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ಸಹಕಾರಿಗಳಿಗೆ ಇಫ್ಕೋ ಸಂಸ್ಥೆ ನೀಡುವ ರಾಷ್ಟ್ರೀಯ ಮಟ್ಟದ ಸಹಕಾರಿ ಬಂಧು ಪ್ರಶಸ್ತಿಯನ್ನು ಸೋಮವಾರ ವರ್ಚುವಲ್ ವ್ಯವಸ್ಥೆ ಮೂಲಕ ಪ್ರದಾನ ಮಾಡಿ, ಅವರು ಮಾತನಾಡಿದರು. 11 ಲಕ್ಷ ರೂ. ನಗದು, ರಜತ ತಟ್ಟೆ ಪ್ರಶಸ್ತಿ ಪತ್ರವನ್ನು ಇಫ್ಕೋ ಸಂಸ್ಥೆಯ ಅಧಿಕಾರಿ ಎಸ್.ಆರ್.ರಂಗಮೂರ್ತಿಯವರಿಗೆ ಹಸ್ತಾಂತರಿ ಸಲಾಯಿತು.

    ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿದರು. ಪುಣಚ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಇಫ್ಕೋ ಮಂಗಳೂರು ಅಧಿಕಾರಿ ಸಂಗಮೇಶ್ ಉಪಸ್ಥಿತರಿದ್ದರು. ಕ್ಯಾಂಪ್ಕೊ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸ್ವಾಗತಿಸಿದರು. ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ವಂದಿಸಿದರು. ಪ್ರಗತಿಪರ ಕೃಷಿಕ ಜಯಶ್ಯಾಂ ನೀರ್ಕಜೆ ಸಹಕರಿಸಿದರು.

    ಕೋವಿಡ್ ಹಿನ್ನೆಲೆಯಲ್ಲಿ ಇಫ್ಕೋ ಸಂಸ್ಥೆಯ ದೆಹಲಿ ಕಚೇರಿಯಲ್ಲಿ ಮಹಾಸಭೆ ವರ್ಚುವಲ್ ಮೂಲಕ ನಡೆಯಿತು. ಇಫ್ಕೋ ಅಧ್ಯಕ್ಷ ಬಿ.ಎಸ್.ನಕಾಯ್, ಇಫ್ಕೋ ಟೋಕಿಯೋ ಅಧ್ಯಕ್ಷ ಕೆ.ಶ್ರೀನಿವಾಸ ಗೌಡ, ಇಫ್ಕೋ ಉಪಾಧ್ಯಕ್ಷ ಸಿಘಾನೆ, ಎಂ.ಡಿ ಡಾ.ಯು.ಎಸ್.ಅವಾಸ್ತಿ, ವೈಸ್ ಎಂ.ಡಿ. ರಾಕೇಶ್ ಕಪೂರ್ ಉಪಸ್ಥಿತರಿದ್ದರು.
    ಶಾಸಕರಿಂದ ಅಭಿನಂದನೆ: ಎಸ್.ಆರ್.ರಂಗಮೂರ್ತಿ ಅವರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಹರಿಪ್ರಸಾದ್ ಯಾದವ್, ಹರೀಶ್ ನಡುಸಾರ್ ಮತ್ತಿತರರು ಉಪಸ್ಥಿತರಿದ್ದರು. ಕ್ಯಾಂಪ್ಕೊ ಸಂಸ್ಥಾಪಕರಾದ ವಾರಣಾಸಿ ಸುಬ್ರಾಯ ಭಟ್ಟ ಅವರಿಗೆ 2005ರಲ್ಲಿ ಇಫ್ಕೋ ಸಹಕಾರಿ ರತ್ನ ಪ್ರಶಸ್ತಿ ಲಭಿಸಿತ್ತು.

    ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವನ್ನು ಸಂಘಟನೆ ನೀಡಿತು. ಬದುಕಿನಲ್ಲಿ ಪ್ರಶಸ್ತಿಗಳ ನಿರೀಕ್ಷೆ ಮಾಡಿಲ್ಲ. ಸರ್ವಸಮ್ಮತ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಪ್ರಶಸ್ತಿಯನ್ನು ಎಲ್ಲ ಕೃಷಿಕರಿಗೆ, ಸಹಕಾರಿ ಬಂಧುಗಳಿಗೆ ಸಮರ್ಪಿಸುತ್ತಿದ್ದೇನೆ.
    – ಎಸ್.ಆರ್.ರಂಗಮೂರ್ತಿ ಹಿರಿಯ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts