More

    ಹಿಜಾಬ್‌ನ ಹಿಡನ್‌ ಅಜೆಂಡಾ ಬಯಲಾಗೋ ಭಯ ಅವ್ರಿಗೆ: ಅದಕ್ಕೆ ಕಲಾಪ ನಡೆಸಲು ಬಿಡುತ್ತಿಲ್ಲ- ಸಚಿವ ಅಶೋಕ್‌ ಗೇಲಿ

    ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರ ಹೇಳಿಕೆ ಸ್ಪಷ್ಟವಾಗಿದೆ. ಆದರೂ ಕಾಂಗ್ರೆಸ್‌ನರು ಸುಳ್ಳು ಆರೋಪ ಹೊರಿಸಿ ಅಹೋರಾತ್ರಿ ಧರಣಿ ಹೂಡಿ ಕಪಟ ನಾಟಕವಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಗೇಲಿ ಮಾಡಿದರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ‌ ಪ್ರತಿಕ್ರಿಯಿಸಿದ ಅವರು, ಕೈ ನಾಯಕರ ಹಿಡನ್ ಅಜೆಂಡಾ ಇದೆ. ಹಿಜಾಬ್ ವಿಚಾರ ಎಲ್ಲಿ ಸದನದಲ್ಲಿ ಚರ್ಚೆ ಆಗಲಿದೆ ಅಂತ ಹೆದರಿದ್ದಾರೆ. ಹೀಗಾಗಿ ಕಲಾಪ ನಡೆಸಲು ಬಿಡದೆ ಗಲಾಟೆ ಮಾಡುತ್ತಿದ್ದಾರೆ.

    ಜೆಡಿಎಸ್ ಕೂಡ ಶಿಕ್ಷಣ ವಿಚಾರವಾಗಿ ಚರ್ಚೆ ಮಾಡಲು ತಯಾರಾಗಿದ್ದು, ಈಗಾಗಲೇ ಈ ವಿಷಯ ಮಂಡನೆ ಕೂಡ ಮಾಡಿದ್ದಾರೆ. ಚರ್ಚೆಗಳಾದರೆ ಹಗರಣಗಳು ಬಯಲಿಗೆ ಬೀಳಬಹುದು ಎಂಬ ಕಾಂಗ್ರೆಸ್ ನವರಲ್ಲಿದೆ. ಇದೇ ಕಾರಣಕ್ಕೆ ಈಶ್ವರಪ್ಪ ಅವರ ವಿಚಾರ ಮುಂದಿಟ್ಟುಕೊಂಡು ಪಟ್ಟು ಹಿಡಿದಿದ್ದಾರೆ.

    ಕೇಸರಿ ಹಿಡಿದರೆ, ಅಲ್ಪಸಂಖ್ಯಾತರ ಓಟ್ ಹೋಗುತ್ತದೆ. ಹಿಜಾಬ್ ಹಿಡಿದರೆ ಹಿಂದೂಗಳು ಕೈಬಿಟ್ಟು ಹೋಗುತ್ತಾರೆ ಎನ್ನುವ ಸಂಕಟದಲ್ಲಿ ಕೈನಾಯಕರು ತೊಳಲಾಡುತ್ತಿದ್ದಾರೆ ಎಂದು ಆರ್.ಅಶೋಕ್ ಕಿಚಾಯಿಸಿದರು.

    ಸಾರ್ವಜನಿಕರು ತೆರಿಗೆ ರೂಪದಲ್ಲಿ ನೀಡಿದ‌ ಕೋಟ್ಯಂತರ ರೂ ನಿತ್ಯವೂ ಪೋಲಾಗುತ್ತಿದೆ. ಅಧಿವೇಶನದತ್ತ ಇಡೀ ರಾಜ್ಯದ ಜನರು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ನವರು ಇಚ್ಚೆ ಬಂದಂತೆ ಮಾಡಲು ವಿಧಾನಸೌಧ ಕಟ್ಟಿಲ್ಲ ಎಂದು ಕಿಡಿಕಾರಿದರು. ನಮ್ಮ ಸಮಸ್ಯೆ ಬಗ್ಗೆ ಚರ್ಚೆ ಮಾಡಿ, ಏನಾದ್ರೂ ಪರಿಹಾರ ಕೊಡ್ತಾರಾ ? ಎಂದು ಜನರು ಕಾಯ್ತಿದ್ದಾರೆ. ಕಾಂಗ್ರೆಸ್ ನವರಿಗೆ ನೈತಿಕತೆಯಿದ್ದರೆ ಅಧಿವೇಶನದಲ್ಲಿ ಭಾಗಿಯಾಗಲಿ. ಇದು ಕುಸ್ತಿ ಮಾಡೋ ಜಾಗ ಅಲ್ಲ, ಸದನದಲ್ಲಿ ಚರ್ಚೆ ಮಾಡಲಿ. ಇನ್ನು ಏಳು ದಿನ ಇದೆ, ಜನರ ಧ್ವನಿಯಾಗಿ ವಿಪಕ್ಷವಾಗಿ ಕೆಲಸ ಮಾಡಲಿ ಎಂದು ಆರ್.ಅಶೋಕ್ ಸವಾಲೆಸೆದರು.

    ಪಕ್ಷದ ನಾಯಕರ ತೀರ್ಮಾನ
    ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರಿಸಿಕೊಳ್ಳುವುದನ್ನು ಪಕ್ಷದ ರಾಜ್ಯಾಧ್ಯಕ್ಷರು, ಹಿರಿಯರು ಚರ್ಚಿಸಿ ತೀರ್ಮಾನಿಸುತ್ತಾರೆ‌. ಜನಾರ್ದನರೆಡ್ಡಿ ಈ ಹಿಂದೆ ನಮ್ಮ ಪಕ್ಷದಲ್ಲಿದ್ದವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಸೋದರ ಹಾಗೂ ಶಾಸಕ ಜಿ.ಸೋಮಶೇಖರ್ ರೆಡ್ಡಿ ಪ್ರಯತ್ನಗಳಿಗೆ ಅಭ್ಯಂತರವಿಲ್ಲ. ಅವರ ಮನೆ ದೇವರು ಆಂಜನೇಯ. ನಮ್ಮ ಮನೆ ದೇವರೂ ಆಂಜನೇಯ ಎಂದು ಹೇಳಿದ ಆರ್. ಅಶೋಕ್ ನುಣುಚಿಕೊಂಡರು.

    ಉರಿಯುವ ಬೆಂಕಿಗೆ ತುಪ್ಪ: ಕುಂಕುಮ ಇಟ್ಟುಕೊಂಡ ವಿದ್ಯಾರ್ಥಿಗೆ ಕಾಲೇಜಿನ ಒಳಗೆ ಬಿಡದ ಉಪನ್ಯಾಸಕ!

    ‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts