More

    ಮೂಗು ತೂರಿಸಲು ಬಂದ್ರೆ ಇತಿಹಾಸದಲ್ಲಿ ಕಂಡರಿಯದ ಪರಿಣಾಮ ಎದುರಿಸಬೇಕಾಗತ್ತೆ: ಪುತಿನ್ ಎಚ್ಚರಿಕೆ!


    ಮಾಸ್ಕೊ: ಯೂಕ್ರೇನ್​ ವಿರುದ್ಧ ಸಮರ ಸಾರಿರುವ ರಷ್ಯಾದ ವಿರುದ್ಧ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಕೆಲವು ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರಿಗೆ ಹೇಳುತ್ತಿವೆ. ಅದರಲ್ಲಿಯೂ ಪಶ್ಚಿಮದಲ್ಲಿರುವ ಯೂಕ್ರೇನ್​ನ ಮಿತ್ರರಾಷ್ಟ್ರಗಳು ಯೂಕ್ರೇನ್​ಗೆ ಬೆಂಬಲ ನೀಡುತ್ತಿವೆ. ಇದು ಪುತಿನ್​ ಅವರ ಕೆಂಗಣ್ಣಿಗೆ ಗುರಿಯಾಗಿದೆ.

    ಯಾರೇ ಆದರೂ ಹೊರಗಿನಿಂದ ಹಸ್ತಕ್ಷೇಪ ಮಾಡುವ ಕೆಲಸ ಮಾಡಿದರೆ ನೀವು ಇತಿಹಾಸದಲ್ಲಿ ಎಂದಿಗೂ ಕಂಡಿರದ ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಮಗೆ ಬುದ್ಧಿ ಹೇಳಲು ಬಂದಿರುವ ಪಶ್ಚಿಮ ರಾಷ್ಟ್ರಗಳಿಗೆ ಅವರು ಎಚ್ಚರಿಸಿದ್ದಾರೆ.

    ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಪುತಿನ್​, ಈ ಎಚ್ಚರಿಕೆಯನ್ನು ನೀಡಿದ್ದಾರೆ. ಯೂಕ್ರೇನ್​ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಯನ್ನು ಕರೆದಿತ್ತು. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್ ಪುತಿನ್​ ಅವರನ್ನು ಉದ್ದೇಶಿಸಿ, “ನಿಮ್ಮ ಪಡೆಗಳು ಯೂಕ್ರೇನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ, ಶಾಂತಿಗೆ ಅವಕಾಶ ನೀಡಿ. ಈಗಾಗಲೇ ಹಲವಾರು ಜನರು ಮೃತಪಟ್ಟಿದ್ದಾರೆ’ ಎಂದಿತ್ತು. ಇದಕ್ಕೆ ಪುತಿನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ಲೀಸ್​ ಯುದ್ಧ ನಿಲ್ಲಿಸಿ, ಇದು ನಿಮ್ಮಿಂದ ಸಾಧ್ಯ: ಮಹಾಭಾರತ ಉಲ್ಲೇಖಿಸಿ ಪ್ರಧಾನಿ ಮೋದಿಗೆ ಯೂಕ್ರೇನ್​ ಮನವಿ

    ಷೇರುಪೇಟೆ ಹೂಡಿಕೆದಾರರಿಗೆ ಶಾಕ್​ ಕೊಟ್ಟ ರಷ್ಯಾ: ಒಂದೇ ತಾಸಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts