More

    ಭದ್ರತೆ ಹಿಂದಕ್ಕೆ ಪಡೆದ ಪಂಜಾಬ್​: ಕೆಚ್ಚೆದೆಯ ಯೋಧ ಬಲ್ವಿಂದರ್​ ಗುಂಡಿಗೆ ಬಲಿ

    ಪಂಜಾಬ್​: ಈ ಹಿಂದೆ ಭಯೋತ್ಪಾದರ ದಾಳಿಯಿಂದ ಹಲವು ಬಾರಿ ತಪ್ಪಿಸಿಕೊಂಡಿದ್ದ ಪಂಜಾಬ್​ನ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ, ಮಾಜಿ ಯೋಧ ಬಲ್ವಿಂದರ್ ಸಿಂಗ್ (62) ಇದೀಗ ಗುಂಡಿಗೆ ಬಲಿಯಾಗಿದ್ದಾರೆ.

    ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಭಯೋತ್ಪಾದಕರು ಗುಂಡಿಕ್ಕಿ ಸಿಂಗ್​ ಅವರನ್ನು ಕೊಂದಿದ್ದಾರೆ. ಭಿಖಿವಿಂದ್ ಗ್ರಾಮದಲ್ಲಿ ಬಲ್ವಿಂದರ್​ ಸಿಂಗ್ ತಮ್ಮ ಕಚೇರಿಯಲ್ಲಿದ್ದಾಗ ಮೋಟಾರ್​ ಸೈಕಲ್​ನಲ್ಲಿ ಬಂದ ಉಗ್ರರು ಈ ಕೃತ್ಯ ಎಸಗಿದ್ದಾರೆ.

    ಬಲ್ವಿಂದರ್​ ಸಿಂಗ್ ಅವರು ಭಯೋತ್ಪಾದನೆ ವಿರುದ್ಧ ಹಿಂದೆ ಹಲವಾರು ಬಾರಿ ಹೋರಾಟ ನಡೆಸಿದ್ದರು. ಉಗ್ರರನ್ನು ಹೊಡೆದೋಡಿಸುವಲ್ಲಿ ಸಾಹಸ ಪ್ರದರ್ಶಿಸಿದ್ದರು. ಇದೇ ಕಾರಣಕ್ಕೆ ಇವರಿಗೆ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವವಾದ ಶೌರ್ಯಚಕ್ರ ಪ್ರಶಸ್ತಿ ಲಭಿಸಿತ್ತು.

    ಇದನ್ನೂ ಓದಿ: ಮೊಬೈಲ್​ ಕೊಡಿಸಿಲ್ಲ ಎಂದು ಅಜ್ಜಿಯ ರುಂಡ ಕತ್ತರಿಸಿ ಟೇಬಲ್​ ಮೇಲಿಟ್ಟ!

    ಇವರ ಮೇಲೆ ಸದಾ ಕಣ್ಣಿಟ್ಟಿದ್ದ ಉಗ್ರರು ಈ ಹಿಂದೆ ಅನೇಕ ಬಾರಿ ಹಲ್ಲೆಗೆ ಯತ್ನಿಸಿದ್ದರು. ಇದರಿಂದಾಗಿ ಇವರಿಗೆ ಭದ್ರತೆ ನೀಡಲಾಗಿತ್ತು. ಆದರೆ ಟಾರ್ನ್ ತರಣ್ ಪೊಲೀಸರ ಶಿಫಾರಸಿನ ಮೇರೆಗೆ ಸಿಂಗ್ ಅವರ ಭದ್ರತಾ ರಕ್ಷಣೆಯನ್ನು ಒಂದು ವರ್ಷದ ಹಿಂದೆ ಪಂಜಾಬ್​ ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ತಮ್ಮ ಸಹೋದರನಿಗೆ ಹಾಗೂ ಇಡೀ ಕುಟುಂಬ ಭಯೋತ್ಪಾದಕರ ಹಿಟ್ ಪಟ್ಟಿಯಲ್ಲಿದೆ ಎಂದು ಸಿಂಗ್​ ಅವರ ಸಹೋದರ ರಂಜಿತ್​ ಹೇಳಿದ್ದರೂ ಭದ್ರತೆಯನ್ನು ಹಿಂಪಡೆಯಲಾಗಿತ್ತು.

    ಇದೀಗ ಅದೇ ಮುಳುವಾಗಿದೆ. ಅವರ ಕೊಲೆ ಮಾಡಲಾಗಿದೆ. ಬಲ್ವಿಂದರ್​ ಸಿಂಗ್ ಅವರಿಗೆ ಅವರ ಧೈರ್ಯದ ಬಗ್ಗೆ ಪಂಜಾಬ್​ನಲ್ಲಿ ಅನೇಕ ಸಾಕ್ಷ್ಯಚಿತ್ರಗಳನ್ನು ಸಹ ಮಾಡಲಾಗಿದೆ.

    ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

    10ನೇ ಟೆಸ್ಟ್​ನಲ್ಲಿ ಪಾಸಿಟಿವ್​ ಬಂತು: ತಟ್ಟೆ-ಲೋಟ ಇಟ್ಕೊಂಡು ಜೀವನ ಮಾಡ್ದೆ- ರೇಣುಕಾಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts