More

    ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ: ಅಂಗಲಾಚಿದ್ರೂ ನೆರವಿಗೆ ಬಾರದ ವೈದ್ಯರು, ಪತಿ ಕಣ್ಣೀರು

    ಹರಿಯಾಣ: ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

    ಇದನ್ನೂ ಓದಿ: ಬಾಟಲ್​ ನೀರು ಭಾರಿ ಡೇಂಜರ್​: 1 ಲೀ. ನೀರಿನಲ್ಲಿ 2 ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ತುಣುಕು, ದೇಹಕ್ಕೆ ಆಪತ್ತು

    ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸಹಾಯಕ್ಕಾಗಿ ಪತಿ ಪದೇ ಪದೇ ಮನವಿ ಮಾಡಿದರೂ ವೈದ್ಯರು ಮತ್ತು ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಎಂದು ಆರೋಪ ಮಾಡಿದ್ದಾರೆ.

    ಚಳಿಗಾಲದಲ್ಲಿ ಬೀದಿಯಲ್ಲಿ ಮಗು ಜನಿಸುವ ಪರಿಸ್ಥಿತಿ ಬಂದಿದ್ದಕ್ಕೆ ಬೇಸರಗೊಂಡಿದ್ದೇವೆ. ದೇವರೇ ತಾಯಿ ಮತ್ತು ಮಗುವನ್ನು ಕಾಪಾಡಿದ್ದಾನೆ. ನಾನು ವೈದ್ಯರನ್ನು ದೇವರು ಎಂದು ನಂಬಿದ್ದೆ, ಆದರೆ ನಿನ್ನೆ ರಾತ್ರಿ ನಡೆದ ಘಟನೆಯಿಂದ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಮಹಿಳೆಯ ಪತಿ ಬೇಸರ ವ್ಯಕ್ತಪಡಿಸಿದ್ದಾನೆ.

    ಪಂಜಾಬ್‌ನ ಮೊಹಾಲಿ ಜಿಲ್ಲೆಯ ದಪ್ಪರ್‌ನ ನಿವಾಸಿಯಾಗಿರುವ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದ. ಸ್ಟ್ರೆಚರ್ ತರಲು ಯಾರು ಸಹಾಯ ಮಾಡಲಿಲ್ಲ. ಮಹಿಳೆ ಅಂತಿಮವಾಗಿ ಆಸ್ಪತ್ರೆಯ ಗೇಟ್ ಬಳಿಯ ಬೀದಿಯಲ್ಲಿ ಜನ್ಮ ನೀಡಿದ್ದಾಳೆ ಎಂದು ಪತಿ ನೋವು ವ್ಯಕ್ತಪಡಿಸಿದ್ದಾನೆ.
    ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೂ ವರದಿ ಮಾಡಲಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಭಯಭೀತರಾದರು ತಕ್ಷಣ ಕರೆದುಕೊಂಡು ಹೋಗಿ ವಾರ್ಡ್​ಗೆ ದಾಖಲಿಸಿದ್ದಾರೆ.

    ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಿದ್ದೇವೆ. ನಾವು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತೇವೆ. ಹಾಗಾಗಿ ಅವರಿಗೆ ಮಾಹಿತಿ ನೀಡಲಾಗಿದೆಯೋ ಇಲ್ಲವೋ ಗೊತ್ತಿಲ್ಲ, ಈ ಕುರಿತು ತನಿಖೆ ಮಾಡುತ್ತೇವೆ. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀ ವಿಜ್ ಹೇಳಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts