More

    ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ?

    ಬುಲಂದ್‌ಶಹರ್‌ (ಉತ್ತರ ಪ್ರದೇಶ): ಉತ್ತರಪ್ರದೇಶ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದ 2018ರ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುದೀಕ್ಷಾ ಭಾಟಿ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದು. ಇದೀಗ ಈ ಸಾವಿನ ಹಿಂದೆ ಹಲವಾರು ಅನುಮಾನಗಳು ಕಾಡತೊಡಗಿವೆ.

    ಸ್ಕಾಲರ್‌ಷಿಪ್‌ ಪಡೆದು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದ ಸುದೀಕ್ಷಾ ತನ್ನೂರು ಬುಲಂದ್‌ಶಹರ್‌ಗೆ ವಾಪಸಾಗಿದ್ದಳು. ಈ ಸಮಯದಲ್ಲಿ ಸಂಬಂಧಿ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕೆಲವು ಯುವಕರು ಆಕೆಯನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತ ಕಿರುಕುಳ ನೀಡಲು ಶುರು ಮಾಡಿದ್ದರು. ನಂತರ ಆಯ ತಪ್ಪಿಸಿ ಆಕೆಯನ್ನು ಕೆಳಕ್ಕೆ ಬೀಳಿಸಿದ್ದರು.

    ಆಯತಪ್ಪಿ ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇದು ಆಕಸ್ಮಿಕ ಸಾವಲ್ಲ, ಇದರ ಹಿಂದೆ ಏನೋ ಕೈವಾಡ ಇದೆ. ಇದು ಕೊಲೆ ಎಂದು ಸುದೀಕ್ಷಾ ತಂದೆ ಜೀತೇಂದ್ರ ಭಾಟಿ ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೀತೇಂದ್ರ ಅವರು, ಕಾಣದ ಕೈಯೊಂದು ಮಗಳ ಸಾವಿನ ಹಿಂದೆ ಕೆಲಸ ಮಾಡಿದೆ ಎಂದಿದ್ದಾರೆ.

    ಅವರು ಈ ರೀತಿ ಹೇಳಲು ಕಾರಣವೇನೆಂದರೆ, ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಆಗಮಿಸಿದ್ದ ಪೊಲೀಸು ಅವರನ್ನು ಸಂಪರ್ಕಿಸಲೂ ಇಲ್ಲ, ಎಫ್‌ಐಆರ್‌ ಕೂಡ ದಾಖಲು ಮಾಡಿಕೊಂಡಿಲ್ಲವಂತೆ.

    ಇದನ್ನೂ ಓದಿ: ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌

    ಈ ಕುರಿತು ಮಾಹಿತಿ ನೀಡಿರುವ ಜೀತೇಂದ್ರ ಅವರು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಕೊನೆಯ ಪಕ್ಷ ನಮಗೆ ಮಾಹಿತಿ ನೀಡಲಿಲ್ಲ. ನಮಗೆ ವಿಷಯ ತಿಳಿದ ಮೇಲೂ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಿಲ್ಲ. ಸತ್ಯ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಕೇಳಿದರೆ ಪೊಲೀಸರು ಇದೊಂದು ಅಪಘಾತ ಅಷ್ಟೇ ಎಂದು ಹೇಳುತ್ತಿದ್ದಾರೆ. ಆದರೆ ಇದು ಉದ್ದೇಶಪೂರ್ವಕವಾಗಿ ನಡೆದಿದೆ ಎನ್ನುವುದು ನನಗೆ ಅನಿಸುತ್ತಿದೆ ಎಂದಿದ್ದಾರೆ.

    ಐಪಿಸಿ ಸೆಕ್ಷನ್ 279 (ಅತಿವೇಗದ ಚಾಲನೆ), 304-ಎ (ಬೇಜವಾಬ್ದಾರಿಯಿಂದ ಸಾವು ಆಗುವುದು) ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಕುಟುಂಬಸ್ಥರು ಬೈಕ್ ಸುದೀಕ್ಷಾ ಚಿಕ್ಕಪ್ಪ ಚಲಾಯಿಸುತ್ತಿದ್ದರು ಎಂದು ಹೇಳುತ್ತಿದ್ದಾರೆ.

    ಆದರೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಪ್ರಕಾರ ಈಕೆಯ ಅಪ್ರಾಪ್ತ ಸೋದರ ಬೈಕ್ ಓಡಿಸುತ್ತಿದ್ದ. ಈ ಬಗ್ಗೆ ಇನ್ನಷ್ಟೇ ತನಿಖೆ ಆಗಬೇಕಿದೆ.

    ಡಿ.ಜೆ ಹಳ್ಳಿ ಗಲಭೆ: ಪೊಲೀಸರ ಪರವೆಂದು ನಾಟಕವಾಡಿ ಗಲಭೆ ಸೃಷ್ಟಿಸಿದವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts