More

    ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌

    ವಾಷಿಂಗ್ಟನ್: ಫೇಸ್‌ಬುಕ್‌ನಲ್ಲಿ ಏನಾದರೂ ಪ್ರಚೋದನಾತ್ಮಕ ಹೇಳಿಕೆ, ತಪ್ಪು ಮಾಹಿತಿ, ಗಲಭೆ ಸೃಷ್ಟಿಸುವ ಸಂದೇಶಗಳನ್ನು ಹಾಕಿದೀರಿ ಜೋಕೆ.

    ಕೋಟಿಗಟ್ಟಲೆ ಬರಹಗಳು ದಿನವೊಂದಕ್ಕೆ ವಿಶ್ವಾದ್ಯಂತ ಪೋಸ್ಟ್‌ ಆಗುತ್ತಿರುವಾಗ ನಮ್ಮದೇನು ಯಾರು ನೋಡುತ್ತಾರೆ ಎಂಬ ಅಸಡ್ಡೆ ಬೇಡ. ಇದರಿಂದ ಭಾರಿ ಬೆಲೆ ತೆರಬೇಕಾಗಬಹುದು. ಇದಾಗಲೇ ಇಂಥ ಪೋಸ್ಟ್‌ಗಳ ವಿರುದ್ಧ ಕಠಿಣ ಕಾನೂನುಗಳನ್ನು ಕೂಡ ಜಾರಿ ಮಾಡಲಾಗಿದೆ.

    ಈ ನಡುವೆಯೇ ಫೇಸ್‌ಬುಕ್‌ ಭಾರಿ ಕಾರ್ಯಾಚರಣೆಗೆ ಇಳಿದಿದ್ದು, 7 ದಶಲಕ್ಷದಷ್ಟು ಪೋಸ್ಟ್‌ಗಳನ್ನು ಫೇಸ್‌ಬುಕ್‌ನಿಂದ ತೆಗೆದು ಹಾಕಿದೆ. ಈ ಬರಹಗಳ ಪೈಕಿ ಹೆಚ್ಚಿನವರು ಕರೊನಾವೈರಸ್‌ ಕುರಿತಂತೆ ತಪ್ಪು ಸಂದೇಶ ನೀಡುವ ಬರಹಗಳಾಗಿವೆ. ಈ ವೈರಸ್‌ ಹರಡುವಿಕೆ ಕುರಿತಂತೆ ಆತಂಕ ಸೃಷ್ಟಿಸುವ ಬರಹಗಳನ್ನು ತೆಗೆದುಹಾಕಲಾಗಿದೆ.

    ಇದನ್ನು ಹೊರತುಪಡಿಸಿದರೆ, ಅಸಂಬಂಧ, ಪ್ರಚೋದನಾತ್ಮಕ, ಹಿಂಸಾತ್ಮಕ ಎನಿಸುವ ಪೋಸ್ಟ್‌ಗಳನ್ನೂ ಜತೆಗೆ ಭಾಷಣಗಳನ್ನು ಕಿತ್ತು ಹಾಕಿರುವುದಾಗಿ ಫೇಸ್‌ಬುಕ್‌ ಮಾಹಿತಿ ನೀಡಿದೆ.

    ನಿನ್ನೆ ಈ ವರದಿಯನ್ನು ಬಿಡುಗಡೆ ಮಾಡಿರುವ ಫೇಸ್‌ಬುಕ್‌, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಮಾಹಿತಿಯನ್ನು ತಡೆಗಟ್ಟಲು ಬದ್ಧವಾಗಿದೆ ಮತ್ತು ಈ ದಿಕ್ಕಿನಲ್ಲಿ ನಿರಂತರ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದೆ.

    ಕರೊನಾ ವೈರಸ್‌ಗೆ ಸಂಬಂಧಪಟ್ಟಿರುವ ವರದಿ, ಮಾಹಿತಿ, ವಿಡಿಯೋ ಈ ಸಲ ಹೆಚ್ಚಾಗಿ ಕಂಡುಬಂದಿತ್ತು. ಇದನ್ನು ಹೊರತುಪಡಿಸಿದರೆ. ಫೇಸ್‌ಬುಕ್‌ ಬಳಸಿ ದ್ವೇಷವನ್ನು, ಕೋಮು ಗಲಭೆಯನ್ನು ಹರಡುವ 2.25 ಕೋಟಿ ಭಾಷಣಗಳ ಪೋಸ್ಟ್‌ ಮಾಡಲಾಗಿದ್ದು, ಅವುಗಳನ್ನೆಲ್ಲಾ ಕಿತ್ತು ಹಾಕಲಾಗಿದೆ.

    ಇದನ್ನೂ ಓದಿ: ಸಾಲ ಮಾಡಿಕೊಂಡವ ಪತ್ನಿ- ಮಕ್ಕಳನ್ನು ಕೆರೆಗೆ ನೂಕಿ ತಾನು ಪರಾರಿಯಾದ!

    ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು 87 ಲಕ್ಷ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ ಎಂಬ ಅಂಕಿ ಅಂಶವನ್ನು ಫೇಸ್‌ಬುಕ್‌ ನೀಡಿದೆ.

    ಇಂಥ ಪೋಸ್ಟ್‌ಗಳನ್ನು ಹಾಕುವವರ ಮೇಲೆ ಕಣ್ಣು ಇಡಲಾಗಿದ್ದು, ಈ ಪೋಸ್ಟ್‌ಗಳನ್ನು ಆಧಾರವಾಗಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

    ಡಿ.ಜೆ ಹಳ್ಳಿ ಗಲಭೆ: ಪೊಲೀಸರ ಪರವೆಂದು ನಾಟಕವಾಡಿ ಗಲಭೆ ಸೃಷ್ಟಿಸಿದವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts