More

    ಸಾಲ ಮಾಡಿಕೊಂಡವ ಪತ್ನಿ- ಮಕ್ಕಳನ್ನು ಕೆರೆಗೆ ನೂಕಿ ತಾನು ಪರಾರಿಯಾದ!

    ಬಳ್ಳಾರಿ: ಮೈತುಂಬ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ವ್ಯಕ್ತಿಯೊಬ್ಬ ಪತ್ನಿ ಮತ್ತು ಮಕ್ಕಳನ್ನು ಕೆರೆಗೆ ನೂಕಿ ತಾನು ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೊಟ್ಟರು ತಾಲೂಕಿನ ಮಲ್ಲನಾಯಕನಹಳ್ಳಿ ನಡೆದಿದೆ.

    ಚಿರಂಜೀವಿ ಎಂಬಾತ ಈ ಕುಕೃತ್ಯ ಎಸಗಿದ್ದು, ಪತ್ನಿ ನಂದಿನಿ ಬದುಕಿದ್ದರೆ, ಮಕ್ಕಳಿಬ್ಬರೂ ಇದುವರೆಗೆ ಪತ್ತೆಯಾಗಿಲ್ಲ. ಅವರು ಮೃತಪಟ್ಟಿರುವ ಶಂಕೆಯಿದೆ. ಅವರ ಶೋಧ ಕಾರ್ಯ ನಡೆದಿದೆ.

    ಇದನ್ನೂ ಓದಿ: ಡಿ.ಜೆ ಹಳ್ಳಿ ಗಲಭೆ: ಪೊಲೀಸರ ಪರವೆಂದು ನಾಟಕವಾಡಿ ಗಲಭೆ ಸೃಷ್ಟಿಸಿದವನ ಬಂಧನ

    ಚಿರಂಜೀವಿ ಅತಿಯಾದ ಸಾಲ ಮಾಡಿಕೊಂಡಿದ್ದ. ನಿನ್ನೆ ಸಂಬಂಧಿಕರ ಮದುವೆಗೆ ಕುಟುಂಬ ಸಮೇತನಾಗಿ ಹೋಗಿದ್ದ ಈತ ಮನೆಗೆ ಹಿಂದಿರುಗುವ ಮಾರ್ಗ ಮಧ್ಯೆ ರಾಮದುರ್ಗದ ಕೆರೆಯ ಬಳಿ ಬೈಕ್ ನಿಲ್ಲಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ಚಿರಂಜೀವಿ ಮದುವೆಯಾಗಿದ್ದ, ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಸ್ಥಳೀಯರಿಂದ ಸಿಕ್ಕಾಪಟ್ಟೆ ಸಾಲು ಮಾಡಿಕೊಂಡಿದ್ದ ಎಂದಿರುವ ಪೊಲೀಸರು ಆತನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.
    ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಡಿ.ಜೆ ಹಳ್ಳಿ ಗಲಭೆ: ಪೊಲೀಸರ ಪರವೆಂದು ನಾಟಕವಾಡಿ ಗಲಭೆ ಸೃಷ್ಟಿಸಿದವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts