More

    ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ- ನಿಮಗೂ ಪಾಲಿದೆ

    ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ- ನಿಮಗೂ ಪಾಲಿದೆನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಹತ್ತು ವರ್ಷ ಆಯಿತು. ನಮ್ಮ ತಾಯಿ ಮತ್ತೊಂದು ಮದುವೆ ಆದರು. ಅವರಿಗೆ ಈಗ ಒಂದು ಗಂಡು ಮಗುವೂ ಇದೆ. ನಮ್ಮ ತಂದೆ ಆಸ್ತಿಗಳನ್ನು ಬಿಟ್ಟು ತೀರಿಕೊಂಡಿದ್ದರು. ನಮ್ಮ ತಾಯಿ ಎಲ್ಲ ಆಸ್ತಿಗಳ ಖಾತೆಯನ್ನೂ ತನ್ನ ಹೆಸರಿಗೇ ಮಾಡಿಸಿಕೊಂಡಿದ್ದಾರೆ.

    ಈಗ ನನಗೆ ನಮ್ಮ ತಂದೆಯ ಆಸ್ತಿಗಳನ್ನುಬಿಟ್ಟು ಕೊಡು ಎಂದರೆ ಅರ್ಧ ಭಾಗ ನಿನಗೆ ಅರ್ಧ ಭಾಗ ನಮ್ಮ ತಾಯಿಯ ಮಗನಿಗೆ ಕೊಡುತ್ತೇನೆ ಎನ್ನುತ್ತಿದ್ದಾರೆ. ನಮ್ಮ ತಂದೆಯ ಆಸ್ತಿಯಲ್ಲಿ, ನಮ್ಮ ತಾಯಿಗೆ ಮತ್ತೊಬ್ಬರಿಂದ ಹುಟ್ಟಿದ ಮಗುವಿಗೆ ಆಸ್ತಿ ಏಕೆ ಹೋಗಬೇಕು? ನಮ್ಮ ತಾಯಿಯ ಮತ್ತೊಬ್ಬ ಗಂಡ ಅಷ್ಟೊಂದು ಸ್ಥಿತಿವಂತರಲ್ಲ. ಅವರಿಗೂ ಒಂದು ಆಸ್ತಿ ಇದೆ. ಅದರಲ್ಲಿ ನನಗೆ ಪಾಲು ಇಲ್ಲವಂತೆ. ಇದು ಯಾವ ನ್ಯಾಯ? ನನಗೆ ನ್ಯಾಯ ಸಿಗಲು ಏನು ಮಾಡಬೇಕು ತಿಳಿಸಿ.

    ಉತ್ತರ: ನಿಮ್ಮ ಮೃತ ತಂದೆಯ ಆಸ್ತಿಯಲ್ಲಿ ನಿಮಗೂ ನಿಮ್ಮ ತಾಯಿಗೂ ಸಮಪಾಲು ಇದೆ. ನಿಮ್ಮ ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ. ನಿಮ್ಮ ಅರ್ಧ ಭಾಗಕ್ಕೆ ದಾವೆ ಹಾಕಿ ನೀವು ಅದನ್ನು ಪಡೆಯಬಹುದು. ನಿಮ್ಮ ತಾಯಿಯ ಅರ್ಧ ಭಾಗ ಅವರು ಯಾರಿಗೆ ಬೇಕಾದರೂ ಕೊಡಬಹುದು. ಅವರ ಭಾಗವನ್ನು ಅವರು ತಮಗೆ ಮತ್ತೊಬ್ಬ ಪತಿಯಿಂದ ಹುಟ್ಟಿದ ಮಗುವಿಗೆ ಕೊಡುವುದನ್ನು ನೀವು ತಪ್ಪಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇನ್ನು, ನಿಮ್ಮ ತಾಯಿಯ ಮತ್ತೊಬ್ಬ ಪತಿಯ ಆಸ್ತಿಯಲ್ಲಿ , ನಿಮಗೆ ಯಾವ ಭಾಗವೂ ಬರುವುದಿಲ್ಲ.

    ಮದುವೆಯಾದ ಮಲಾಲಾ: ಪತಿಯ ಗುಟ್ಟು ಬಿಟ್ಟುಕೊಡದ ನೊಬೆಲ್‌ ಪುರಸ್ಕೃತೆ! ನೆಟ್ಟಿಗರೇ ಹುಡುಕಿ ತೆಗೆದರು ಜಾತಕ…

    ‘ನಾನೂ ಮುಸ್ಲಿಂ, ದೇಹ ಕೊಟ್ಟು ಉಪಕಾರ ಮಾಡಬಲ್ಲೆ’ ಎಂದು ಮಗುಕೊಟ್ಟು ಎಸ್ಕೇಪ್‌ ಆದ ಬಳ್ಳಾರಿಯ ಹಿಂದೂ ಸಬ್ ರಿಜಿಸ್ಟ್ರಾರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts