More

    ಪ್ರಧಾನಿ ವಿರುದ್ಧ ಪೋಸ್ಟರ್‌ ಅಂಟಿಸಲು ಹಣ ಪಡೆದುಕೊಂಡವರು ಅರೆಸ್ಟ್‌- ದುಡ್ಡು ಕೊಟ್ಟವರಿಗಾಗಿ ಶೋಧ!

    ನವದೆಹಲಿ: ಲಸಿಕೆಯನ್ನು ತಯಾರಿಸುವ ಪೂರ್ವದಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೆಲವು ದೇಶಗಳಿಗೆ ಭಾರತವು ಇದಾಗಲೇ ಲಸಿಕೆಯನ್ನು ರಫ್ತು ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರ ಇದಾಗಲೇ ಹಲವಾರು ಬಾರಿ ಸ್ಪಷ್ಟನೆಯನ್ನೂ ನೀಡಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆ ಬರಲು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಪೋಸ್ಟರ್‌ ಹಂಚಿಕೆ ಕಾರ್ಯ ನಿರಾತಂಕವಾಗಿ ನಡೆದಿದೆ.

    ಕೋವಿಡ್‌ ಲಸಿಕೆಯನ್ನು ವಿದೇಶಕ್ಕೆ ನೀಡಿರುವುದನ್ನು ವಿರೋಧಿಸಿ ಪ್ರಧಾನಿ ವಿರುದ್ಧ ಮಾಡಿರುವ ಟೀಕೆ ಈ ಪೋಸ್ಟರ್‌ನಲ್ಲಿದೆ. 500-1000 ರೂಪಾಯಿಗಳನ್ನು ಪಡೆದು ಪೋಸ್ಟರ್‌ ಹಂಚುತ್ತಿರುವವರ ಪೈಕಿ 17 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನ ಸಂಬಂಧ ಪ್ರಧಾನಿಯನ್ನು ಟೀಕಿಸುವ ಪೋಸ್ಟರ್ ಅಂಟಿಸಿದ ಆರೋಪ ಇವರ ಮೇಲಿದೆ.

    ಬಂಧಿತರಲ್ಲಿ ಕೆಲವರು ಇದಾಗಲೇ ತಾವು 500 ರೂಪಾಯಿಗಳನ್ನು ಪಡೆದುಕೊಂಡಿದ್ದು, ಪೋಸ್ಟರ್‌ ಹಂಚುವ ಕಾರ್ಯ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಧ್ಯವರ್ತಿಗಳ ಮೂಲಕ ಈ ಹಣ ಸಂದಾಯವಾಗಿದ್ದು, ಇದರ ಕಿಂಗ್‌ಪಿನ್‌ಗಳ ಬಗ್ಗೆ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.

    ‘ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್‌ ವಿದೇಶ್ ಕ್ಯೂ ಭೇಜ್ ದಿಯಾ (ಮೋದಿಜಿ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?)’ ಎಂಬ ಭಿತ್ತಿಪತ್ರಗಳನ್ನು ನಗರದ ಹಲವಾರು ಭಾಗಗಳಲ್ಲಿ ಅಂಟಿಸಿದ್ದರು. ಇದರಲ್ಲಿ ಕೆಲವು ಟೀಕೆಗಳನ್ನೂ ಮಾಡಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಈ ರೀತಿ ಪೋಸ್ಟರ್‌ ಅಂಟಿಸುವ ಮೂಲಕ ಜನರಿಗೆ ಲಸಿಕೆ ಕುರಿತು ಹಾಗೂ ಪ್ರಧಾನಿ ವಿರುದ್ಧ ಕೆಟ್ಟ ಸಂದೇಶ ಸಾರಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಸೂಕ್ತವಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ) ಮತ್ತು ಆಸ್ತಿ ವಿರೂಪಗೊಳಿಸುವಿಕೆ ಕಾಯ್ದೆಯ ಸೆಕ್ಷನ್ 3 ಸೇರಿದಂತೆ ಇತರ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ 25ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ.

    ಓಕೆ ಅನ್ನದಿದ್ರೆ ಇರಲ್ಲ ವಾಟ್ಸ್‌ಆ್ಯಪ್‌! ಮುಗಿದಿದೆ ಡೆಡ್‌ಲೈನ್‌, ಎಲ್ಲಾ ಆಪ್ಷನ್ಸ್‌ ಆಗಲಿವೆ ಮಾಯ

    ಗಂಡಿಗಿಂತ ಮೊದ್ಲು ಹುಡುಗಿ ಅವನ ಸಂಬಳ ನೋಡೋದ್ರಿಂದ ಇಷ್ಟೆಲ್ಲಾ ಸಮಸ್ಯೆಯಾಗ್ತಿರೋದು

    70 ಹೆಚ್ಚುವರಿ ಸಹಾಯವಾಣಿ- ಇನ್ನುಮುಂದೆ ಕರೆ ಮಾಡಿ ಕಾಯುವ ಅಗತ್ಯವಿಲ್ಲ ಎಂದ ಸಚಿವ ಲಿಂಬಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts